ಬಂಜಾರ ಸಮುದಾಯದ ಧರ್ಮ ಗುರು ಶ್ರೀ ಸಂತ ಸೇವಾಲಾಲರ ತತ್ವಗಳು
ಫೆಬ್ರವರಿ 14 ಅಂದ್ರೆ ಎಲ್ಲರ ತಲೆಯಲ್ಲಿ ಬರುವ ಮೊದಲ ವಿಚಾರ ಎಂದರೆ ಅದು ಪ್ರೇಮಿಗಳ ದಿನ/ವ್ಯಾಲೆಂಟೈನ್ಸ್ ಡೇ. ಆದರೆ ಫೆಬ್ರವರಿ 14 ಒಂದು ಸಮುದಾಯಕ್ಕೆ ಬೆಳಕು ಬಂದ ದಿನ ಎಂದು ನಿಮಗೆ ತಿಳಿದಿದೆಯೇ?
ಫೆಬ್ರವರಿ 14 ಅಂದ್ರೆ ಎಲ್ಲರ ತಲೆಯಲ್ಲಿ ಬರುವ ಮೊದಲ ವಿಚಾರ ಎಂದರೆ ಅದು ಪ್ರೇಮಿಗಳ ದಿನ/ವ್ಯಾಲೆಂಟೈನ್ಸ್ ಡೇ. ಆದರೆ ಫೆಬ್ರವರಿ 14 ಒಂದು ಸಮುದಾಯಕ್ಕೆ ಬೆಳಕು ಬಂದ ದಿನ ಎಂದು ನಿಮಗೆ ತಿಳಿದಿದೆಯೇ?
ಹೌದು..! ನಾಡೇ ತಿಳಿಯದ ಅವರಲ್ಲಿ ಸಂಸ್ಕೃತಿಯ ಅಪಾರ ಭಂಡಾರವೇ ಅಡುಗಿತ್ತು. ಕಾಡಿನಲ್ಲಿ ಜೀವನ ಸಾಗಿಸುವ ಛಲ ಅವರಲಿತ್ತು, ದೇಶ - ವಿದೇಶದಲ್ಲಿ ವ್ಯಾಪಾರ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುತ್ತ ಜೀವನ ನಡೆಸುತ್ತಿದ್ದರು, ಅದೇ ಬಂಜಾರ (ಲಮಾಣಿ, ಲಂಭಾಣಿ) ಸಮುದಾಯ.
ಅಂಧಕಾರದ ಬವಣೆಯಲ್ಲಿ ಬೆಂದು ಹೋಗಿದ್ದ ಜನಾಂಗವನ್ನು ಕತ್ತಲಿಂದ ಬೆಳಕಿನೆಡೆಗೆ, ಕಾಡಿನಿಂದ ನಾಡಿಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ, ಕರೆತರಲು 14 ಫೆಬ್ರವರಿ 1739 ರಂದು "ಶ್ರೀ ಸಂತ ಸೇವಾಲಾಲರ" ಜನನವಾಯಿತು. ಇವರು ಕರ್ನಾಟಕದ ದಾವಣಗೆರ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸುರಗೊಂಡನಕೊಪ್ಪ ಎಂಬ ಗ್ರಾಮದಲ್ಲಿ ಭೀಮ ನಾಯ್ಕ ಹಾಗೂ ಧರ್ಮಣಿ ಬಾಯಿ ಅವರ ಜೇಷ್ಠ ಪುತ್ರನಾಗಿ ಈ ದಿನ ಜನಿಸಿದರು.
ಬಂಜಾರ ಸಮುದಾಯದ ವಾಡಿಕೆಗಳ ಪ್ರಕಾರ, ಸೇವಾಲಾಲ ಅವರು ಜಗದಾಂಭ ದೇವಿಯ ವರ ಪ್ರಸಾದವಾಗಿ ಜನಿಸಿದವರು. ಸೇವಾಲಾಲರು ಸಂಪೂರ್ಣ ಬಂಜಾರ ಸಮುದಾಯವನ್ನು ಒಗ್ಗೂಡಿಸಿ, ಅವರಿಗೆ ಸುಸಜ್ಜಿತ ಸಮಾಜದ ಪರಿಕಲ್ಪನೆಯನ್ನು ತಿಳಿಸಿಕೊಟ್ಟರು, ಸೇವಾಲಾಲರು ಸಂಪೂರ್ಣ ಅಹಿಂಸಾ ಮಾರ್ಗವನ್ನು ಸಾರಿದರು ಎಂದು ಹಲವಾರು ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿಯೇ ಶ್ರೀ ಸಂತ ಸೇವಾಲಾಲರರನ್ನು ಬಂಜಾರ ಸಮುದಾಯದ ಧರ್ಮ ಗುರು ಎಂದು ಹೇಳಲಾಗುತ್ತದೆ.
ಬಂಜಾರ ಸಮುದಾಯದ ಧರ್ಮ ಗುರು ಶ್ರೀ ಸಂತ ಸೇವಾಲಾಲರ ಕೆಲವು ತತ್ವಗಳು ಈ ಕೆಳಕಂಡಂತಿವೆ:-
* ಸೇನ ಸಾಯಿ ವೇಸ್
ಜೀವ ಜನಗಾನಿನ ಸಾಯಿವೇಸ್
ಖೂಂಟಾ ಮುಂಗ್ರಿನ್ ಸಾಯಿ ವೇಸ್
ಕೊರೆ – ಗೋರೂನ ಸಾಯಿವೇಸ್.
ಕೀಡಾ ಮಕೋಡಾನ ಸಾಯಿವೇಸ್.
ಅರ್ಥ : ಮನುಷ್ಯನಿಗೆ ಮಾತ್ರವಲ್ಲದೆ ಜೀವ-ಜಂತುಗಳಿಗೆ, ಕ್ರೀಮಿ-ಕೀಟಗಳಿಗೆ ಒಳ್ಳೆದಾಗಲಿ ( ಇಲ್ಲಿ ತನ್ನ ಸ್ವಾರ್ಥಕ್ಕಿಂತ ಇಡಿ ಭೂಮಿಗೆ ಒಳ್ಳೆಯದನ್ನು ಬಯಸುತ್ತಾರೆ.)
* ”ಬೋಲಜೋ ಮತ್ತ್ ಲುಚಿ(ಲಾಟಿ) ಲಬಾಡಿ”
ಅರ್ಥ : ಸುಳ್ಳನ್ನು ಯಾರೂ ನುಡಿಯ ಬಾರದು. ಸತ್ಯ ನುಡಿಯಿರಿ ಎಂದು ಜಗತ್ತಿಗೆ ಸಾರಿದರು.
* “ಮತ ಲೋ ಜೀವ
ಕಾಡೋ ಮತ್ ಕೋಯಿ ಲೋಯಿ”
ಅರ್ಥ : ಯಾವುದೇ ಜೀವಿಯನ್ನು ಕೋಲ್ಲಬೇಡ, ಅದರ ರಕ್ತವನ್ನು ತೆಗೆಯಬೇಡ. (ಅಹಿಂಸೆಯನ್ನು ಪ್ರತಿಪಾದಿಸಿದರೂ)
* ಚೋರಿ ಮತ್ತ್ ಕರೋ
ಕರಿಯೇ ಚೋರಿ ಖಾಂಯೆ ಕೋರಿ
ಹಾತೆ ಮಾಯಿ ಹತಕಡಿ,ಪಗಮಾಯಿ ಬೇಡಿ
ಡೋರಿ ಡೋರಿ ಹಿಂಡಿಯೇ…..,
ಅರ್ಥ : ಕಳ್ಳತನ ಮಾಡಬೇಡಿ, ಕಳ್ಳತನ ಮಾಡುವವರನ್ನು ಬೇಡಿ ಹಾಕಿ ಓಡಾಡಿಸುತ್ತಾರೆ.
* ”ದಾರೂ, ಗಾಂಜಾ ಮತ್ ಪೀವೋ”
ಅರ್ಥ : ವ್ಯಸನ ಮುಕ್ತರಾಗಿ.
* “ಜೋರ್ ಜುಲೂಮ್
ಗೋರ್ ಗರೀಬ ದಾಂಡನ್ ಖಾಯೇ
ವೋರಿ ಸಾತ್ ಪೀಡೀ ಪರ ದಾಗ್ ಲಗ ಜಾಯೆ
ವಂಶ ಪರ ದೀವೋ ಕೋನಿ ರೀಯೇ.
ಅರ್ಥ : ಬಡವರಿಗೆ ಎಂದು ದಂಡ ಹಾಕಬೇಡಿ.
* ಕಾಮಾ ಕ್ರೋಧೇರಿ ಧೂಣಿ ಬಾಳೋ, ಸತ್ಯ ಧರ್ಮೆನ ಆಂಗ ಚಲಾಯೋ
ಭೂಕ ಜೇನ ಅನ್ನ ಖರಾಯೋ, ತರಸ ಜೇನ ಪಾಣಿ ಪರಾಯೋ.
ಅರ್ಥ : ತಮ್ಮ ಜೀವನದಲ್ಲಿ ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ. ಸತ್ಯ ಧರ್ಮವನ್ನು ಮುನ್ನೆಡೆಸಿ.
ಹಸಿದವರಿಗೆ ಅನ್ನ ನೀಡಿ. ಬಾಯಾರಿದವರಿಗೆ ಜಲ ಪ್ರಾಪ್ತಿಮಾಡಿ.
* ದಕ್ಯಾರೋ ದಕ್ ಕಾಡ್, ಪಾಪೀರ ಛಾತ್ತೀಪರ ಲಾತ್ ಮಾರ್.
ಸೂತೇರ ಸಪನೇಮ, ಬೇಟೇರ ಹರದೇಮ.
ಸೋನಾವಳಿ ಛಾಂಯ್ ರಕಾಡ್
ಅರಕತೇಮ ಬರಕತ್ ಕರ್.
ಅರ್ಥ : ದುಃಖದಲ್ಲಿರುವವರನ್ನು ಕಾಪಾಡು, ಪಾಪಿಗಳನ್ನು ನಾಶಪಡಿಸು .
ಈ ರೀತಿಯಾಗಿ ಶ್ರೀ ಸಂತ ಸೇವಾಲಾಲರು ತಮ್ಮ ತತ್ವಗಳನ್ನು ಸಾರಿದರು. 1806 ರಲ್ಲಿ ಶ್ರೀ ಸಂತ ಸೇವಾಲಾಲರು ತಮ್ಮ ಕೊನೆಯ ದಿನಗಳನ್ನು ಮಹಾರಾಷ್ಟ್ರದ ಪೌರಗಡದಲ್ಲಿ ಕಳೆದರು.
ಈ ಮೇಲಿನ ತತ್ವಗಳನ್ನು ಲೋಕಕ್ಕೆ ಸಾರಿದ ಮಹಾರಾಜರ 284 ನೇ ಜಯಂತಿ ಆಚರಣೆಯನ್ನು ಇಂದು ರಾಜ್ಯದಾದ್ಯಂತ ಆಚರಿಸುತ್ತಿದ್ದೇವೆ. ಆದರೆ ಎಲ್ಲಿಯವರೆಗೂ ನಾವು ಇವರ ತತ್ವಗಳನ್ನು ನಮ್ಮ ತನು ಮನದಲ್ಲಿ ಆಳವಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗ ಇಂತಹ ದೈವಪುರುಷರ ಜಯಂತಿಗಳಿಗೆ ನಿಜವಾದ ಅರ್ಥ ಬರುವುದಿಲ್ಲ. ಬಂಜಾರ ಸಮುದಾಯದವರಿಗೆ ಶ್ರೀ ಸಂತ ಸೇವಾಲಾಲರು ಜಯಂತಿಯ ಶುಭಾಶಯಗಳು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.