Barley Remedy For Wealth - ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಾರ್ಲಿಗೆ ಸಂಬಂಧಿಸದ ಈ ಉಪಾಯಗಳನ್ನು ಅನುಸರಿಸಿ
Barley Remedies - ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಗಾಗಿ ಬಾರ್ಲಿಗೆ ಸಂಬಂಧಿಸಿದ ಉಪಾಯಗಳು ತುಂಬಾ ವಿಶೇಷವಾಗಿವೆ. ಲಾಲ್ ಕಿತಾಬ್ ಪ್ರಕಾರ, ಬಾರ್ಲಿಯ ಉಪಾಯಗಳಿಂದ (Barley Remedy Money) ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಪಡೆಯಬಹುದು. ಅಷ್ಟೇ ಅಲ್ಲ ಋಣಬಾಧೆಯಿಂದ ಕೂಡ ಮುಕ್ತಿ ಸಿಗುತ್ತದೆ ಎನ್ನಲಾಗಿದೆ.
ನವದೆಹಲಿ: Remedy Of Barley - ಹಿಂದೂ ಧರ್ಮದಲ್ಲಿ ಬಾರ್ಲಿ (Barley Remedies For Wealth) ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಬಹುತೇಕ ಪೂಜೆಗಳು ಮತ್ತು ಧಾರ್ಮಿಕ ಕೆಲಸಗಳಲ್ಲಿ ಬಾರ್ಲಿ ಬಳಕೆ ಮಾಡಲಾಗುತ್ತದೆ. ಅದಿಲ್ಲದೆ ಹಲವು ಮಂಗಳ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಇದಲ್ಲದೇ ಶಾಸ್ತ್ರಗಳಲ್ಲಿ ಬಾರ್ಲಿ (Tricks Of Barley) ದಾನವನ್ನು ಚಿನ್ನದ ದಾನಕ್ಕೆ ಸಮ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಬಾರ್ಲಿಯ ಉಪಾಯಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ತಾಯಿ ಲಕ್ಷ್ಮಿ ಕೂಡ ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ. ಹಾಗಾದರೆ ಬನ್ನಿ ಬಾರ್ಲಿಗೆ ಸಂಬಂಧಿಸಿದ ಉಪಾಯಗಳ ಕುರಿತು ತಿಳಿದುಕೊಳ್ಳೋಣ.
ಇದನ್ನೂ ಓದಿ -Green Tomato: ಹಸಿರು ಟೊಮೆಟೊ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಸಾಕಷ್ಟು ಕಾಯಿಲೆಗಳಿಗೆ ರಾಮಬಾಣ
ಬಾರ್ಲಿಗೆ ಸಂಬಂಧಿಸಿದ ಉಪಾಯಗಳು (BarleyTricks)
>> ಮನೆಯಲ್ಲಿ ಸಂತೋಷ ಮತ್ತು ಶಾಂತಿಗಾಗಿ ಬಾರ್ಲಿ ಉಪಾಯಗಳು ತುಂಬಾ ವಿಶೇಷವಾಗಿದೆ. ಇದಕ್ಕಾಗಿ ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನ ಬಾರ್ಲಿಯ ಹವನ ಮಾಡಬೇಕು. ಬಾರ್ಲಿಯ ಈ ಉಪಾಯದಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಮನೆಯ ಸದಸ್ಯರ ಅನಾರೋಗ್ಯ ನಿವಾರಣೆಯಾಗುತ್ತದೆ.
>> ರಾತ್ರಿ ಮಲಗುವ ಮುನ್ನ ಒಂದು ಹಿಡಿ ಬಾರ್ಲಿಯನ್ನು ತೆಗೆದುಕೊಂಡು ಕೆಂಪು ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಇದರ ನಂತರ, ತಲೆಯ ಭಾಗದಲ್ಲಿ ಹಾಸಿಗೆಯ ಕೆಳಗೆ ಇರಿಸಿ. ಮರುದಿನ ಬೆಳಗ್ಗೆ ಅದನ್ನು ಪ್ರಾಣಿಗಳು ಮತ್ತು ಪಕ್ಷಿಗಳು ಅಥವಾ ಅಗತ್ಯವಿರುವವರಿಗೆ ವಿತರಿಸಿ. ಹೀಗೆ ಮಾಡುವುದರಿಂದ ಸಾಲದಿಂದ ಮುಕ್ತಿ ಸಿಗುತ್ತದೆ.
>> ನೀವು ರಾಹುದೋಷದಿಂದ ತೊಂದರೆಗೀಡಾಗಿದ್ದರೆ, ಶನಿವಾರದಂದು ಬಾರ್ಲಿ, ಕಲ್ಲಿದ್ದಲು, ಹಸಿ ಹಾಲು, ತೆಂಗಿನಕಾಯಿ, ಎಳ್ಳು, ತಾಮ್ರ ಮತ್ತು ಕರಿಕೆಯನ್ನು ತೆಗೆದುಕೊಂಡು ಹರಿಯುವ ನೀರಿನಲ್ಲಿ ಎಸೆಯಿರಿ. ಹೀಗೆ ಮಾಡುವುದರಿಂದ ರಾಹುವಿನ ದುಷ್ಪರಿಣಾಮಗಳು ಬೇಗನೆ ದೂರವಾಗುತ್ತವೆ. ಇದಲ್ಲದೇ ಶನಿವಾರದಂದು ಪಾರಿವಾಳಗಳಿಗೆ ಬಾರ್ಲಿ ತಿನ್ನಿಸುವುದರಿಂದ ರಾಹು-ಕೇತುಗಳ ದುಷ್ಪರಿಣಾಮ ಕಡಿಮೆಯಾಗುತ್ತದೆ. ಆದರೆ, ಈ ಉಪಾಯ ಮಾಡುವಾಗ ಯಾರೂ ಕೂಡ ನಿಮನ್ನು ನೋಡಬಾರದು ಎಂಬುದನ್ನು ಮಾತ್ರ ನೆನಪಿನಲ್ಲಿಡಿ.
ಇದನ್ನೂ ಓದಿ-Shani Shubh Yoga : ಶನಿಯ ಈ ಯೋಗವು ನಿಮ್ಮ ಜಾತಕದಲ್ಲಿದ್ದರೆ ನಿಮಗೆ ಸಿಗಲಿದೆ ಸರ್ಕಾರಿ ನೌಕರಿ!
>> ಬಾರ್ಲಿಯನ್ನು ದಾನ ಮಾಡುವುದು ಧರ್ಮಗ್ರಂಥಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ ಬಾರ್ಲಿಯನ್ನು ಚಿನ್ನದಂತೆ ಪರಿಶುದ್ಧವೆಂದು ಪರಿಗಣಿಸಲಾಗಿದೆ. ನಿರ್ಗತಿಕರಿಗೆ ಬಾರ್ಲಿ ದಾನ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.
>> ಪ್ರತಿದಿನ ವಿಷ್ಣುವಿಗೆ ಬಾರ್ಲಿ ಅರ್ಪಿಸುವುದರಿಂದ ಹಾಳಾದ ಕೆಲಸಗಳು ಸರಿಯಾಗುತ್ತವೆ. ಇದರೊಂದಿಗೆ ಮನೆಯಲ್ಲಿ ಸಮೃದ್ಧಿ ಹರಿದು ಬರುತ್ತದೆ. ಈ ಬಾರ್ಲಿಯ ಉಪಾಯ ಅನುಸರಿಸುವರು ಮುಂದಿನ ಜನ್ಮದಲ್ಲೂ ಸಿರಿವಂತರಾಗಿರುತ್ತಾರೆ ಎಂದು ಹೇಳಲಾಗಿದೆ.
ಮನೆಯಲ್ಲಿ ಯಾವುದೇ ಶುಭ ಕಾರ್ಯದಲ್ಲಿ ಬಾರ್ಲಿ ಕಾಳುಗಳನ್ನು ಕಾಳುಗಳನ್ನು ಕಲಶ ಅಥವಾ ವಿಗ್ರಹದ ಕೆಳಗೆ ಇಡುವುದರಿಂದ ಲಕ್ಷ್ಮಿ ದೇವಿಯು ಮನೆಗೆ ಆಗಮಿಸುತ್ತಾಳೆ. ಇದೇ ವೇಳೆ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ನಿರ್ಮಾಣಗೊಳ್ಳುತ್ತದೆ.
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.