ಹಿಂದೂ ಪುರಾಣದ ಪ್ರಕಾರ ತುಳಸಿಗೆ ಮಹತ್ತರವಾದ ಸ್ಥಾನಮಾನವಿದೆ. ಪ್ರತಿಯೊಬ್ಬರ ಮನೆಯ ಮುಂಭಾಗದಲ್ಲಿ ಶುಭ ಸೂಚಕವಾಗಿ ತುಳಸಿಗಿಡವನ್ನು ನೆಡಲಾಗುತ್ತದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ತುಳಸಿಗಿಡವನ್ನು ಎಲ್ಲಿ ನೆಟ್ಟರೆ ಒಳಿತು ಎಂಬುದು ನಿಮಗೆ ತಿಳಿದಿದಯೇ ಹಾಗಾದ್ರೆ ಈ ಸುದ್ದಿ ನೋಡಿ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಮಲೈಕಾ ಅರೋರಾ-ಅರ್ಜುನ್ ಕಪೂರ್ ವೆಡ್ಡಿಂಗ್‌ ಡೇಟ್‌ ಫಿಕ್ಸ್‌!?


ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಮರ ಮತ್ತು ಗಿಡಗಳಿಗೂ ವಿಭಿನ್ನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ದೋಷಗಳನ್ನು ಹೋಗಲಾಡಿಸಲು ತುಳಸಿ ಸಸ್ಯವು ತುಂಬಾ ಸಹಾಯಕವಾಗಿದೆ ಎಂದು ನಂಬಲಾಗಿದೆ. ತುಳಸಿಯನ್ನು ದೇವರಂತೆ ಪರಿಗಣಿಸಲಾಗುತ್ತದೆ. ಮಾತ್ರವಲ್ಲ ಇದನ್ನು ಔಷಧೀಯ ರೂಪದಲ್ಲಿ ಸಹ ಸ್ವೀಕರಿಸಲಾಗಿದೆ. 


ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಧನಾತ್ಮಕ ಶಕ್ತಿ ಬರುತ್ತದೆ. ಆದರೆ ಇದನ್ನು ನೆಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ತುಳಸಿ ಗಿಡವನ್ನು ನೆಡುವಾಗ ಯಾವ ವಿಶೇಷ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಯೋಣ.  


ವಿಷ್ಣುವಿನ ಆರಾಧನೆಯಲ್ಲಿ ತುಳಸಿಗಿದೆ ವಿಶೇಷ ಸ್ಥಾನಮಾನ: 
ವಿಷ್ಣುವಿನ ಆರಾಧನೆಯಲ್ಲಿ ತುಳಸಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ವಾಸ್ತು ದೋಷವಿರುವ ಮನೆಯಲ್ಲಿ ತುಳಸಿ ಗಿಡವನ್ನು ಇಡಬೇಕು. ಇದಲ್ಲದೆ,  ಶನಿ ಮತ್ತು ಮಂಗಳನ ಪ್ರಭಾವವನ್ನು ಅಥವಾ ಶನಿ-ಮಂಗಳ ದೋಷ ನಿವಾರಣೆಗಾಗಿ ತುಳಸಿ ಪರಿಣಾಮಕಾರಿ ಸಸ್ಯ ಎಂದು ನಂಬಲಾಗಿದೆ. ಇದನ್ನು ಮನೆಯ ಮುಖ್ಯ ಬಾಗಿಲಲ್ಲಿ ಮತ್ತು ಈಶಾನ್ಯದಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. 


ವಾಸ್ತು ಪ್ರಕಾರ ತುಳಸಿಯನ್ನು ಹೇಗೆ ನೆಡಬೇಕು ತಿಳಿದಿದೆಯೇ? 
ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡವನ್ನು ಈಶಾನ್ಯದಲ್ಲಿ ಇಟ್ಟು, ಬೆಳಿಗ್ಗೆ ಮತ್ತು ಸಂಜೆ ನೀರನ್ನು ಅರ್ಪಿಸಬೇಕು. ಇದರೊಂದಿಗೆ ಸಂಜೆ ತುಳಸಿಯ ಕೆಳಗೆ ಎಳ್ಳೆಣ್ಣೆಯ ದೀಪವನ್ನು ಹಚ್ಚಬೇಕು. ಇದರೊಂದಿಗೆ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ಮಂತ್ರವನ್ನೂ ಜಪಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಸಮಸ್ಯೆ ದೂರವಾಗುತ್ತದೆ. ಇದರೊಂದಿಗೆ, ಮನೆಯಲ್ಲಿ ಹಣ ಉಳಿತಾಯದ ಜೊತೆಗೆ ಸದಾ ಲಕ್ಷ್ಮೀಯ ಆಶೀರ್ವಾದ ಸಿಗಲಿದೆ ಎಂದು ಹೇಳಲಾಗುತ್ತದೆ. 


ಮನೆಯಲ್ಲಿ ಕಲಹ ಹೆಚ್ಚಿದ್ದರೆ ತುಳಸಿ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿಗೆ ನೆಡಿ. ಜೊತೆಗೆ ತುಳಸಿಯನ್ನು ನಿಯಮಿತವಾಗಿ ಪೂಜಿಸಿ. ಹೀಗೆ ಮಾಡುವುದರಿಂದ ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ. 


ಇದನ್ನು ಓದಿ: PHOTOS: ಬಿಜೆಪಿ ಸೇರ್ಪಡೆಯಾದ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ


ಅನೇಕ ಬಾರಿ, ಮನೆ ಕಟ್ಟುವಾಗ ದಿಕ್ಕಿಗೆ ಸಂಬಂಧಿಸಿದ ವಾಸ್ತು ದೋಷಗಳು ಉದ್ಭವಿಸುತ್ತವೆ. ಮನೆ ಬದಲಾಯಿಸುವುದು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆಯ ವಾಸ್ತು ದೋಷ ನಿವಾರಣೆಗೆ ತುಳಸಿ ಗಿಡವನ್ನು ಮನೆಯ ಮಾಳಿಗೆಯಲ್ಲಿ ಕುಂಡದಲ್ಲಿ ನೆಡಿ. ಇದಲ್ಲದೆ, ಯಾವುದೇ ರೀತಿಯ ವಾಸ್ತು ದೋಷವನ್ನು ತಪ್ಪಿಸಲು, ಮನೆಯ ಈಶಾನ್ಯ ಮೂಲೆಯಲ್ಲಿ ವಿವಿಧ ಕುಂಡಗಳಲ್ಲಿ 5 ತುಳಸಿ ಗಿಡಗಳನ್ನು ನೆಡಬೇಕು. ಅಲ್ಲದೆ ಇದನ್ನು ನಿಯಮಿತವಾಗಿ ಪೂಜಿಸುವುದರಿಂದ ಹೆಚ್ಚಿನ ಪ್ರಯೋಜನಗಳು ಪ್ರಾಪ್ತಿಯಾಗಲಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.