PSI Recruitment Scam: ಫಸ್ಟ್ ನೈಟ್‌ಗೂ ಬಿಡದ ಸಿಐಡಿ ಪೋಲೀಸರು..!

ಶ್ರೀಕಾಂತ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ನಿವಾಸಿ. ಈತ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎಂಬ ಮಾಹಿತಿ ಎಂದು ತಿಳಿದುಬಂದಿದೆ.

Written by - Zee Kannada News Desk | Last Updated : May 18, 2022, 05:44 PM IST
  • ಪಿಎಸ್‍ಐ ನೇಮಕಾತಿ ಅಕ್ರಮ ಸಂಬಂಧ ಮತ್ತೊಂದು ಡೀಲ್ ಕುಳ ಸಿಐಡಿ ಬಲೆಗೆ
  • ಮದುವೆಯಾದ ಕೇವಲ ನಾಲ್ಕೇ ದಿನಕ್ಕೆ ಶ್ರೀಕಾಂತ್ ಡಿ ಚೌರಿ ಸಿಐಡಿ ವಶಕ್ಕೆ
  • ಮದುವೆ, ಫಸ್ಟ್ ನೈಟ್ ಸಂಭ್ರಮದಲ್ಲಿದ್ದವನಿಗೆ ಸಿಐಡಿ ಅಧಿಕಾರಿಗಳ ಡ್ರಿಲ್
PSI Recruitment Scam: ಫಸ್ಟ್ ನೈಟ್‌ಗೂ ಬಿಡದ ಸಿಐಡಿ ಪೋಲೀಸರು..! title=
ಫಸ್ಟ್ ನೈಟ್ ಸಂಭ್ರಮದಲ್ಲಿದ್ದವನಿಗೆ ಸಿಐಡಿ ಡ್ರಿಲ್

ಬಾಗಲಕೋಟೆ: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಡೀಲ್‍ನ ಕುಳವನ್ನು ಸಿಐಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ಪಿಎಸ್‍ಐ ಅಕ್ರಮ ನೇಮಕಾತಿ ಡೀಲ್‍ನ ಲಿಂಕ್ ಬಾಗಲಕೋಟೆ ಜಿಲ್ಲೆಗೂ ತಲುಪಿರುವ ಅಂಶ ಬೆಳಕಿಗೆ ಬಂದಿದೆ.

ಫಸ್ಟ್ ನೈಟ್ ಸಂಭ್ರಮದಲ್ಲಿದ್ದವನಿಗೆ ಸಿಐಡಿ ಶಾಕ್!

ಶ್ರೀಕಾಂತ್ ಡಿ ಚೌರಿ ಎಂಬಾತ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೇ 14ರಂದು ಜಮಖಂಡಿ ನಗರದಲ್ಲಿ ಈತನ ಮದುವೆಯಾಗಿತ್ತು. ಮದುವೆಯಾಗಿ ಕೇವಲ ನಾಲ್ಕೇ ದಿನಕ್ಕೆ ಶ್ರೀ‍ಕಾಂತ್‍ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮದುವೆ, ಮೊದಲ ರಾತ್ರಿ ಸಂಭ್ರಮದಲ್ಲಿದ್ದವನಿಗೆ ಈಗ ಸಿಐಡಿ ಗ್ರಿಲ್ ಮಾಡುತ್ತಿದೆ.

ಇದನ್ನೂ ಓದಿ: ಜೆಡಿಎಸ್ ಮಿಶನ್ 123 ಅಲ್ಲ, ಅದು ಮಿಶನ್ 1+2+3!: ಬಿಜೆಪಿ ವ್ಯಂಗ್ಯ

ಶ್ರೀಕಾಂತ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ನಿವಾಸಿ. ಈತ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎಂಬ ಮಾಹಿತಿ ಎಂದು ತಿಳಿದುಬಂದಿದೆ. ಆಪ್ತ ಕಾರ್ಯದರ್ಶಿ ಅನ್ನೋ ವಿಜಿಟಿಂಗ್ ಕಾರ್ಡ್ ಪತ್ತೆಯಾಗಿದೆ. ಶ್ರೀಕಾಂತ್ ಧಾರವಾಡದ "ಇನ್ಸ್ಪೈರ್ ಇಂಡಿಯಾ" ಐಎಎಸ್ ಆ್ಯಂಡ್ ಕೆಎಎಸ್ ಕೋಚಿಂಗ್ ಸೆಂಟರ್ ನ ಮಾಜಿ ನಿರ್ದೇಶಕನಾಗಿದ್ದ. ಪಿಎಸ್‍ಐ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಹಣ ಪಡೆದು ಡೀಲ್ ಮಾಡಿರುವ ಶಂಕೆ ಹಿನ್ನೆಲೆ ಆತನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ 6 ದಿನದಿಂದ ಬೆಂಗಳೂರಿನಿಂದ ಬಂದಿದ್ದ ಆರು ಜನರ ಸಿಐಡಿ ತಂಡವು ಜಮಖಂಡಿಯಲ್ಲಿ ಬೀಡುಬಿಟ್ಟಿತ್ತು. ರಬಕವಿಬನಹಟ್ಟಿ ತಾಲೂಕಿನ ಯರಗಟ್ಟಿಯ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಶ್ರೀಕಾಂತ್‍ನನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆತನನ್ನು ಸಿಐಡಿ ಪೊಲೀಸರು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: WATCH: ಬೆಂಗಳೂರಿನ ನಡು ರಸ್ತೆಯಲ್ಲೇ ವಿದ್ಯಾರ್ಥಿನಿಯರ ಮಾರಾಮಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News