ತುಳಸಿ ಮಾಲೆ ಧರಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ, ಇಲ್ಲದಿದ್ರೆ ಭಾರೀ ನಷ್ಟ
ಜ್ಯೋತಿಷ್ಯ ಶಾಸ್ತ್ರದಲ್ಲಿ, ತುಳಸಿ ಮಾಲೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ತುಳಸಿ ಮಾಲೆ ಧಾರಣೆಯಿಂದ ವ್ಯಕ್ತಿಯು ಗ್ರಹ ದೋಷಗಳಿಂದ ಪರಿಹಾರ ಪಡೆಯಬಹುದು ಎಂದು ಸಹ ಹೇಳಲಾಗುತ್ತದೆ. ಅದೇ ಸಮಯದಲ್ಲಿ ತುಳಸಿ ಮಾಲೆ ಧರಿಸುವಾಗ ಕೆಲವು ವಿಷಯಗಳ ಬಗ್ಗೆ ಗಮನ ಹರಿಸದಿದ್ದರೆ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಸಹ ಹೇಳಲಾಗುತ್ತದೆ.
ಬೆಂಗಳೂರು: ಹಿಂದೂ ಧರ್ಮದಲ್ಲಿ ತುಳಸಿ ಮಾಲೆಯ ಮಹತ್ವವನ್ನು ಉಲ್ಲೇಖಿಸಲಾಗಿದೆ. ತುಳಸಿ ಮಾಲೆಯನ್ನು ಕುತ್ತಿಗೆಗೆ ಧರಿಸಿದರೆ, ಆಗ ಮನಸ್ಸು ಮತ್ತು ಆತ್ಮ ಎರಡರಲ್ಲೂ ಶುದ್ಧತೆ ಇರುತ್ತದೆ. ಇದರೊಂದಿಗೆ, ಮನಸ್ಸಿನಲ್ಲಿ ಸಕಾರಾತ್ಮಕ ಶಕ್ತಿಯ ಸಂವಹನವಿರುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ವಿಷ್ಣು ಪ್ರಿಯೆ ತುಳಸಿ ಗಿಡದಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆಯೂ ಇದೆ. ಹಾಗಾಗಿ, ತುಳಸಿ ಮಾಲೆ ಧಾರಣೆ ಜೊತೆಗೆ ಭಗವಾನ್ ವಿಷ್ಣುವಿನ ಮಂತ್ರವನ್ನು ಪಠಿಸುವುದರಿಂದ ಭಕ್ತರ ಇಷ್ಟಾರ್ಥಗಳು ಸಿದ್ಧಿಯಾಗಲಿದ್ದು, ಮಂಗಳಕರ ಫಲ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ನಾವು ಧರಿಸುವ ಮತ್ತು ಜಪಿಸುವ ಜಪಮಾಲೆ ಒಂದೇ ಆಗಿರಬಾರದು. ಅದರಲ್ಲೂ ತುಳಸಿ ಮಾಲೆಯನ್ನು ಕೊರಳಿನಲ್ಲಿ ಧರಿಸುವ ಮೊದಲು ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನಹರಿಸಬೇಕು. ಇಲ್ಲದಿದ್ದರೆ, ತಾಯಿ ಲಕ್ಷ್ಮೀದೇವಿ ಮುನಿಸಿಗೆ ಕಾರಣವಾಗಬಹುದು. ಇದರಿಂದ ಜೀವನದಲ್ಲಿ ನಾನಾ ರೀತಿಯ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ತುಳಸಿ ಮಾಲೆಯನ್ನು ಧರಿಸುವ ಮುನ್ನ ತಿಳಿಯಲೇಬೇಕಾದ ನಿಯಮಗಳು ಯಾವುವು ಎಂದು ತಿಳಿಯೋಣ...
ತುಳಸಿ ಮಾಲೆ ಧರಿಸುವ ಮುನ್ನ ಈ ನಿಯಮಗಳನ್ನು ತಪ್ಪದೇ ತಿಳಿಯಿರಿ:-
ನಿಮಗೆಲ್ಲರಿಗೂ ತಿಳಿದಿರುವಂತೆ ತುಳಸಿಯಲ್ಲಿ ರಾಮ ತುಳಸಿ ಮತ್ತು ಕೃಷ್ಣ ತುಳಸಿ ಎಂಬ ಎರಡು ಪ್ರಕಾರದ ತುಳಸಿ ಇವೆ. ಇವುಗಳ ಪರಿಣಾಮವೂ ಸಹ ಬೇರೆ ಬೇರೆ ಆಗಿರುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
ಇದನ್ನೂ ಓದಿ- Astro Tips: ಸೂರ್ಯ-ಗುರು ಮೈತ್ರಿಯಿಂದ ಈ 3 ರಾಶಿಯವರು 8 ದಿನಗಳ ಶ್ರೀಮಂತರಾಗುತ್ತಾರೆ!
ಗಂಗಾಜಲದಿಂದ ತೊಳೆಯಿರಿ:
ತುಳಸಿ ಮಾಲೆಯನ್ನು ಧರಿಸುವ ಮೊದಲು ಅದನ್ನು ಗಂಗಾಜಲದಿಂದ ಚೆನ್ನಾಗಿ ತೊಳೆಯಿರಿ. ಇದರ ನಂತರ, ಅದು ಒಣಗಿದ ನಂತರವೇ ಧರಿಸಿ.
ತುಳಸಿ ಮಾಲೆಯನ್ನು ನಿಮ್ಮ ಕುತ್ತಿಗೆಗೆ ಧರಿಸಲು ನಿಮಗೆ ಸಾಧ್ಯವಾಗದಿದ್ದರೆ, ಅದನ್ನು ನಿಮ್ಮ ಬಲಗೈಯಲ್ಲಿಯೂ ಧರಿಸಬಹುದು. ಆದರೆ ದಿನಚರಿಯ ಮೊದಲು ಹಾರವನ್ನು ಮರೆಯದೇ ತೆಗೆದಿಡಬೇಕು. ಇದಾದ ನಂತರ ಸ್ನಾನದ ನಂತರ ಮತ್ತೆ ಗಂಗಾಜಲದಿಂದ ತೊಳೆದು ಧರಿಸಬೇಕು.
ಕಠಿಣ ನಿಯಮಗಳ ಪಾಲನೆ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಳಸಿ ಮಾಲೆ ಧರಿಸುವಾಗ ಕೆಲವು ಕಠಿಣ ನಿಯಮಗಳನ್ನು ಪಾಲಿಸಬೇಕು. ಮಾಲೆ ಧಾರಣೆ ವೇಳೆ ವ್ಯಕ್ತಿಯು ಕೇವಲ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಮಾಂಸ-ಮದ್ಯಗಳಿಂದ ದೂರವಿರಬೇಕು.
ಇದನ್ನೂ ಓದಿ- 700 ವರ್ಷಗಳ ನಂತರ 5 ಶುಭ ರಾಜಯೋಗ; ಈ ರಾಶಿಯವರಿಗೆ ಲಾಭದ ಜೊತೆಗೆ ಸಂಪತ್ತು ಹೆಚ್ಚುತ್ತದೆ!
ತುಳಸಿ ಮಾಲೆಯೊಂದಿಗೆ ರುದ್ರಾಕ್ಷಿ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಪ್ಪಿತಪ್ಪಿಯೂ ಸಹ ತುಳಸಿ ಮಾಲೆಯೊಂದಿಗೆ ರುದ್ರಾಕ್ಷಿಯನ್ನು ಧರಿಸಲೇಬಾರದು. ಇದರಿಂದ ಜೀವನದಲ್ಲಿ ಸಂಕಷ್ಟಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ.
ನೆನಪಿಡಿ: ನೀವು ಒಮ್ಮೆ ತುಳಸಿ ಮಾಲೆ ಧಾರಣೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಅದನ್ನು ತೆಗೆಯಬಾರದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.