ನವದೆಹಲಿ : ಹಣ ಸಂಪಾದಿಸಲು ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಅಗತ್ಯವಿದೆ. ಒಬ್ಬ ವ್ಯಕ್ತಿಯು ಶ್ರೀಮಂತನಾಗಬೇಕಾದರೆ ಅನೇಕ ಪ್ರಯತ್ನಗಳನ್ನು ಮಾಡುತ್ತಾನೆ (Chanakya Niti to become rich). ಆದರೆ ಕೆಲವೊಮ್ಮೆ ವ್ಯಕ್ತಿಯು ಮಾಡುವ ಒಂದೇ ಒಂದು ತಪ್ಪಿನಿಂದ ಗಳಿಸಿದ ಎಲ್ಲಾ ಹಣವನ್ನೂ ಹಾಳು ಮಾಡಿ ಬಿಡುತ್ತಾನೆ. ಮಹಾನ್ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯ ಈ ಬಗ್ಗೆ  ಅನೇಕ ವಿಷಯಗಳನ್ನು ಹೇಳಿದ್ದಾರೆ (Chanakya niti). ಆಚಾರ್ಯ ಚಾಣಕ್ಯ ಬರೆದ ನೀತಿ ಶಾಸ್ತ್ರದಲ್ಲಿ,  ಶ್ರೀಮಂತ ಕುಬೇರ ಕೂಡಾ ತಾನು ಮಾಡುವ ತಪ್ಪಿನಿಂದ ಹೇಗೆ ಕಡು ಬಡತನ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಹೇಳಿದ್ದಾನೆ. 


COMMERCIAL BREAK
SCROLL TO CONTINUE READING

ಖರ್ಚು ಮಾಡದ ಹಣ ನಿಂತ ನೀರಂತೆ : 
ಖರ್ಚು ಮಾಡದ ಹಣ ನಿಂತ ನೀರಿನಂತೆ ಕೊಳೆಯುತ್ತದೆ ಎನ್ನುತ್ತಾರೆ ಚಾಣಕ್ಯ (Chanakya Niti). ಸರಿಯಾದ ಕೆಲಸಗಳಲ್ಲಿ ಹಣವನ್ನು ಖರ್ಚು ಮಾಡಿದಾಗ ಮಾತ್ರ ಹಣವು ಉಪಯುಕ್ತವಾಗಿರುತ್ತದೆ. ಹಾಗಾಗದಿದ್ದಲ್ಲಿ ಶ್ರೀಮಂತರೂ ಕೂಡ ಬಡವರಂತೆ ಜೀವನ ನಡೆಸಲು ಆರಂಭಿಸುತ್ತಾರೆ. 


ಇದನ್ನೂ ಓದಿ : Bad Luck Sign: ಈ ಅಭ್ಯಾಸಗಳಿಂದ ಜೀವನದಲ್ಲಿ ಎದುರಾಗುತ್ತೆ ಸಂಕಷ್ಟ!


ಹಣ 3 ವೇಗಗಳನ್ನು ಹೊಂದಿದೆ :
ಆಚಾರ್ಯ ಚಾಣಕ್ಯ ಹೇಳುವಂತೆ ಹಣದ 3 ಚಲನೆಗಳಿವೆ (Chanakya niti) .  ತಿನ್ನುವುದು, ದಾನ ನೀಡುವುದು ಮತ್ತು ನಾಶ ಮಾಡುವುದು. ಹಣವನ್ನು ದಾನ ,ಮಾಡದಿದ್ದಲ್ಲಿ,  ಅದನ್ನು ಸರಿಯಾಗಿ ಬಳಸದಿದ್ದರೆ, ಆ ಹಣ ನಾಶವಾಗುತ್ತದೆ. ಆದ್ದರಿಂದ, ಯಾವಾಗಲೂ ಶ್ರೀಮಂತರಾಗಿ ಉಳಿಯುವ ಬಯಕೆ ಇದ್ದರೆ, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ.  ಬಡವರಿಗೆ,  ಧಾರ್ಮಿಕ ಕಾರ್ಯಗಳಿಗೆ ಹಣವನ್ನು ದಾನ ಮಾಡಿ (Chanakya Niti for success).  


ಮತ್ತೊಂದೆಡೆ, ಹಣವನ್ನು ತಿನ್ನುವುದು ಎಂದರೆ ಆಹಾರ ಧಾನ್ಯಗಳು ಅಥವಾ ಆಹಾರವನ್ನು ಖರೀದಿಸುವುದು. ಸರಿಯಾದ ಬಟ್ಟೆಗಳನ್ನು ಖರೀದಿಸುವುದು, ಶಿಕ್ಷಣ, ಆರೋಗ್ಯ ಮತ್ತು ಉತ್ತಮ ಜೀವನಕ್ಕಾಗಿ ಹಣವನ್ನು ಖರ್ಚು ಮಾಡುವುದು (Chanakya Niti to become rich). ಇದನ್ನೂ ಬಿಟ್ಟು ಅನಾವಶ್ಯಕ ಕಾರಣಗಳಿಗಾಗಿ, ಕೆಟ್ಟ ಅಭ್ಯಾಸಗಳಿಗಾಗಿ ಹಣವನ್ನು ಖರ್ಚು ಮಾಡಿದರೆ, ಲಕ್ಷ್ಮೀ ದೇವಿ (Godess Lakshmi)ಕೋಪಗೊಳ್ಳುತ್ತಾಳೆ. ಲಕ್ಷ್ಮೀ ಕೋಪಗೊಂಡರೆ ನಂತರ ಆ ಮನೆಯಲ್ಲಿ ಉಳಿಯುವುದೇ ಇಲ್ಲ.  


ಇದನ್ನೂ ಓದಿ : Sri Anjaneya ನ 8 ಸಿದ್ಧಿಗಳು ಯಾವುದು? ಈ ಕಾರಣದಿಂದ ಹನುಮನಿಗೆ ಪವನಪುತ್ರ ಎಂದು ಕರೆಯಲಾಗುತ್ತದೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ