Benefits of Curry Leaves: ಆಹಾರದ ರುಚಿ ಹೆಚ್ಚಿಸಲು ನಾವು ಕರಿಬೇವನ್ನು ಬಳಸುತ್ತೇವೆ. ಕರಿಬೇಕು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ ಆಗಿದೆ. ಕರಿಬೇವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಮತ್ತು ರಕ್ತಹೀನತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕವಿದೆ. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು (Curry Leaves) ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದಲ್ಲದೇ, ಕರಿಬೇವಿನ ಎಲೆಗಳು ತೂಕ ಇಳಿಸುವಲ್ಲಿ ಸಹ ಸಹಾಯ ಮಾಡುತ್ತವೆ. ಈ ಸುದ್ದಿಯಲ್ಲಿ, ನಾವು ನಿಮಗೆ ಕರಿಬೇವಿನ ಎಲೆಗಳನ್ನು ಸೇವಿಸುವ ವಿಧಾನ ಮತ್ತು ಅದು ತೂಕವನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. 


COMMERCIAL BREAK
SCROLL TO CONTINUE READING

ಕರಿಬೇವಿನ ಎಲೆಗಳಲ್ಲಿರುವ ಪೋಷಕಾಂಶಗಳು:
ಕರಿಬೇವಿನ ಎಲೆಗಳು ಔಷಧೀಯ ಗುಣಗಳಿಂದ (Curry Leaves Benefits) ಸಮೃದ್ಧವಾಗಿವೆ. ಅವು ನಮ್ಮ ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯವಾದ ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಬಿ 1, ಬಿ 2, ಸಿ ಮುಂತಾದ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದರ ಹೊರತಾಗಿ, ಆಂಟಿ ಆಕ್ಸಿಡೆಂಟ್, ಮಧುಮೇಹ-ವಿರೋಧಿ, ಸೂಕ್ಷ್ಮಜೀವಿಯ ವಿರೋಧಿ ಗುಣಗಳು ಸಹ ಇದರಲ್ಲಿ ಕಂಡುಬರುತ್ತವೆ. ಈ ಎಲ್ಲಾ ಅಂಶಗಳನ್ನು ಆರೋಗ್ಯಕ್ಕೆ ಅಗತ್ಯವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ- Weight Loss Tips: Rice ಅನ್ನು ಈ ರೀತಿ ಸೇವಿಸಿದರೆ ಕಡಿಮೆಯಾಗುತ್ತೆ ತೂಕ


ತೂಕ ನಷ್ಟಕ್ಕೆ ಕರಿಬೇವಿನ ಎಲೆಗಳು ಹೇಗೆ ಸಹಾಯ ಮಾಡುತ್ತವೆ:
ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಕರಿಬೇವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ, ಅವು ದೇಹದಿಂದ ಅಧಿಕ ಕೊಬ್ಬನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ ಚಯಾಪಚಯವನ್ನು ಹೆಚ್ಚಿಸುವ ಮೂಲಕ ತೂಕವನ್ನು ಕಡಿಮೆ (Curry Leaves For Weight Loss) ಮಾಡಲು ಸಹಾಯ ಮಾಡುತ್ತದೆ. ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ಜಗಿಯುವುದು ಅಥವಾ ತಿನ್ನುವುದರಿಂದ ದೇಹದಿಂದ ಹಾನಿಕಾರಕ ಜೀವಾಣುಗಳನ್ನು ಹೊರಹಾಕುವುದಲ್ಲದೆ ಕ್ಯಾಲೊರಿಗಳನ್ನು ಸುಡುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ತಿಳಿದುಬಂದಿದೆ.


ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಕರಿಬೇವಿನ ಎಲೆಗಳನ್ನು ಈ ರೀತಿ ಬಳಸಿ:
1. ನಿಮ್ಮ ಭಕ್ಷ್ಯಗಳಿಗೆ ಕರಿಬೇವಿನ ಎಲೆಗಳನ್ನು ಸೇರಿಸಿ.
2. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.
3. ಕರಿಬೇವಿನ ಜ್ಯೂಸ್ ತಯಾರಿಸಿ ಕೂಡ ಸೇವಿಸಬಹುದು.


ಇದನ್ನೂ ಓದಿ- Weight Loss Tips: ರಾತ್ರಿ ಮಲಗುವ ಮುನ್ನ ಈ 3 ವಸ್ತುಗಳನ್ನು ಸೇವಿಸಿ, ತೂಕ ಇಳಿಸಿ


ಕರಿಬೇವಿನ ಎಲೆಗಳನ್ನು ಹೀಗೂ ಸೇವಿಸಬಹುದು:
>> ಸುಮಾರು 10-20 ಕರಿಬೇವಿನ ಎಲೆಗಳನ್ನು (Curry Leaves) ತೆಗೆದುಕೊಂಡು ನೀರಿನಲ್ಲಿ ಕುದಿಸಿ. 
>> ಕೆಲವು ನಿಮಿಷಗಳ ನಂತರ, ಎಲೆಗಳನ್ನು ತೆಗೆಯಲು ನೀರನ್ನು ಸೋಸಿಕೊಳ್ಳಿ. 
>> ರುಚಿಯನ್ನು ಹೆಚ್ಚಿಸಲು, ನಿಮಗೆ ಅಗತ್ಯವಿದ್ದರೆ ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ. 
>> ಈ ಕಷಾಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊದಲು ಕುಡಿಯಿರಿ. 
>> ಉತ್ತಮ ಆಹಾರ ಕ್ರಮವನ್ನು ಅನುಸರಿಸಿ ಮತ್ತು ನಿಯಮಿತವಾದ ವ್ಯಾಯಾಮಗಳನ್ನು ಮಾಡಿ.


ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.