Weight Loss Tips: Rice ಅನ್ನು ಈ ರೀತಿ ಸೇವಿಸಿದರೆ ಕಡಿಮೆಯಾಗುತ್ತೆ ತೂಕ

Healthy lifestyle Kitchen Tips: ಅಕ್ಕಿಯಲ್ಲಿ ಬಹಳಷ್ಟು ಪೋಷಕಾಂಶಗಳಿವೆ. ಅನೇಕ ಜನರಿಗೆ ಇದನ್ನು ತಿನ್ನಲು ಸರಿಯಾದ ಮಾರ್ಗ ತಿಳಿದಿಲ್ಲದಿರಬಹುದು. ತೂಕ ನಷ್ಟಕ್ಕೆ ಬಿಳಿ ಅಕ್ಕಿಯನ್ನು ಕೂಡ ಬಳಸಬಹುದು. ಅಕ್ಕಿ ಬಳಸಿ ತೂಕ ಕಳೆದುಕೊಳ್ಳಲು ಇಲ್ಲಿದೆ ಕೆಲವು ಸರಳ ಸಲಹೆಗಳು...  

Written by - Yashaswini V | Last Updated : Aug 30, 2021, 01:01 PM IST
  • ಈ ಉತ್ತಮ ಅಡುಗೆ ಸಲಹೆಗಳು ತುಂಬಾ ಉಪಯುಕ್ತವಾಗಿವೆ
  • ಆರೋಗ್ಯ ತಜ್ಞರು ತೂಕ ಕಡಿಮೆ ಮಾಡಲು ಕಡಿಮೆ ಕ್ಯಾಲೋರಿ ಮತ್ತು ಕಡಿಮೆ ಕೊಬ್ಬಿನ ಆಹಾರಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ
  • ಇಂತಹ ಆಹಾರಗಳಲ್ಲಿ ಅಕ್ಕಿ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ
Weight Loss Tips: Rice ಅನ್ನು ಈ ರೀತಿ ಸೇವಿಸಿದರೆ ಕಡಿಮೆಯಾಗುತ್ತೆ ತೂಕ title=
Weight Loss With Rice

ಬೆಂಗಳೂರು:  ತೂಕ ನಷ್ಟದ ವಿಷಯಕ್ಕೆ ಬಂದರೆ ಸಾಮಾನ್ಯವಾಗಿ ಬಹುತೇಕ ಜನರು  ಅಕ್ಕಿ ಮತ್ತು ಸಕ್ಕರೆಯನ್ನು ತ್ಯಜಿಸಲು ಶಿಫಾರಸು ಮಾಡುತ್ತಾರೆ. ಇದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಬಿಳಿ ಅನ್ನವನ್ನು ತಿನ್ನುವುದರಿಂದ ತೂಕವನ್ನು ನಿಯಂತ್ರಿಸಬಹುದು ಎಂದು ಹೇಳಿದರೆ ಇದು ವಿಚಿತ್ರ ಎಂದೆನಿಸುವುದರ ಜೊತೆಗೆ ಸುಲಭವಾಗಿ ಯಾರೂ ಕೂಡ ನಂಬುವುದಿಲ್ಲ. ನಿಮ್ಮ ನೆಚ್ಚಿನ ಬಿಳಿ ಅನ್ನವು ನಿಮಗೆ ತೂಕ ಇಳಿಸುವಲ್ಲಿ ಸಹ ಸಹಾಯ ಮಾಡುತ್ತದೆ ಎಂದು ಸಂಶೋಧಕರು ನಂಬಿದ್ದಾರೆ. ಆದರೆ ನೀವು ಕೆಲವು ಪ್ರಮುಖ ಸಲಹೆಗಳನ್ನು ಅನುಸರಿಸಿದಾಗ ಮಾತ್ರ ಇದು ಸಾಧ್ಯ.

ತೂಕ ನಷ್ಟಕ್ಕೆ ಅಕ್ಕಿ!
ವಾಸ್ತವವಾಗಿ, ತೂಕ ಇಳಿಸಿಕೊಳ್ಳಲು (Weight Loss) ಬಯಸುವವರ ಆಹಾರ ಪಟ್ಟಿಯಿಂದ ಅಕ್ಕಿ ಸದಾ ಹೊರಗಿರುತ್ತದೆ. ಏಕೆಂದರೆ ಇದರ ಹೆಚ್ಚಿನ ಕ್ಯಾಲೋರಿ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದಾಗ್ಯೂ, ಅಕ್ಕಿಯನ್ನು ಸರಿಯಾದ ರೀತಿಯಲ್ಲಿ ತಿನ್ನುವುದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಹೇಳಲಾಗಿದೆ. ತೂಕ ನಷ್ಟಕ್ಕೆ ಬಿಳಿ ಅಕ್ಕಿಯನ್ನು ಹೇಗೆ ಬಳಸಬಹುದು ಎಂದು ತಿಳಿಯೋಣ...

ಇದನ್ನೂ ಓದಿ- Weight Loss Tips: ರಾತ್ರಿ ಮಲಗುವ ಮುನ್ನ ಈ 3 ವಸ್ತುಗಳನ್ನು ಸೇವಿಸಿ, ತೂಕ ಇಳಿಸಿ

ತಜ್ಞರ ಸಲಹೆ:
ಪೌಷ್ಟಿಕತಜ್ಞರು ಮತ್ತು ಆರೋಗ್ಯ ತಜ್ಞರು ತೂಕ ಕಡಿಮೆ ಮಾಡಲು ಕಡಿಮೆ ಕ್ಯಾಲೋರಿ ಮತ್ತು ಕಡಿಮೆ ಕೊಬ್ಬಿನ ಆಹಾರಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಇಂತಹ ಆಹಾರಗಳಲ್ಲಿ ಅಕ್ಕಿ (Rice) ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ತಜ್ಞರ ಪ್ರಕಾರ, ಅಕ್ಕಿಯಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇದ್ದು, ಇದು ಸುಲಭವಾಗಿ ಜೀರ್ಣವಾಗುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ. ಬಿಳಿ ಅಕ್ಕಿಯಲ್ಲಿ ವಿಟಮಿನ್, ಖನಿಜಾಂಶ, ವಿಟಮಿನ್ ಬಿ ಸೇರಿದಂತೆ ಹಲವು ಪೋಷಕಾಂಶಗಳಿವೆ. ಆದಾಗ್ಯೂ, ನಿತ್ಯ ಅತಿಯಾಗಿ ಅನ್ನವನ್ನು ಸೇವಿಸಿದರೆ, ಅದು ತೂಕವನ್ನು ಹೆಚ್ಚಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಇದನ್ನೂ ಓದಿ- Weight Loss With Chocolate: ಪ್ರತಿದಿನ ಈ ಸಮಯದಲ್ಲಿ ಚಾಕೊಲೇಟ್ ತಿನ್ನುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಿ!

ಈ ವಿಷಯಗಳನ್ನು ನೆನಪಿನಲ್ಲಿಡಿ:
ಮೊದಲು ನೀವು ಅನ್ನ ಮಾಡುವ ವಿಧಾನವನ್ನು ಬದಲಾಯಿಸಬೇಕು. ಇದಕ್ಕಾಗಿ, ನೀವು ಅಕ್ಕಿಯಿಂದ ಹೆಚ್ಚುವರಿ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊರತೆಗೆಯಲು ಕಲಿಯಬೇಕು. ಬಿಳಿ ಅಕ್ಕಿಯನ್ನು ಸರಿಯಾಗಿ ಬೇಯಿಸುವುದು ಇದಕ್ಕೆ ಪರಿಹಾರವಾಗಿದೆ. ನೀವು ಅಕ್ಕಿಯನ್ನು ಕೆಲವು ಗಂಟೆಗಳ ಕಾಲ ಮೊದಲೇ ನೆನೆಸಿ, ಕುದಿಸಿ ಮತ್ತು ಬಳಿಕ ಅದರ ನೀರನ್ನು ಬಸಿಯಬಹುದು. ಈ ರೀತಿ ಅಕ್ಕಿ ಬಸಿದು ತಯಾರಿಸಿದ ಅನ್ನ ಸೇವಿಸುವುದರಿಂದ ತೂಕ ಹೆಚ್ಚಾಗುವುದಿಲ್ಲ.

ಅನ್ನ ಮಾಡುವಾಗ ತುಪ್ಪ ಅಥವಾ ಯಾವುದೇ ರೀತಿಯ ಎಣ್ಣೆಯನ್ನು ಬಳಸಬೇಡಿ. ಏಕೆಂದರೆ ಇದನ್ನು ಮಾಡುವುದರಿಂದ ಅದರ ಕ್ಯಾಲೋರಿಗಳು ಮತ್ತಷ್ಟು ಹೆಚ್ಚಾಗುತ್ತವೆ. ಇದರ ನಂತರ ನೀವು ಅಕ್ಕಿಯ ಪ್ರಮಾಣಕ್ಕೂ ಗಮನ ಕೊಡಬೇಕು. ಅಂದರೆ, ನೀವು ಯಾವಾಗಲೂ ಬಿಳಿ ಅಕ್ಕಿಯನ್ನು ಸಣ್ಣ ಪ್ರಮಾಣದಲ್ಲಿ ತಿನ್ನಬೇಕು. ಬಹಳ ಮುಖ್ಯವಾಗಿ ಅನ್ನದೊಂದಿಗೆ ಬೇರೆ ಯಾವುದೇ ರೀತಿಯ ಕಾರ್ಬೋಹೈಡ್ರೇಟ್ ಅಥವಾ ಕೊಬ್ಬಿನ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.

(ಸೂಚನೆ- ಈ ಮಾಹಿತಿಯು ಪೌಷ್ಟಿಕತಜ್ಞರು ಮತ್ತು ಆರೋಗ್ಯ ತಜ್ಞರ ಸಲಹೆಯನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News