Benefits of Fennel Water: ನೀವೂ ಸಹ ಸ್ಥೂಲಕಾಯದಿಂದ ಬಳಲುತ್ತಿದ್ದರೆ ಈ ಸುದ್ದಿಯು ನಿಮಗೆ ಸಹಾಯ ಮಾಡಬಹುದು. ಈ ಸುದ್ದಿಯಲ್ಲಿ, ನಾವು ನಿಮಗೆ ಫೆನ್ನೆಲ್ ನೀರಿನ ಅಂದರೆ ಸೋಂಪಿನ ನೀರಿನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ತೂಕ ಕಡಿಮೆ ಮಾಡಲು ಅದರಲ್ಲೂ ಮುಖ್ಯವಾಗಿ ಹೊಟ್ಟೆಯ ಸುತ್ತಲಿನ ಬೊಜ್ಜನ್ನು ಕರಗಿಸಲು ಸೋಂಪು/ಫೆನ್ನೆಲ್ ಬಹಳ ಪ್ರಯೋಜನಕಾರಿಯಾಗಿದೆ. ಹಸಿರು ಫೆನ್ನೆಲ್ ಬೀಜಗಳ ಈ ಸಣ್ಣ ಧಾನ್ಯಗಳು ಔಷಧೀಯ ಗುಣಗಳಿಂದ ತುಂಬಿವೆ ಮತ್ತು ಅವು  ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದರೆ ನೀವು ಖಂಡಿತವಾಗಿಯೂ ದಿನನಿತ್ಯ ಅದನ್ನು ಬಳಸುತ್ತೀರಿ. ತ್ರಾಣವನ್ನು ಹೆಚ್ಚಿಸಲು ಫೆನ್ನೆಲ್ / ಸೋಂಪನ್ನು ಸಹ ಬಳಸಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ, ನೀವು ಅನೇಕ ರೋಗಗಳಿಂದ ದೂರವಿರಬಹುದು ಎಂದೂ ಕೂಡ ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಫೆನ್ನೆಲ್/ಸೋಂಪಿನಲ್ಲಿ ಕಂಡು ಬರುವ ಪೋಷಕಾಂಶಗಳು (Nutrients found in fennel) : 
ಫೆನ್ನೆಲ್/ಸೋಂಪು ಪೊಟ್ಯಾಸಿಯಮ್, ಮ್ಯಾಂಗನೀಸ್, ಸತು, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳಿಂದ ಸಮೃದ್ಧವಾಗಿದೆ. ಫೆನ್ನೆಲ್/ಸೋಂಪನ್ನು ತರಕಾರಿಗಳು ಅಥವಾ ಕರಿಗಳಿಗೆ ಸೇರಿಸುವ ಬದಲು ಅದನ್ನು ಹಾಗೆಯೇ ಸೇವಿಸುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ಅದರಲ್ಲೂ ನೀವು ಫೆನ್ನೆಲ್ ಸೀಡ್ಸ್ ನೀರನ್ನು (Fennel Seeds Water) ಕುಡಿದರೆ, ಅದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಬಹುದು. 


ಇದನ್ನೂ ಓದಿ- Weight Loss Tips: Rice ಅನ್ನು ಈ ರೀತಿ ಸೇವಿಸಿದರೆ ಕಡಿಮೆಯಾಗುತ್ತೆ ತೂಕ


ಫೆನ್ನೆಲ್ ವಾಟರ್ ಅನ್ನು ಈ ರೀತಿ ತಯಾರಿಸಿ  (How to make saunf water) :-


ಫೆನ್ನೆಲ್ ವಾಟರ್ ತಯಾರಿಸಲು ಬೇಕಾಗುವ ಪದಾರ್ಥಗಳು:
* 1 ಗ್ಲಾಸ್ ನೀರು
* 1 ಟೀ ಚಮಚ ಫೆನ್ನೆಲ್


ಫೆನ್ನೆಲ್ ವಾಟರ್ ತಯಾರಿಸುವ ವಿಧಾನ:-
>> ಒಂದು ಲೋಟ ನೀರು ತೆಗೆದುಕೊಂಡು ಅದಕ್ಕೆ 1 ಟೀಸ್ಪೂನ್ ಫೆನ್ನೆಲ್ ಬೀಜಗಳನ್ನು ಸೇರಿಸಿ.
>> ಈ ಫೆನ್ನೆಲ್ ಅನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ.
>> ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಫೆನ್ನೆಲ್ ನ ಈ ನೀರನ್ನು ಸೇವಿಸಿ.
>> ನಿಮಗೆ ಬೇಕಾದರೆ, ನೀರನ್ನು ಫಿಲ್ಟರ್ ಮಾಡಿದ ನಂತರ ಅದನ್ನು ಕುಡಿಯಿರಿ ಮತ್ತು ಫೆನ್ನೆಲ್ ಅನ್ನು ಅಗಿಯಿರಿ ಮತ್ತು ತಿನ್ನಿರಿ.


ಫೆನ್ನೆಲ್ ನೀರಿನ ಅದ್ಭುತ ಪ್ರಯೋಜನಗಳು  (Amazing benefits of fennel water):-
1. ಫೆನ್ನೆಲ್ ವಾಟರ್ ತೂಕವನ್ನು ಕಡಿಮೆ ಮಾಡಲು ಸಹಾಯಕ:

ಪ್ರಸಿದ್ಧ ಆಯುರ್ವೇದ ವೈದ್ಯ ಅಬರ ಮುಲ್ತಾನಿ ಅವರ ಪ್ರಕಾರ, ಫೆನ್ನೆಲ್ ವಾಟರ್ ತೂಕ ಮತ್ತು ಕೊಬ್ಬು ಎರಡನ್ನೂ ಕಡಿಮೆ ಮಾಡಲು (Fennel Seed Water For Weight Loss) ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ. ಫೆನ್ನೆಲ್ ವಾಟರ್ ಚಯಾಪಚಯವನ್ನು ಹೆಚ್ಚಿಸುವುದರಿಂದ, ನಿಮ್ಮ ದೇಹವು ಹೆಚ್ಚಿನ ಕೊಬ್ಬನ್ನು ಸುಡಲು ಸಾಧ್ಯವಾಗುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುವ ಮೂಲಕ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಈಗಾಗಲೇ ಹೇಳಿದಂತೆ, ಫೆನ್ನೆಲ್ ನೀರು ಮೂತ್ರವರ್ಧಕವಾಗಿದೆ, ಆದ್ದರಿಂದ ಈ ನೀರನ್ನು ಕುಡಿಯುವುದರಿಂದ ಮೂತ್ರದ ಹರಿವು ಹೆಚ್ಚಾಗುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ತೂಕ ನಷ್ಟಕ್ಕೆ ಕೊಡುಗೆ ನೀಡುತ್ತದೆ.


2. ಪಿರಿಯಡ್ಸ್ ನೋವನ್ನು ಕಡಿಮೆ ಮಾಡಲು:
ಅನೇಕ ಮಹಿಳೆಯರು ಪಿರಿಯಡ್ಸ್ (Periods) ಸಮಯದಲ್ಲಿ ತೀವ್ರ ನೋವು ಮತ್ತು ಸೆಳೆತದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ನೀವು ಫೆನ್ನೆಲ್ ನೀರನ್ನು ಕುಡಿದರೆ, ಮುಟ್ಟಿನ ಕಾರಣದಿಂದಾಗಿ ಉಂಟಾಗುವ ಹೊಟ್ಟೆ ನೋವಿನಿಂದಲೂ ಪರಿಹಾರ ಪಡೆಯಬಹುದು. ಅನಿಯಮಿತ ಪಿರಿಯಡ್ಸ್ ಸಮಸ್ಯೆ ಕೂಡ ಕ್ರಮೇಣ ದೂರವಾಗುತ್ತದೆ.


ಇದನ್ನೂ ಓದಿ- 


3. ಫೆನ್ನೆಲ್ ನೀರು ರಕ್ತವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ:
ಫೆನ್ನೆಲ್ ನೀರು (Fennel Water) ರಕ್ತವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದು ಮೂತ್ರವರ್ಧಕವಾಗಿದೆ. ಇದರ ಜೊತೆಯಲ್ಲಿ, ಇದರಲ್ಲಿ ಉತ್ತಮ ಪ್ರಮಾಣದ ಫೈಬರ್ ಕೂಡ ಕಂಡುಬರುತ್ತದೆ, ಇದರಿಂದಾಗಿ ದೇಹದಲ್ಲಿ ಸಂಗ್ರಹವಾಗಿರುವ ಜೀವಾಣು ಮತ್ತು ಕಲ್ಮಶಗಳನ್ನು ಹೊರಹಾಕುವ ಮೂಲಕ ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಈ ರೀತಿ ಫೆನ್ನೆಲ್ ನೀರನ್ನು ಕುಡಿಯುವುದರಿಂದ, ನಿಮ್ಮ ರಕ್ತವೂ ಶುದ್ಧವಾಗುತ್ತದೆ. 


4. ಕಣ್ಣಿನ ದೃಷ್ಟಿಗೆ:
ಉಪಯುಕ್ತವಾದ ಫೆನ್ನೆಲ್ ನೀರಿನಲ್ಲಿ ವಿಟಮಿನ್ ಎ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಹಲವು ರೀತಿಯ ಪೋಷಕಾಂಶಗಳಿವೆ, ಇದು ದೃಷ್ಟಿ ಹೆಚ್ಚಿಸುವುದರ ಜೊತೆಗೆ ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ ಹಾಗೂ ವಯಸ್ಸಾದಾಗ ಕಣ್ಣಿನ ಪೊರೆ ತಡೆಯಲು ಸಹಾಯ ಮಾಡುತ್ತದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.