ನವದೆಹಲಿ: ವಾಸ್ತು ಶಾಸ್ತ್ರದ ಪ್ರಕಾರ, ಸಣ್ಣ ವಿಷಯಗಳು ನಿಮ್ಮ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಆನೆಗೆ ವಿಭಿನ್ನ ಪ್ರಾಮುಖ್ಯತೆ ನೀಡಲಾಗಿದೆ. ಆನೆ ಪವಿತ್ರ ಪ್ರಾಣಿಯಲ್ಲದೆ, ಇದನ್ನು ಅನೇಕ ಶುಭ ವಸ್ತುಗಳ ಸಂಕೇತವಾಗಿಯೂ ಪರಿಗಣಿಸಲಾಗಿದೆ. ಆನೆ ಶಕ್ತಿ, ವಯಸ್ಸು, ನಿಷ್ಠೆ, ಜ್ಞಾನ ಇತ್ಯಾದಿಗಳ ಸಂಕೇತವಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Flat ಖರೀದಿಸಬೇಕೆ? ಮೊದಲು ಈ ಸಂಗತಿಗಳನ್ನು ಗಮನದಲ್ಲಿಟ್ಟು ವಿಚಾರಿಸಿಕೊಳ್ಳಿ


ಹಿಂದೂ ಧರ್ಮದ ಪ್ರಕಾರ, ಆನೆಯನ್ನು ಗಣೇಶ ದೇವರ ಸಂಕೇತವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲಿ ಬೆಳ್ಳಿ ಆನೆಯನ್ನು ಇಟ್ಟುಕೊಂಡರೆ ನಗದು ಕೊರತೆ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ಮನೆಯಲ್ಲಿ ಸಂತೋಷವೂ ನೆಲೆಗೊಳ್ಳಳಿದೆ. ಬೆಳ್ಳಿ ಆನೆಗೆ ಸಂಬಂಧಿಸಿದ ವಾಸ್ತು ಸಲಹೆಗಳನ್ನು (Vastu Tips) ತಿಳಿಯಿರಿ.


ಇದನ್ನು ಓದಿ- Vastu Tips: ಮನೆಯ ಮುಖ್ಯದ್ವಾರದ ಮೇಲಿರಲಿ ಈ 5 ಸಂಗತಿಗಳು, ಭಾಗ್ಯ ಹೊಳೆಯಲಿದೆ


ಶ್ರೀ ಗಣೇಶನ ಪ್ರತೀಕ ಆನೆ
ಭಾರತೀಯ ಸಂಸ್ಕೃತಿಯಲ್ಲಿ ಇಂತಹ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ, ಇದನ್ನು ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಆನೆಯನ್ನು ಶ್ರೀ ಗಣೇಶನ ಸಂಕೇತವೆಂದು ಪರಿಗಣಿಸುವ ಮೂಲಕ, ಅದನ್ನು ಮನೆಯಲ್ಲಿ ಬೆಳ್ಳಿ ಲೋಹದಲ್ಲಿ (Pair Of Silver Elephants) ಇಡುವುದು ಆರ್ಥಿಕ ಅಭಿವೃದ್ಧಿಗೆ ದಾರಿ ತೆರೆಯುತ್ತದೆ. ಇದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿಗೆ ಕಾರಣವಾಗುತ್ತದೆ ಮತ್ತು ಸಮಾಜದಲ್ಲಿ ಪ್ರತಿಷ್ಠೆ ತಂದು ಕೊಡುವುದರ ಜೊತೆಗೆ ಜೀವನದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸುತ್ತದೆ. ಬೆಳ್ಳಿ ಆನೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರ ಪ್ರಯೋಜನಗಳನ್ನು ತಿಳಿಯಿರಿ.


ಇದನ್ನು ಓದಿ- ಮನೆಯಲ್ಲಿರುವ ಮೆಟ್ಟಿಲುಗಳಿಂದಾಗುವ ವಾಸ್ತುದೋಷ ನಿಮ್ಮ ಮನೆಯಲ್ಲಿದೆಯೇ? ಈ ನಿಯಮಗಳನ್ನು ಪಾಲಿಸಿ


ಎಲ್ಲಿ ಹಾಗೂ ಹೇಗೆ ಸ್ಥಾಪಿಸಬೇಕು?
1. ಮನೆ, ಅಂಗಡಿ ಅಥವಾ ಕಚೇರಿಯ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಕೆಂಪು ಆನೆ ಇರುವುದು ಶುಭವೆಂದು ಪರಿಗಣಿಸಲಾಗಿದೆ. ಈ ಮೂಲಕ ವ್ಯಕ್ತಿಗೆ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಲಭಿಸುತ್ತದೆ.
2. ಆನೆಗಳನ್ನು ಸಾಕುವ ಮೂಲಕ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಆನೆಗಳನ್ನು ಬೆಳೆಸುವುದು ಇಂದಿನ ಕಾಲದಲ್ಲಿ ಅಷ್ಟು ಸುಲಭವಲ್ಲ. ಆದ್ದರಿಂದ, ನೀವು ಮನೆಯಲ್ಲಿ ಬೆಳ್ಳಿ ಆನೆಯ ಪ್ರತಿಮೆಯನ್ನು ಇರಿಸಬಹುದು.
3. ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ, ತಾಯಿ ಲಕ್ಷ್ಮಿಯ ಅಪಾರ ಅನುಗ್ರಹವು ನಿಮ್ಮ ಕುಟುಂಬದ ಮೇಲೆ ಉಳಿಯುತ್ತದೆ.
4. ಅದನ್ನು ತಿಜೋರಿಯಲ್ಲಿ ಇರಿಸಿದರೆ , ತಾಯಿ ಲಕ್ಷ್ಮಿ ಮನೆಯಲ್ಲಿ ಮನೆಯಲ್ಲಿಯೇ ನೆಲೆಸುತ್ತಾಳೆ ಹಾಗೂ ಹಣಕಾಸಿನ ಕೊರತೆ ನಿವಾರಣೆಯಾಗುತ್ತದೆ.
5. ಸಿಲ್ವರ್ ಆನೆಗಳ ಜೋಡಿಯ ಪ್ರತಿಮೆಯನ್ನು ಮನೆಯ ಮುಖ್ಯ ದ್ವಾರದ ಬಳಿ ಇರಿಸುವ ಮೂಲಕ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಸಂವಹನ ಮಾಡಲಾಗುತ್ತದೆ. ಇದನ್ನು ಇಟ್ಟುಕೊಳ್ಳುವಾಗ, ಎರಡು ಆನೆಗಳು ಪರಸ್ಪರ ಮುಖಾಮುಖಿಯಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
6. ಆನೆಗಳನ್ನು ಮನೆಯಲ್ಲಿ ಇಡುವುದು ಅದೃಷ್ಟವನ್ನು ತರುತ್ತದೆ. ಇದು ಕುಟುಂಬದ ಅದೃಷ್ಟಕ್ಕೆ ದಾರಿ ತೆರೆಯುತ್ತದೆ.
7. ಬೆಳ್ಳಿ ಆನೆಯ ಬದಲು ನೀವು ಕಲ್ಲಿನಿಂದ ತಯಾರಿಸಿದ ಆನೆಗಳನ್ನೂ ಸಹ ಇರಿಸಬಹುದು.