ನವದೆಹಲಿ: ಕುಂಬಳಕಾಯಿ ಬೀಜಗಳು ಹೆಚ್ಚು ಪೌಷ್ಟಿಕವಾಗಿದೆ ಮತ್ತು ಅದು  ‘ಮಹಿಳೆಯರಿಗೆ ಸೂಪರ್‌ಫುಡ್’ ಆಗಿದೆ. PCOS (Polycystic Ovary Syndrome)ನಂತಹ ಪರಿಸ್ಥಿತಿ ಹೊಂದಿರುವವರಿಗೆ ಅವು ವಿಶೇಷವಾಗಿ ಪ್ರಯೋಜನಕಾರಿಯಾಗಿದೆಯಂತೆ.


COMMERCIAL BREAK
SCROLL TO CONTINUE READING

ಕುಂಬಳಕಾಯಿ ಬೀಜಗಳು (Pumpkin Seeds) ಹೊರಭಾಗದಲ್ಲಿ ಗಾಢ ಹಸಿರು ಪದರವನ್ನು ಹೊಂದಿರುತ್ತವೆ. ಆದರೆ, ಬೀಜಗಳು ಒಳಭಾಗದಲ್ಲಿ ಬಿಳಿಯಾಗಿರುತ್ತವೆ. ಅವುಗಳನ್ನು ಆರೋಗ್ಯಕರ ಮತ್ತು ಹೆಚ್ಚು ಪೌಷ್ಟಿಕವೆಂದು ಪರಿಗಣಿಸಲಾಗುತ್ತದೆ. PCOS ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆಯರು ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಹಾರ್ಮೋನುಗಳ ಆರೋಗ್ಯ(Health)ವನ್ನು ಸುಧಾರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ನಿಮಗೆ ಈ ಸಮಸ್ಯೆ ಇದ್ದರೆ ಮರೆತು ಕೂಡಾ ಕುಡಿಯಬೇಡಿ ಜೀರಿಗೆ ನೀರು, ಕಾಯಿಲೆ ಉಲ್ಬಣಿಸಬಹುದು


ಮಹಿಳೆಯರಿಗೆ ಕುಂಬಳಕಾಯಿ ಬೀಜಗಳ ಪ್ರಯೋಜನಗಳು:


  • ಕೂದಲು ಉದುರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

  • ಅಗತ್ಯ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ

  • ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

  • ಮೆಗ್ನೀಷಿಯಂನ ಉತ್ತಮ ಮೂಲ

  • ಋತುಬಂಧದ ನಂತರ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ


ನೀವು ಕುಂಬಳಕಾಯಿ ಬೀಜಗಳನ್ನು ಆನಂದಿಸಲು ಹಲವು ಮಾರ್ಗಗಳಿವೆ. ನೀವು ಅವುಗಳನ್ನು ಹಸಿಯಾಗಿ ಅಥವಾ ಹುರಿದು ತಿನ್ನಬಹುದು. ಅವುಗಳನ್ನು ನಿಮ್ಮ ಸಲಾಡ್‌ಗಳು ಮತ್ತು ಸೂಪ್‌ಗಳಲ್ಲಿಯೂ ಸೇರಿಸಿ ಸೇವಿಸಬಹುದು.


ಇದನ್ನೂ ಓದಿ: Health Benefits Of Sweet Potato: ಚಳಿಗಾಲದಲ್ಲಿ ಆರೋಗ್ಯಕ್ಕೆ ವರದಾನ ಗೆಣಸು, ಇಲ್ಲಿವೆ ಅದರ 7 ಅದ್ಭುತ ಲಾಭಗಳು


ತಿನ್ನುವ ಪ್ರಮಾಣ: ಪ್ರತಿನಿತ್ಯವೂ ಕೇವಲ 1 ಟೀ ಚಮಚದಷ್ಟು (Teaspoon)ಕುಂಬಳಕಾಯಿ ಬೀಜ ಸೇವಿಸುವುದು ನಿಮ್ಮ ಆರೋಗ್ಯ(Benefits of Pumpkin Seeds)ಕ್ಕೆ ಉತ್ತಮ. ಕುಂಬಳಕಾಯಿ ಬೀಜಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಪ್ರತಿದಿನದ ನಿಮ್ಮ ಡಯೇಟ್ ನಲ್ಲಿ ಸೇರಿಸಿಕೊಳ್ಳುವುದು ಉತ್ತಮ ಫಲಿತಾಂಶಗಳನ್ನು ನಿಡುತ್ತದೆ. ಅನೇಕ ರೋಗಗಳನ್ನು ಹೋಗಲಾಡಿಸುವ ಗುಣಗಳನ್ನು ಕುಂಬಳಕಾಯಿ ಹೊಂದಿದೆ. ಪ್ರತಿದಿನವೂ ತಪ್ಪದೇ ಸೇವಿಸುತ್ತಾ ಬಂದರೆ ನಿಮಗೆ ರೋಗಗಳಿಂದ ಮುಕ್ತಿಯ ಜೊತೆಗೆ ಅನೇಕ ಪ್ರಯೋಜನಗಳು ಸಿಗುತ್ತದೆ.   


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.