ನಿಮಗೆ ಈ ಸಮಸ್ಯೆ ಇದ್ದರೆ ಮರೆತು ಕೂಡಾ ಕುಡಿಯಬೇಡಿ ಜೀರಿಗೆ ನೀರು, ಕಾಯಿಲೆ ಉಲ್ಬಣಿಸಬಹುದು

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ತೂಕ ನಷ್ಟಕ್ಕೆ ಜೀರಿಗೆ ನೀರನ್ನು ಕುಡಿಯುವಂತೆ ಹೇಳಲಾಗುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಜೀರಿಗೆ ನೀರು ಉಪಯೋಗವಾಗುವುದಿಲ್ಲ. ಕೆಲ ಸಂದರ್ಭದಲ್ಲಿ ಜೀರಿಗೆ ನೀರು ಉಪಯೋಗಕ್ಕಿಂತ ಹೆಚ್ಚು ನಷ್ಟವನ್ನೇ ತಂದೊಡ್ಡಬಹುದು.   

Written by - Ranjitha R K | Last Updated : Nov 27, 2021, 09:36 AM IST
  • ಅತಿಯಾಗಿ ಜೀರಿಗೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ತೊಂದರೆಗಳು ಉಂಟಾಗಬಹುದು.
  • ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
  • ಇದು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ನಿಮಗೆ ಈ ಸಮಸ್ಯೆ ಇದ್ದರೆ ಮರೆತು ಕೂಡಾ ಕುಡಿಯಬೇಡಿ ಜೀರಿಗೆ ನೀರು, ಕಾಯಿಲೆ ಉಲ್ಬಣಿಸಬಹುದು  title=
Jeera water side effects (File photo)

ನವದೆಹಲಿ : ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು (Jeera Water) ಸೇವಿಸುವುದಾದರೆ ಎಷ್ಟು ಪ್ರಮಾಣದಲ್ಲಿ ಜೀರಿಗೆ ನೀರು ಸೇವಿಸುತ್ತೀರಿ ಎನ್ನುವುದು ಕೂಡಾ ಮುಖ್ಯವಾಗಿರುತ್ತದೆ. ಜೀರಿಗೆ ನೀರನ್ನು ಅತಿಯಾಗಿ ಸೇವಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುವ್ ಅಪಾಯವು ಇದೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ.  ತೂಕ ನಷ್ಟದಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವವರೆಗೆ, ಜೀರಾ ನೀರನ್ನು (Jeera Water)  ಕುಡಿಯುವಂತೆ ಸೂಚಿಸಲಾಗುತ್ತದೆ. ಆದರೆ ನಿಮಗೆ ರಕ್ತದಲ್ಲಿನ ಸಕ್ಕರೆ, ಮೂತ್ರಪಿಂಡ ಅಥವಾ ಯಕೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಜೀರಿಗೆ ನೀರನ್ನು ಕುಡಿಯುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು. 

ಜೀರ್ಣಕ್ರಿಯೆ ಸಮಸ್ಯೆಗಳು :
ಜೀರಿಗೆ ನೀರನ್ನು (Jeera Water)  ಅತಿಯಾಗಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು (Digestion problem) ಉಂಟಾಗಬಹುದು. ಆದ್ದರಿಂದ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಕೆಲವೊಮ್ಮೆ ಇದು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ಎದೆಯುರಿ ಸಮಸ್ಯೆಗೆ ಕಾರಣವಾಗಬಹುದು.

ಇದನ್ನೂ ಓದಿ : Coffee: ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ..?

ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಪರಿಣಾಮ :
ಜೀರಿಗೆ ನೀರನ್ನು ಅತಿಯಾಗಿ ಕುಡಿಯುವುದರಿಂದ ಮೂತ್ರಪಿಂಡ (Kidney) ಮತ್ತು ಯಕೃತ್ತಿನ (Liver) ಮೇಲೆ ಪರಿಣಾಮ ಬೀರುತ್ತದೆ. ನೀವು ಈಗಾಗಲೇ ಮೂತ್ರಪಿಂಡ ಅಥವಾ ಯಕೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಹೊಂದಿದ್ದರೆ, ಆಹಾರ ತಜ್ಞರ ಸಲಹೆಯ ಮೇರೆಗೆ ಮಾತ್ರ ಜೀರಿಗೆ ನೀರನ್ನು ಸೇವಿಸಿ.

ರಕ್ತದಲ್ಲಿನ ಸಕ್ಕರೆ ತುಂಬಾ  ಕಡಿಮೆಯಾಗುತ್ತದೆ :
ರಕ್ತದಲ್ಲಿನ ಸಕ್ಕರೆಯನ್ನು (Blood sugar) ಕಡಿಮೆ ಮಾಡಲು ಜೀರಿಗೆ ನೀರನ್ನು ಸೇವಿಸಲು ಸಲಹೆ ನೀಡಲಾಗುತ್ತದೆ, ಆದರೆ ನಿಮ್ಮ ರಕ್ತದಲ್ಲಿನ ಸಕ್ಕರೆಯು ನಿಯಂತ್ರಣದಲ್ಲಿದ್ದರೆ, ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಹೆಚ್ಚಿನ ಪ್ರಮಾಣದಲ್ಲಿ ಜೀರಿಗೆ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಇದು ದೌರ್ಬಲ್ಯ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು.

ವಾಕರಿಕೆ ಮತ್ತು ಮೆದುಳಿನ ಸಮಸ್ಯೆಗಳು :
ಜೀರಿಗೆ ನೀರಿನಲ್ಲಿ ನಾರ್ಕೊಟಿಕ್  ಪ್ರೋಪರ್ಟೀಸ್ ಕಂಡುಬರುತ್ತವೆ. ಇದನ್ನು ಅತಿಯಾಗಿ ಸೇವಿಸುವುದರಿಂದ ವಾಕರಿಕೆ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ : ಈ 9 ಲಕ್ಷಣಗಳು ಕ್ಯಾನ್ಸರ್ ನ ಸಂಕೇತವಾಗಿರಬಹುದು, ಇವುಗಳನ್ನು ಯಾವತ್ತೂ ನಿರ್ಲಕ್ಷಿಸಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News