ಅಜೀರ್ಣ ಸಮಸ್ಯೆ ಸಾಮಾನ್ಯವೆನಿಸಬಹುದು ಆದರೆ ಅದರಿಂದ ಭವಿಷ್ಯದಲ್ಲಿ ಕಿಡ್ನಿ ಹಾಗೂ ಲೀವರ್‌ ಸಂಭಂದಿತ ತೊಂದರೆಗಳು ಉಂಟಾಗಬಹುದು. ಒಂದೇ ಕಡೆ ಕುಳಿತು ಕೆಲಸ ಮಾಡುವರಿಗೆ ಗ್ಯಾಸ್‌ ಅಜೀರ್ಣ ಸಾಕಷ್ಟು ಕಾಡುವ ಸಮಸ್ಯೆ. ಇದರಿಂದ ಬೇಸೊತ್ತಿರುವರು ಇದ್ದಾರೆ. ಗ್ಯಾಸ್‌ ನಿಂದ ನಮ್ಮ ದೈನಂದಿನ ಊಟದ ಹವ್ಯಾಸವೇ ಬದಲಾಗುತ್ತದೆ. ಊಟ ಬಿಡುವಂತೆ ಈ ಗ್ಯಾಸ್‌ ಅಜೀರ್ಣ ಸಮಸ್ಯೆ ಪ್ರೇರೆಪಿಸುತ್ತದೆ. 
 


COMMERCIAL BREAK
SCROLL TO CONTINUE READING

ಈ ಗ್ಯಾಸ್‌ ಅಜೀರ್ಣಕ್ಕೆ ಕಾರಣಗಳೇನು ಗೊತ್ತಾ .....? 


* ಅನಿಯಮಿತ ಆಹಾರ ಸೇವನೆಯಿಂದ ಈ ಸಮಸ್ಯೆ ಉಂಟಾಗುತ್ತದೆ.
* ಹೆಚ್ಚಾದ ವಿಶ್ರಾಂತಿಯಿಂದ ಅಜೀರ್ಣ ಸಮಸ್ಯೆ ಬರುತ್ತದೆ.
* ಕುಳಿತಲ್ಲೆ ಕುಳಿತಿರುವುದರಿಂದ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
* ಅಡುಗೆ ಸೋಡಾ ಹಾಕಿರುವ ಆಹಾರ ಪದಾರ್ಥದಿಂದ ಕೂಡ ಗ್ಯಾಸ್‌ ಉಂಟಾಗುತ್ತದೆ.


ಇದನ್ನೂ ಓದಿ-Health Tips: ಕೆಟ್ಟ ಕೊಲೆಸ್ಟ್ರಾಲ್ ನಿರ್ಮೂಲನೆಗೆ ಇಲ್ಲಿದೆ ಆಯುರ್ವೇದದ ಪರಿಹಾರ!


ಗ್ಯಾಸ್‌ ಸಮಸ್ಯೆ ಚಿಕ್ಕವರಿಂದ ದೊಡ್ಡವರ ವರೆಗೂ ಕಾಡುವ ಸಮಸ್ಯೆಯಾಗಿದೆ. ಇದರಿಂದ ತಾತ್ಕಾಲಿಕವಾಗಿ ಮುಕ್ತಿ ಹೊಂದಲೂ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ನಿಂಬೆ ರಸದೊಂದಿಗೆ ಸೋಡಾ ಮಿಕ್ಸ್‌ ಮಾಡಿ ಸೇವಿಸುತ್ತಾರೆ. ಆದರೆ ಅದಕ್ಕಿಂತ ಸುಲಭವಾದ ಮನೆಮದ್ದು ಇನ್ನೋಂದಿದೆ. ಅದೇನೆಂದರೆ....


ಎಳನೀರಿಗೆ ಶುಂಠಿ ಮಿಕ್ಸ್‌ ಮಾಡಿ ಕುಡಿಯುವುದರಿಂದ ತಾತ್ಕಾಲಿಕವಾಗಿ ಗ್ಯಾಸ್‌ ಸಮಸ್ಯೆಯನ್ನು ಕಡಿಮೆಮಾಡಬಹುದು. ಎಳನೀರನ್ನು ನಾವು ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚಾದಾಗ ಕುಡಿಯುತ್ತೇವೆ. ಮತ್ತು ವಾಂತಿ ಬೇದಿಯಂತಹ ಸಮಸ್ಯೆಗಳನ್ನು ನಿವಾರಿಸಲು ಕುಡಿಯುತ್ತೇವೆ. ಶುಂಠಿಯನ್ನು ನಾವು ನೆಗಡಿ ಜ್ವರ ಈ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಸೇವಿಸುತ್ತೇವೆ. ಎಳನೀರು ಹಾಗೂ ಶುಂಠಿ ಎರಡು ರೋಗ ನಿರೋಧಕ ಶಕಿಯನ್ನು ಹೊಂದಿವೆ. ಇವು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆಮಾಡುವುದರ ಜೊತೆಗೆ ಗ್ಯಾಸ್‌ ಅಜೀರ್ಣ ಸಮಸ್ಯೆಗೆ ತಾತ್ಕಾಲಿಕವಾಗಿ ಮುಕ್ತಿ ನೀಡುತ್ತದೆ. 


ಇದನ್ನೂ ಓದಿ- Onion Benefits : ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಪ್ರತಿದಿನ ಸೇವಿಸಿ ಹಸಿ ಈರುಳ್ಳಿ..!


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.