Weight Loss Detox Drinks: ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಕೆಲವು ಪಾನೀಯಗಳು ತುಂಬಾ ಪ್ರಯೋಜನಕಾರಿ ಆಗಿವೆ. ಆಹಾರ ತಜ್ಞರ ಪ್ರಕಾರ, ಕೆಲವು ಡಿಟಾಕ್ಸ್ ಪಾನೀಯಗಳ ಸಹಾಯದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹೊಟ್ಟೆ ಸುತ್ತಲಿನ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು ಎಂದು ಹೇಳಲಾಗುತ್ತದೆ. ಅಂತಹ ಆರೋಗ್ಯಕರ ಡಿಟಾಕ್ಸ್ ಪಾನೀಯಗಳು ಯಾವುವು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ತೂಕ ನಷ್ಟಕ್ಕೆ 5 ಬೆಸ್ಟ್ ಪ್ರಯೋಜನಕಾರಿ ಡಿಟಾಕ್ಸ್ ಪಾನೀಯಗಳೆಂದರೆ:- 
ಲೆಮನ್ ವಾಟರ್: 

ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ನಿಂಬೆ ರಸವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಇದು ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುತ್ತದೆ. ಜೊತೆಗೆ ಇದು ಜೀರ್ಣಕ್ರಿಯೆಯನ್ನು, ಚಯಾಪಚಯವನ್ನು ಉತ್ತೇಜಿಸುವ ಮೂಲಕ ತೂಕ ಇಳಿಕೆಗೆ ಸಹಕಾರಿ ಆಗಲಿದೆ. 


ಗ್ರೀನ್ ಟೀ: 
ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು ಇದು ಸಹ ಚಯಾಪಚಯ ಕ್ರಿಯೆಯನ್ನು ಸುಧಾರಿಸುವ ಮೂಲಕ ಕೊಬ್ಬಿನ ಆಕ್ಸಿಡೀಕರಣವನ್ನು ಹೆಚ್ಚಿಸಲು ಸಹಕಾರಿ ಆಗಿದೆ. ನಿತ್ಯ ಒಂದೆರಡು ಕಪ್ ಗ್ರೀನ್ ಟೀ ಕುಡಿಯುವುದರಿಂದ ತೂಕ ಇಳಿಕೆ ಸುಲಭವಾಗುತ್ತದೆ ಎಂದು ನಂಬಲಾಗಿದೆ. 


ಇದನ್ನೂ ಓದಿ- Cinnamon Tea Benefits: ತೂಕ ಇಳಿಕೆ ಅಷ್ಟೇ ಅಲ್ಲ, ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತೇ ಈ ಚಹಾ!


ಶುಂಠಿ-ಅರಿಶಿನ ಮಿಶ್ರಿತ ನೀರು: 
ಶುಂಠಿ ಮತ್ತು ಅರಿಶಿನ ಎರಡೂ ಸಹ ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಬಿಸಿ ನೀರಿನಲ್ಲಿ ಶುಂಠಿ ಹಾಗೂ ಅರಿಶಿನವನ್ನು ಬೆರೆಸಿ ಕಷಾಯ ತಯಾರಿಸಿ ಕುಡಿಯುವುದರಿಂದ ಇದು ಸೊಂಟದ ಸುತ್ತಲೂ ಶೇಖರವಾಗಿರುವ ಕೊಬ್ಬನ್ನು ಕರಗಿಸಿ ತೂಕ ಇಳಿಕೆಗೆ ಕೊಡುಗೆ ನೀಡಬಲ್ಲದು ಎಂದು ಹೇಳಲಾಗುತ್ತದೆ. 


ಸೌತೆಕಾಯಿ ಪುದೀನ ನೀರು: 
ಅತ್ಯುತ್ತಮ ರಿಫ್ರೆಶರ್ ಆಗಿರುವ ಸೌತೆಕಾಯಿ ಮತ್ತು ಪುದೀನ ನೀರು  ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಇದು ದೇಹವನ್ನು  ಹೈಡ್ರೇಟಿಂಗ್ ಮಾಡಲು ತುಂಬಾ ಪ್ರಯೋಜನಕಾರಿ ಆಗಿದೆ. ಜಲಸಂಚಯನ ಮತ್ತು ತೂಕ ನಷ್ಟವನ್ನು ಬೆಂಬಲಿಸಲು ಸೌತೆಕಾಯಿ ಪುದೀನ ಮಿಶ್ರಿತ ನೀರನ್ನು ದಿನವಿಡೀ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. 


ಇದನ್ನೂ ಓದಿ- Weight Loss Remedy ಏನೂ ತಿನ್ನದೇ ಕೂಡ ತೂಕ ಹೆಚ್ಚಾಗುತ್ತಿದೆಯಾ? ಅದಕ್ಕೆ ಕಾರಣ ಇಲ್ಲಿದೆ!


ಬೆರ್ರಿ ಮತ್ತು ಪಾಲಕ್ ಸ್ಮೂಥಿ:
ಬೆರ್ರಿ ಹಣ್ಣುಗಳು ಮತ್ತು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿವೆ. ಪಾಲಕ್ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಬೆರ್ರಿಹಣ್ಣುಗಳಲ್ಲಿ ಒಂದು ಹಿಡಿ ಸ್ಮೂಥಿಯನ್ನು ಬೆರೆಸಿ ನೀರು ಬೆರೆಸಿ ಸ್ಮೂಥಿಯನ್ನು ತಯಾರಿಸಿ ಕುಡಿಯಿರಿ. ಇದರಿಂದ ಸುಲಭವಾಗಿ ತೂಕ ಇಳಿಸಬಹುದು ಎನ್ನಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.