Best Oil For Long Hair : ಸೌಂದರ್ಯದ ಗುಟ್ಟು ಕೂದಲಿನಲ್ಲಿ ಅಡಗಿದೆ. ಆಧುನಿಕ ಜೀವನಶೈಲಿಯು ಅನೇಕ ಜನರಲ್ಲಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳಿದ್ದರೆ ಪ್ರಾರಂಭದಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಆದರೆ ಅನೇಕರು ತಮ್ಮ ಕೂದಲನ್ನು ದಪ್ಪವಾಗಿಸಲು ಮಾರುಕಟ್ಟೆಯಲ್ಲಿ ದೊರೆಯುವ ಹಲವು ಬಗೆಯ ದುಬಾರಿ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಇವುಗಳ ಬದಲಿಗೆ ಆಯುರ್ವೇದ ವೈದ್ಯರು ಸೂಚಿಸಿದ ಮನೆಯಲ್ಲಿ ತಯಾರಿಸಿದ ಹರ್ಬಲ್ ಹೇರ್ ಆಯಿಲ್ ಬಳಸಿ ಉದ್ದ ದಪ್ಪ ಕೂದಲು ಪಡೆಯಬಹುದು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Health Benefits of Radish: ಮೂಲಂಗಿ ಸೇವನೆಯ ಅದ್ಭುತ ಪ್ರಯೋಜನಗಳು 


ಈರುಳ್ಳಿ ಎಣ್ಣೆ: ಈರುಳ್ಳಿ ಎಣ್ಣೆ ಕೂದಲಿಗೆ ಔಷಧಿಯಂತೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಈ ಎಣ್ಣೆಯಲ್ಲಿ ಅಡಗಿರುವ ಗುಣಗಳು ಕೂದಲಿನ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಇದು ಕೂದಲನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ.


ಈರುಳ್ಳಿ ಎಣ್ಣೆ ಮಾಡುವುದು ಹೇಗೆ:


❁ ಮೊದಲು ನೀವು ಕರಿಬೇವಿನ ಎಲೆಗಳು ಮತ್ತು ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು.


❁ ನಂತರ ಅವುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.


❁ ಒಂದು ಕಪ್ ಎಣ್ಣೆಯನ್ನು ತೆಗೆದುಕೊಳ್ಳಿ. ಒಂದು ಪಾತ್ರಗೆ ಹಾಕಿ, ಗ್ಯಾಸ್ ಸ್ಟೌವ್ ಮೇಲೆ ಇರಿಸಿ.


❁ ಅದರಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ. 5 ರಿಂದ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿ.


❁ ನಂತರ, ಎಣ್ಣೆಯನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಬಾಟಲಿಯಲ್ಲಿ ಸಂಗ್ರಹಿಸಿ.


ಕರಿಬೇವಿನ ಎಲೆ - ಮೆಂತ್ಯ ಎಣ್ಣೆ: ಆಯುರ್ವೇದ ತಜ್ಞರು ಕರಿಬೇವಿನ ಎಲೆ ಮತ್ತು ಮೆಂತ್ಯ ಎಣ್ಣೆ ಕೂಡ ಕೂದಲನ್ನು ಬಲಪಡಿಸುವಲ್ಲಿ ಪರಿಣಾಮಕಾರಿ ಎಂದು ಹೇಳುತ್ತಾರೆ. ಇದರಲ್ಲಿರುವ ಆಯುರ್ವೇದ ಗುಣಗಳು ಕೂದಲನ್ನು ದಪ್ಪ ಮತ್ತು ಉದ್ದವಾಗಿಸಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆಯನ್ನು ಸಹ ಸುಲಭವಾಗಿ ಕಡಿಮೆ ಮಾಡುತ್ತದೆ.  


ಈ ಎಣ್ಣೆಯನ್ನು ತಯಾರಿಸುವ ವಿಧಾನ:


❁ ಈ ಎಣ್ಣೆಯನ್ನು ತಯಾರಿಸಲು, ಮೊದಲು ಮೆಂತ್ಯ ಬೀಜಗಳು ಮತ್ತು ಕರಿಬೇವಿನ ಎಲೆಗಳ ಮಿಶ್ರಣವನ್ನು ಮಾಡಿ.


❁ ನಂತರ, ಆಲಿವ್ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಮತ್ತು ಒಲೆಯ ಮೇಲೆ ಇರಿಸಿ.


❁ ಎಣ್ಣೆ ಬಿಸಿಯಾದ ನಂತರ ಮೇಲಿನ ಮಿಶ್ರಣವನ್ನು ಆಲಿವ್ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಿ.


❁ ನಂತರ ಅದನ್ನು ತಣ್ಣಗಾಗಿಸಿ ಜಾರ್‌ನಲ್ಲಿ ಫಿಲ್ಟರ್ ಮಾಡಿ ಶೇಖರಿಸಿಡಬೇಕು.


❁ ಈ ಎಣ್ಣೆಯನ್ನು ವಾರಕ್ಕೆ 2-3 ಬಾರಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.


ಇದನ್ನೂ ಓದಿ : ತೆಂಗಿನೆಣ್ಣೆ ಜೊತೆ ಈ ಮಸಾಲೆ ಬೆರೆಸಿ ಹಚ್ಚಿ.. ಬಿಳಿ ಕೂದಲು 10 ದಿನದಲ್ಲಿ ಕಪ್ಪಾಗುವುದು! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.