ಪ್ರಕೃತಿ ಎಂದರೆ ನೆಮ್ಮದಿ ಅಂತಾ ಅನೇಕರು ಹೇಳುತ್ತಾರೆ. ಈ ಮಾತು ನಿಜ. ಏಕೆಂದರೆ ಹಿಂದೂ ಪುರಾಣದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಉಲ್ಲೇಖಗಳನ್ನು ನೀಡಲಾಗಿದೆ. ಹಿಂದೂಗಳ ಮನೆ ಮುಂದೆ ತುಳಸಿ ಗಿಡಗಳನ್ನು ನೆಡಲಾಗುತ್ತದೆ. ಇದು ಸಮೃದ್ಧಿಯ ಸಂಕೇತವಾಗಿದೆ. ಅದೇ ರೀತಿ ಕಂಕಣ ಕೂಡಿ ಬರಲೆಂದು ಒಂದು ಗಿಡವನ್ನು ಮನೆಯ ಮುಂದೆ ನೆಡಬೇಕು ಎಂದು ಕೆಲ ಉಲ್ಲೇಖಗಳು ತಿಳಿಸುತ್ತವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: UPA ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆಗೆ ಬ್ರೇಕ್ ಬಿದ್ದಿತ್ತು, ನಾರಾಯಣ್ ಮೂರ್ತಿ ಹೇಳಿದ್ದೇನು?


ಮನೆಯಲ್ಲಿ ಗಿಡಗಳನ್ನು ನೆಡುವುದು ಆರೋಗ್ಯಕ್ಕೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಅದರಲ್ಲೂ ಕೆಲ ಗಿಡಗಳು ಜಾತಕಕ್ಕೆ ಮತ್ತು ಮನೆಯ ವಾಸ್ತುವಿಗೆ ಸಂಬಂಧಿಸಿದ್ದಾಗಿದೆ. ಇನ್ನು ಮದುವೆಗಳು ನಡೆಯುವುದಕ್ಕೆ ಅಡೆತಡೆ ಉಂಟಾದರೆ ಮನೆಯ ಮುಂಭಾಗದಲ್ಲಿ ಪಿಯೋನಿಯಾ ಎಂಬ ಗಿಡವನ್ನು ನೆಟ್ಟು ನೋಡಿ. ಇದು ವಿವಾಹದ ಅಡೆತಡೆಯನ್ನು ತೆಗೆದುಹಾಕುತ್ತೆ.


ಇನ್ನು ಪಿಯೋನಿಯಾ ಸಸ್ಯದ ಬಗ್ಗೆ ಹೇಳುವುದಾದರೆ ಇದು ನೋಡಲು ಗುಲಾಬಿ ಥರಹವೇ ಇದೆ. ಪಿಯೋನಿಯಾದ ಹೂವನ್ನು ಹೂವುಗಳ ರಾಣಿ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ, ಈ ಹೂವುಗಳನ್ನು ಸೌಂದರ್ಯ, ಪ್ರಣಯದ ಸಂಕೇತ ಎಂದು ಪರಿಗಣಿಸಲಾಗುತ್ತದೆ.  


ವಾಸ್ತು ಶಾಸ್ತ್ರದ ಪ್ರಕಾರ  ಕೆಲವು ಕಾರಣಗಳಿಂದಾಗಿ ಮದುವೆ ವಿನಾಕಾರಣ ಮುಂದೆ ಹೋಗುತ್ತಿರಬಹುದು. ಈ ಸಂದರ್ಭದಲ್ಲಿ ಮನೆಯಲ್ಲಿ ಪಿಯೋನಿಯಾ ಹೂವಿನ ಗಿಡ ನೆಡಬೇಕು. ಇದು ಸಮಸ್ಯೆಗಳಿಗೆ ಶೀಘ್ರ ಪರಿಹಾರವನ್ನು ನೀಡುತ್ತದೆ.


ಇನ್ನು ಕೆಲವೊಂದು ಬಾರಿ ವಾಸ್ತು ದೋಷಗಳಿಂದಾಗಿ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಈ ಸಂದರ್ಭದಲ್ಲಿ ಪಿಯೋನಿಯಾ ಅಥವಾ ಅದರ ಫೋಟೋಗಳನ್ನು ಮನೆಯಲ್ಲಿ ಇರಿಸಿ. 


Juice for Skin: ಒಂದು ವಾರದಲ್ಲಿ ಮುಖದ ಕಾಂತಿ ಹೆಚ್ಚಾಗುತ್ತೆ: ಈ ಜ್ಯೂಸ್ ಕುಡಿದು ನೋಡಿ


ಜಾತಕದ ದೋಷದಿಂದ ಹುಡುಗ ಅಥವಾ ಹುಡುಗಿಯ ಮದುವೆಯಲ್ಲಿ ವಿಳಂಬವಾದರೆ, ಡ್ರಾಯಿಂಗ್ ರೂಮಿನಲ್ಲಿ ಪಿಯೋನಿಯಾ ಹೂವಿನ ಗಿಡ ಅಥವಾ ಅದರ ವರ್ಣಚಿತ್ರವನ್ನು ಇರಿಸಿ. ಹೀಗೆ ಮಾಡಿದರೆ ಶೀಘ್ರವೇ ಮದುವೆ ಸಂಬಂಧ ಕೂಡಿಬರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.