Narayan Murthy On UPA : ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ ಸ್ಥಗಿತಗೊಂಡಿತ್ತು ಎಂದು ಐಟಿ ದಿಗ್ಗಜ ಇನ್ಫೋಸಿಸ್ ನ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸಾಧಾರಣ ವ್ಯಕ್ತಿಯಾಗಿದ್ದರೂ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಪ್ರಗತಿಯಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ಫೋಸಿಸ್ ಸಹ-ಸಂಸ್ಥಾಪಕರು ಹೇಳಿದ್ದೇನು?
"ನಾನು ಲಂಡನ್‌ನ ಎಚ್‌ಎಸ್‌ಬಿಸಿ ಮಂಡಳಿಯಲ್ಲಿದ್ದೆ (2008 ಮತ್ತು 2012 ರ ನಡುವೆ). ಮೊದಲ ಕೆಲವು ವರ್ಷಗಳಲ್ಲಿ, ಬೋರ್ಡ್‌ರೂಮ್‌ನಲ್ಲಿ (ಸಭೆಗಳ ಸಮಯದಲ್ಲಿ) ಚೀನಾ ಹೆಸರು ಎರಡರಿಂದ ಮೂರು ಬಾರಿ ಉಲ್ಲೇಖಗೊಂಡಾಗ, ಒಮ್ಮೆ ಭಾರತದ ಹೆಸರು ಕೇಳಿ ಬರುತ್ತಿತ್ತು" ಎಂದು ನಾರಾಯಣ್ ಮೂರ್ತಿ ಹೇಳಿದ್ದಾರೆ."ಭಾರತಕ್ಕೆ ಏನಾಗಿದೆ ಎಂದು ನನಗೆ ಅರ್ಥವಾಗುತ್ತಿರಲಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸಾಧಾರಣ ವ್ಯಕ್ತಿ ಮತ್ತು ನನಗೆ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಯುಪಿಎ ಕಾಲದಲ್ಲಿ ಭಾರತ ಸ್ಥಬ್ಧವಾಗಿತ್ತು. ಉತ್ತಮ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿರಲಿಲ್ಲ" ಎಂದು ಅವರು ಹೇಳಿದ್ದಾರೆ.
2008 ರಲ್ಲಿ ಮಂಡಳಿಗೆ ನೇಮಕ
2008 ರಲ್ಲಿ ನಾರಾಯಣ್ ಮೂರ್ತಿ ಅವರು ವಿಶ್ವದ ಅತಿ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾದ HSBC ಮಂಡಳಿಗೆ ನೇಮಕಗೊಂಡಿದ್ದರು. ಅವರನ್ನು HSBC ಮಂಡಳಿಯ HSBC ಹೋಲ್ಡಿಂಗ್ಸ್ ನ ಸ್ವತಂತ್ರ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ನಾರಾಯಣ ಮೂರ್ತಿ ಅವರ ಪ್ರಕಾರ, ಅವರು 2012 ರಲ್ಲಿ ಎಚ್‌ಎಸ್‌ಬಿಸಿ ಮಂಡಳಿಯನ್ನು ತೊರೆದಾಗ, ಸಭೆಗಳಲ್ಲಿ ಭಾರತದ ಹೆಸರು ವಿರಳವಾಗಿ ಉಲ್ಲೇಖಗೊಳ್ಳುತ್ತಿತ್ತು, ಆದರೆ ಚೀನಾದ ಹೆಸರನ್ನು ಸುಮಾರು 30 ಬಾರಿ ಉಲ್ಲೇಖಿಸಲಾಗುತ್ತಿತ್ತು ಎನ್ನಲಾಗಿದೆ.
ಇಂದು ವಿಶ್ವದಲ್ಲಿ ಭಾರತದ ಬಗ್ಗೆ ಗೌರವ ಭಾವನೆ ಮೂಡಿದ್ದು, ದೇಶ ಇದೀಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವುದು ಖುಷಿಯ ಸಂಗತಿಯಾಗಿದೆ ಎಂದು ನಾರಾಯಣ್ ಮೂರ್ತಿ ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.