Betel Leaves For Bad Cholesterol: ದೇಹದಲ್ಲಿ ಹೆಚ್ಚಾಗುವ ಕೆಟ್ಟ ಕೊಲೆಸ್ಟ್ರಾಲ್ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ರಕ್ತನಾಳಗಳಲ್ಲಿ ಹೆಪ್ಪುಗಟ್ಟುವ ಈ ಜಿಡ್ಡು ಪದಾರ್ಥ ನಂತರ ಹೃದ್ರೋಗಗಳಿಗೆ ದೊಡ್ಡ ಕಾರಣವಾಗಿದೆ. ಹೃದಯ ಕಾಯಿಲೆಗಳಿಂದಾಗಿ, ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತಿನಲ್ಲಿ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ಇದರರ್ಥ ಈ ಜಿಡ್ಡು ಪದಾರ್ಥವನ್ನು ದೇಹದಿಂದ ತೊಡೆದುಹಾಕುವ ಮೂಲಕ, ನೀವು ಹೃದ್ರೋಗ, ಹೃದಯಾಘಾತ, ಪಾರ್ಶ್ವವಾಯು ಮತ್ತು ರಕ್ತನಾಳಗಳ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ಕೊಲೆಸ್ಟ್ರಾಲ್ ಎಂದರೇನು ಮತ್ತು ಅದರ ಲಕ್ಷಣಗಳು ಯಾವುವು? ಇದು ಜಿಗುಟಾದ ಮೇಣದಂತಹ ವಸ್ತುವಾಗಿದ್ದು, ನೀವು ಸೇವಿಸುವ ಕೊಬ್ಬು ಭರಿತ ಆಹಾರಗಳಿಂದ ಹೊರಬರುತ್ತದೆ. ನೈಸರ್ಗಿಕವಾಗಿ, ನಮ್ಮ ಯಕೃತ್ತು ಸಹ ಅದನ್ನು ಮಾಡುತ್ತದೆ, ಆದರೆ ಅದರ ಅತಿಯಾದ ಪ್ರಮಾಣವು ಆರೋಗ್ಯಕ್ಕೆ ಮಾರಕವಾಗಿದೆ. ಇದರಲ್ಲಿ ಒಟ್ಟು ಎರಡು ರೀತಿಯ ಕೊಲೆಸ್ಟ್ರಾಲ್ ಗಳಿವೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್. ಕೆಟ್ಟ ಕೊಲೆಸ್ಟ್ರಾಲ್ ದೇಹಕ್ಕೆ ಹಾನಿಕಾರಕವಾಗಿದೆ. ಸಮಸ್ಯೆಯೆಂದರೆ ಇದರಿಂದ ರಕ್ತನಾಳಗಳು ನಿರ್ಬಂಧನೆಗೆ ಒಳಪಡುತ್ತಿವೆ ಎಂಬುದು ತಿಳಿಯುವವರೆಗೂ ಹೆಚ್ಚಿನ ಕೊಲೆಸ್ಟ್ರಾಲ್ನ ಯಾವುದೇ ಆರಂಭಿಕ ಚಿಹ್ನೆಗಳು ಕಂಡುಬರುವುದಿಲ್ಲ.


ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ವಿಧಾನಗಳು ಯಾವುವು? 
ಈ ಜಿಡ್ಡು ಪದಾರ್ಥವನ್ನು ಕರಗಿಸಲು ಅಥವಾ ತೊಡೆದುಹಾಕಲು ಸುಲಭವಾದ ಮಾರ್ಗವೆಂದರೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುವ ವಸ್ತುಗಳಿಂದ ದೂರವಿರುವುದು. ಕೊಲೆಸ್ಟ್ರಾಲ್ ರೋಗಿಗಳು ಅದನ್ನು ನಿಯಂತ್ರಣದಲ್ಲಿಡಲು ಜೀವನವಿಡೀ ಔಷಧಿಯನ್ನು ಸೇವಿಸಬೇಕಾಗುತ್ತದೆ. ನೀವು ಔಷಧಿಗಳನ್ನು ತಪ್ಪಿಸಲು ಬಯಸಿದರೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೀವು ವೀಳ್ಯದೆಲೆಯನ್ನು ಮನೆಮದ್ದಾಗಿ ಬಳಸಬಹುದು. ಏಕೆಂದರೆ ಅದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೇಗೆ ತಿಳಿದುಕೊಳ್ಳೋಣ ಬನ್ನಿ


ವೀಳ್ಯದೆಲೆ ಕೊಲೆಸ್ಟ್ರಾಲ್ ಗೆ ಮಾರಕ
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು, ಆದರೆ ಇದಕ್ಕಾಗಿ ನೀವು ಕೆಲವು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸರಳ ಮತ್ತು ಅಗ್ಗದ ಮಾರ್ಗವೆಂದರೆ ವೀಳ್ಯದೆಲೆ. ಇತ್ತೀಚೆಗೆ ಈ ಕುರಿತು ಪ್ರಕಟಗೊಂಡ ಒಂದು ಅಧ್ಯಯನದ ಪ್ರಕಾರ ಈ ಹಸಿರು ಎಲೆಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ವಿಜ್ಞಾನಿಗಳು ನಂಬಿದ್ದಾರೆ.


ಕೆಟ್ಟ ಕೊಲೆಸ್ಟ್ರಾಲ್ ಗೆ ರಾಮಬಾಣ ವೀಳ್ಯದೆಲೆ 
ವೀಳ್ಯದೆಲೆಯು ಕೊಲೆಸ್ಟ್ರಾಲ್  ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ವೀಳ್ಯದೆಲೆಗಳು ಉರಿಯೂತ ಮತ್ತು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತವೆ. ತಮ್ಮ ಅಧ್ಯಯನದಲ್ಲಿ, ಅವರು ವೀಳ್ಯದೆಲೆಗಳ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಮೌಲ್ಯಮಾಪನ ನಡೆಸಿದ್ದಾರೆ. ಇದು LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದೇ ಅಥವಾ ಕೆಟ್ಟ ಕೊಳೆಸ್ತ್ರಾಲ್ ಅನ್ನು ಕಡಿಮೆ ಮಾಡುತ್ತದೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ.


ವೀಳ್ಯದೆಲೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ತಮ್ಮ ಅಧ್ಯಯನದಲ್ಲಿ, ವೀಳ್ಯದೆಲೆಗಳು ಇನ್ ವಿಟ್ರೊದಲ್ಲಿ ಎಲ್‌ಡಿಎಲ್ ಕೊಲೆಸ್ಟ್ರಾಲ್‌ನ ಆಕ್ಸಿಡೀಕರಣವನ್ನು ತಡೆಯಲು ಸಮರ್ಥವಾಗಿವೆ ಮತ್ತು ಮ್ಯಾಕ್ರೋಫೇಜ್‌ಗಳಲ್ಲಿ ಲಿಪಿಡ್ ಸಂಗ್ರಹವನ್ನು ಕಡಿಮೆ ಮಾಡಲು ಸಮರ್ಥವಾಗಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.


ವೀಳ್ಯದೆಲೆ ಹೇಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ವೀಳ್ಯದೆಲೆಯು ಯುಜೆನಾಲ್ ಅನ್ನು ಹೊಂದಿರುತ್ತದೆ, ಇದು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದ್ದು, ಅದು ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತದೆ. ಯುಜೆನಾಲ್ ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ರಚನೆಯನ್ನು ತಡೆಯುತ್ತದೆ ಮತ್ತು ಕರುಳಿನಲ್ಲಿ ಲಿಪಿಡ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.


ವೀಳ್ಯದೆಲೆಯನ್ನು ಹೇಗೆ ಸೇವಿಸಬೇಕು
ಹೆಚ್ಚಿನ ಜನರು ಪಾನ್ ತಿನ್ನುವುದನ್ನು ಕೆಟ್ಟ ಅಭ್ಯಾಸವೆಂದು ಪರಿಗಣಿಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ. ವಾಸ್ತವದಲ್ಲಿ, ಅದನ್ನು ತಿನ್ನುವ ವಿಧಾನ ತಪ್ಪಾಗಿದೆ, ಇದು ಆರೋಗ್ಯಕ್ಕೆ ಅಪಾಯಕಾರಿ ಏಕೆಂದರೆ ಹೆಚ್ಚಿನ ಜನರು ತಂಬಾಕು ಮತ್ತು ಇತರ ಮಾದಕ ಪದಾರ್ಥಗಳನ್ನು ಸೇರಿಸಿ ಪಾನ್ ತಿನ್ನುತ್ತಾರೆ. ವಾಸ್ತವದಲ್ಲಿ ವೀಳ್ಯದೆಲೆಯ ಹಸಿರು ಎಲೆಗಳು ಆರೋಗ್ಯಕ್ಕೆ ಒಳ್ಳೆಯದು. ಈ ಹಸಿರು ಎಲೆಗಳಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಸಂಶೋಧಕರು ತಮ್ಮ ಅಧ್ಯಯನದಲ್ಲಿ ಬಳಸಿದಂತೆ ಹಸಿರು ಎಲೆಗಳನ್ನು ಅಗಿಯುವುದು ಅಥವಾ ಅವುಗಳ ರಸವನ್ನು ಕುಡಿಯುವುದು ಅದನ್ನು ಸೇವಿಸುವ ಅತ್ಯುತ್ತಮ ಮಾರ್ಗವಾಗಿದೆ.


ವೀಳ್ಯದೆಲೆಯ ಪೋಷಕಾಂಶಗಳು ಅಥವಾ ಗುಣಲಕ್ಷಣಗಳು
ವೀಳ್ಯದೆಲೆಯಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತವೆ, ಆದರೆ ಇದು ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳ ನಿಧಿಯಾಗಿದೆ. ಇದು ಅಯೋಡಿನ್, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಬಿ-1, ನಿಕೋಟಿನಿಕ್ ಆಮ್ಲ, ವಿಟಮಿನ್ ಸಿ, ಕ್ಯಾಲ್ಸಿಯಂ, ಫೈಬರ್ ಮತ್ತು ಖನಿಜಗಳು ಇತ್ಯಾದಿಗಳ ಉತ್ತಮ ಮೂಲವಾಗಿದೆ.


ಇದನ್ನೂ ಓದಿ-Diabetes: ಡೈಯಾಬೀಟಿಸ್ ಕುರಿತಾದ ಈ 4 ಮಿಥ್ಯ ಸಂಗತಿಗಳಿಗೆ ಕಿವಿಗೊಡಬೇಡಿ!


ವೀಳ್ಯದೆಲೆಯ ಇತರ ಆರೋಗ್ಯ ಪ್ರಯೋಜನಗಳು
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜೊತೆಗೆ, ವೀಳ್ಯದೆಲೆಯು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ, ಗಾಯದ ಗುಣಪಡಿಸುವಿಕೆಯನ್ನು ವೇಗಗೊಳಿಸುತ್ತದೆ, ಒತ್ತಡವನ್ನು ನಿವಾರಿಸುತ್ತದೆ, ಆಸ್ತಮಾಗೆ ಚಿಕಿತ್ಸೆ ನೀಡುತ್ತದೆ, ಬಾಯಿಯ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.


ಇದನ್ನೂ ಓದಿ-Peepal Tree: ಹಲವು ಕಾಯಿಲೆಗಳ ನಿವಾರಣೆಗೆ ರಾಮಬಾಣ ಉಪಾಯ ಈ ಅಶ್ವತ್ಥ ಮರ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.