ನವದೆಹಲಿ: ಬಿಲ್ವ ಪತ್ರೆಯಿಲ್ಲದೆ ಶಿವನ ಆರಾಧನೆಯು ಅಪೂರ್ಣ. ಶಿವನಿಗೆ ಬೇಲ್ ಹಣ್ಣನ್ನೂ ಅರ್ಪಿಸುತ್ತಾರೆ. ಶಿವನನ್ನು ಮೆಚ್ಚಿಸಲು ಬಿಲ್ವ ಪತ್ರೆಯನ್ನು ಅರ್ಪಿಸುವುದು ಉತ್ತಮ ಮಾರ್ಗವೆಂದು ನಂಬಲಾಗಿದೆ. ಅದೇ ರೀತಿ ಹಿಂದೂ ಧರ್ಮವನ್ನು ಹೊರತುಪಡಿಸಿ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಬಿಲ್ವ ಪತ್ರೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಬಿಲ್ವ ಪತ್ರೆಯ ಮರ ಅಥವಾ ಗಿಡವನ್ನು ನೆಟ್ಟರೆ ಮನೆಯ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಶಿವಪುರಾಣದ ಪ್ರಕಾರ ಬಿಲ್ವ ಪತ್ರೆಯ ಗಿಡ ಇರುವ ಸ್ಥಳವು ತೀರ್ಥಯಾತ್ರೆಯಂತೆ ಪವಿತ್ರ ಮತ್ತು ಪೂಜನೀಯವಾಗಿರುತ್ತದೆ ಎನ್ನಲಾಗಿದೆ. ಇಂತಹ ಮಂಗಳಕರವಾದ ಬಿಲ್ವ ಪತ್ರೆಯ ಗಿಡವನ್ನು ಮನೆಯಲ್ಲಿ ನೆಟ್ಟರೆ ಹಲವಾರು ಪ್ರಯೋಜನಗಳಿವೆ. ಈ ಸಸ್ಯವನ್ನು ನಡೆಲು ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಬೇಕಿದೆ.


ಇದನ್ನೂ ಓದಿ: ವರ್ಷದ ಕೊನೆಯ ತಿಂಗಳು 3 ರಾಶಿಯವರಿಗೆ ಹೊತ್ತು ತರುವುದು ಅದೃಷ್ಟ


ಮನೆಯಲ್ಲಿ ಬಿಲ್ವ ಪತ್ರೆ ಗಿಡ ನೆಡುವುದರ ಪ್ರಯೋಜನ


  • ಶಿವ ಪುರಾಣದ ಪ್ರಕಾರ ಶಿವಲಿಂಗದ ಮೇಲೆ ಬಿಲ್ವ ಪತ್ರೆ ಅರ್ಪಿಸುವುದರಿಂದ ನೀವು ಒಂದು ಕೋಟಿ ಕನ್ಯಾದಾನಕ್ಕೆ ಸಮಾನವಾದ ಫಲವನ್ನು ಪಡೆಯುತ್ತೀರಿ. ಭಗವಾನ್ ಶಿವನ ಹೊರತಾಗಿ ರಾಮನ ಭಕ್ತ ಹನುಮಂತನನ್ನು ಮೆಚ್ಚಿಸಲು ಬಿಲ್ವ ಪತ್ರೆಯು ಉಪಯುಕ್ತವಾಗಿದೆ.

  • ಬಿಲ್ವ ಪತ್ರೆಯ ಗಿಡಗಳನ್ನು ನೆಟ್ಟ ಮನೆಯಲ್ಲಿ ಬಡತನವೆಂದೂ ಬರುವುದಿಲ್ಲವಂತೆ. ಇಂತಹ ಮನೆಯಲ್ಲಿ ಯಾವಾಗಲೂ ಸುಖ- ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಅಷ್ಟೇ ಅಲ್ಲ ಹಣವನ್ನು ಇಡುವ ಸ್ಥಳದಲ್ಲಿ ಬಿಲ್ವ ಪತ್ರೆಯನ್ನು ಇಡುವುದರಿಂದ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗುತ್ತದಂತೆ.

  • ಬಿಲ್ವ ಪತ್ರೆ ಸಸ್ಯವು ವಾಮಾಚಾರ, ನಕಾರಾತ್ಮಕ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಈ ಗಿಡ ಇರುವ ಮನೆಯಿಂದ ನಕಾರಾತ್ಮಕ ಶಕ್ತಿಗಳು ದೂರ ಉಳಿಯುತ್ತವೆ ಎಂದು ನಂಬಲಾಗಿದೆ.

  • ಬಿಲ್ವ ಪತ್ರೆಯ ಗಿಡವು ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಈ ಕಾರಣದಿಂದ ಜನರು ಯಾವಾಗಲೂ ಸಂತೋಷದಿಂದ ಮತ್ತು ಆರೋಗ್ಯವಾಗಿರುತ್ತಾರಂತೆ.

  • ಜಾತಕದಲ್ಲಿನ ಚಂದ್ರ ದೋಷವನ್ನು ಹೋಗಲಾಡಿಸಲು ಬಿಲ್ವ ಪತ್ರೆಯ ಗಿಡವನ್ನು ನೆಡುವುದು ಉತ್ತಮ ಮಾರ್ಗವಾಗಿದೆ.


ಇದನ್ನೂ ಓದಿ: Chanakya Niti : ಕೆಳಗೆ ಬಿದ್ದಈ ವಸ್ತುಗಳು ತೆಗೆದುಕೊಳ್ಳಲು ಹಿಂಜರಿಯಬೇಡಿ, ಇದರಿಂದ ನಿಮಗಿದೆ ಆರ್ಥಿಕ ಲಾಭ!


ಬಿಲ್ವ ಪತ್ರೆಯ ಗಿಡ ನೆಡುವ ನಿಯಮಗಳು


ನೀವು ಆರ್ಥಿಕ ಸಮೃದ್ಧಿಯನ್ನು ಪಡೆಯಲು ಬಯಸಿದ್ರೆ, ಬಿಲ್ವ ಪತ್ರೆಯ ಗಿಡವನ್ನು ನೆಡಲು ಉತ್ತಮ ದಿಕ್ಕು ಉತ್ತರ-ದಕ್ಷಿಣವಾಗಿದೆ. ಬಿಲ್ವ ಪತ್ರೆ ಮರ ಅಥವಾ ಗಿಡದ ಬಳಿ ಸ್ವಚ್ಛತೆ ಇರಬೇಕು. ಚತುರ್ಥಿ, ಅಷ್ಟಮಿ, ನವಮಿ ಮತ್ತು ಅಮವಾಸ್ಯೆ ತಿಥಿಯಂದು ಬಿಲ್ವ ಪತ್ರೆಯಿಂದ ಪೂಜಿಸಬೇಕು. ಭೋಲೇನಾಥನಿಗೆ ಯಾವಾಗಲೂ 3 ಎಲೆಗಳಿರುವ ಬಿಲ್ವ ಪತ್ರೆಯನ್ನು ಮಾತ್ರ ಅರ್ಪಿಸಬೇಕು. ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ಬಿಲ್ವ ಪತ್ರೆ ಸಸ್ಯ ಅಥವಾ ಗಿಡಗಳನ್ನು ಮುಟ್ಟಬಾರದು ಎಂದು ಹೇಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.