ವರ್ಷದ ಕೊನೆಯ ತಿಂಗಳು 3 ರಾಶಿಯವರಿಗೆ ಹೊತ್ತು ತರುವುದು ಅದೃಷ್ಟ

December Horoscope 2022  :  ವರ್ಷದ ಕೊನೆಯ ತಿಂಗಳಲ್ಲಿ ನಡೆಯುವ ಬುಧ, ಶುಕ್ರ ಮತ್ತು ಸೂರ್ಯನ ಸಂಕ್ರಮಣವು 3 ರಾಶಿಯವರ ಅದೃಷ್ಟ ಬೆಳಗಲಿದೆ. 

Written by - Ranjitha R K | Last Updated : Nov 18, 2022, 02:24 PM IST
  • ಜ್ಯೋತಿಷ್ಯದ ದೃಷ್ಟಿಯಿಂದ ಡಿಸೆಂಬರ್ ತಿಂಗಳು ಬಹಳ ಮಹತ್ವದ್ದಾಗಿದೆ.
  • ಈ ತಿಂಗಳು 3 ಪ್ರಮುಖ ಗ್ರಹಗಳು ರಾಶಿಯನ್ನು ಬದಲಾಯಿಸಲಿವೆ.
  • ಡಿಸೆಂಬರ್‌ನಲ್ಲಿ ಎರಡು ಬಾರಿ ಗೋಚರಿಸಲಿರುವ ಬುಧ-ಶುಕ್ರ
ವರ್ಷದ ಕೊನೆಯ ತಿಂಗಳು 3 ರಾಶಿಯವರಿಗೆ ಹೊತ್ತು ತರುವುದು ಅದೃಷ್ಟ  title=
December Horoscope 2022

December Horoscope 2022 : ಜ್ಯೋತಿಷ್ಯದ ದೃಷ್ಟಿಯಿಂದ ಡಿಸೆಂಬರ್ ತಿಂಗಳು ಬಹಳ ಮಹತ್ವದ್ದಾಗಿದೆ. ಈ ತಿಂಗಳು 3 ಪ್ರಮುಖ ಗ್ರಹಗಳು ರಾಶಿಯನ್ನು ಬದಲಾಯಿಸಲಿವೆ. ಈ ಗ್ರಹಗಳ ಸಂಚಾರವು ಎಲ್ಲಾ 12 ರಾಶಿಗಳ  ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೆ 3 ರಾಶಿಯವರಿಗೆ ಮಾತ್ರ ವರ್ಷದ ಕೊನೆಯ ಮಾಸ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ.  ಡಿಸೆಂಬರ್ ಮೊದಲ ವಾರದಲ್ಲಿ ಅಂದರೆ ಡಿಸೆಂಬರ್ 3, 2022 ರಂದು ಬುಧ ಗ್ರಹ ಸಂಕ್ರಮಣ ನಡೆಯಲಿದೆ.  ಡಿಸೆಂಬರ್ 5 ರಂದು ಶುಕ್ರ ಸಂಕ್ರಮಣ ನಡೆಯಲಿದೆ. ಇದಾದ ನಂತರ ಡಿಸೆಂಬರ್ 16 ರಂದು ಸೂರ್ಯನ  ರಾಶಿ ಪರಿವರ್ತನೆಯಾಗಲಿದೆ. ಈ ರೀತಿಯಾಗಿ, ವರ್ಷದ ಕೊನೆಯ ತಿಂಗಳಲ್ಲಿ ನಡೆಯುವ ಬುಧ, ಶುಕ್ರ ಮತ್ತು ಸೂರ್ಯನ ಸಂಕ್ರಮಣವು 3 ರಾಶಿಯವರ ಅದೃಷ್ಟ ಬೆಳಗಲಿದೆ. 

ಡಿಸೆಂಬರ್‌ನಲ್ಲಿ ಎರಡು ಬಾರಿ  ಗೋಚರಿಸಲಿರುವ ಬುಧ-ಶುಕ್ರ  : 
ಇಷ್ಟೇ ಅಲ್ಲ, ಡಿಸೆಂಬರ್ ತಿಂಗಳಲ್ಲಿ ಬುಧ ಮತ್ತು ಶುಕ್ರ ಗ್ರಹಗಳು ಎರಡು ಬಾರಿ ರಾಶಿಯನ್ನು ಬದಲಾಯಿಸುತ್ತವೆ. ಡಿಸೆಂಬರ್ 3 ರ ನಂತರ, ಬುಧ ಗ್ರಹವು ಮತ್ತೆ ಡಿಸೆಂಬರ್ 27 ರಂದು ರಾಶಿ ಬದಲಾಯಿಸಿ ವೃಷಭ ರಾಶಿ ಪ್ರವೇಶಿಸಲಿದೆ. ಇನ್ನೊಂದೆಡೆ, ಶುಕ್ರ ಗ್ರಹ ಡಿಸೆಂಬರ್ 29 ರಂದು ಮಕರ  ರಾಶಿಯನ್ನು ಪ್ರವೇಶಿಸಲಿದೆ. 

ಇದನ್ನೂ ಓದಿ : ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಇಮ್ಮಡಿ ಯಾಗುವುದು ಸಂತೋಷ

ಡಿಸೆಂಬರ್ ನಲ್ಲಿ ಬೆಳಗಲಿದೆ  ಈ ರಾಶಿಯವರ ಅದೃಷ್ಟ :  
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಡಿಸೆಂಬರ್‌ನಲ್ಲಿ ನಡೆಯುವ ಗ್ರಹ ಸಂಕ್ರಮಣವು ತುಂಬಾ ಶುಭಕರವಾಗಿರುತ್ತದೆ. ಈ ಜನರು ತಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತಾರೆ. ವ್ಯವಹಾರಕ್ಕೆ ಸಮಯವು ಉತ್ತಮವಾಗಿರುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ. 

ವೃಶ್ಚಿಕ ರಾಶಿ : ಡಿಸೆಂಬರ್ ತಿಂಗಳು ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಲಾಭವನ್ನು ನೀಡುತ್ತದೆ.  ಕೈ ತಪ್ಪಿದ ಕೆಲಸಗಳು ಮತ್ತೆ ಕೈ ಹಿಡಿಯುವುದು.   ನಿಂತು ಹೋಗಿದ್ದ ಕೆಲಸಗಳು ಮತ್ತೆ ಪ್ರಾರಂಭವಾಗುತ್ತವೆ. ಮನೆಯಲ್ಲಿ ನಗು ಮತ್ತು ಸಂತೋಷದ ವಾತಾವರಣ ನೆಲೆಯಾಗುತ್ತದೆ. ವೃತ್ತಿ ಜೀವನವೂ ಉತ್ತಮವಾಗಿರಲಿದೆ.  

ಇದನ್ನೂ ಓದಿ : Jupiter Transit 2022: ನವೆಂಬರ್ 24 ರಿಂದ ದೇವ ಗುರು ಬೃಹಸ್ಪತಿಯ ನೇರ ನಡೆ ಆರಂಭ, ಈ ರಾಶಿಯ ಜನರ ಮೇಲೆ ಪ್ರಭಾವ

ಮಕರ ರಾಶಿ : ಡಿಸೆಂಬರ್‌ನಲ್ಲಿ ಬುಧ, ಶುಕ್ರ ಮತ್ತು ಸೂರ್ಯನ ಸಂಕ್ರಮಣವು ಮಕರ ರಾಶಿಯವರಿಗೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿರಲಿದೆ.  ಪ್ರಗತಿಗೆ ಅವಕಾಶಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ ಸಂಬಂಧಗಳು ಸುಧಾರಿಸುತ್ತವೆ. ಹಣಕಾಸಿನ ಪ್ರಯೋಜನವಾಗಲಿದೆ. ಸಾಲ ಕೊಟ್ಟಿರುವ ಹಣ ಕೈ ಸೇರುವುದು. ಕುಟುಂಬದ ಸದಸ್ಯರ ಸಹಾಯದಿಂದ, ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News