ಅಕ್ಷಯ ತೃತೀಯ ದಿನ ಈ ಏಳು ವಸ್ತುಗಳನ್ನು ಮನೆಗೆ ತನ್ನಿ, ಮಹಾಲಕ್ಷ್ಮಿಯೇ ಒಲಿಯುತ್ತಾಳೆ
ಆಸ್ತಿಕರ ನಂಬಿಕೆ ಪ್ರಕಾರ ಅಕ್ಷಯ ತೃತೀಯ ದಿನ ಮಹಾಲಕ್ಷ್ಮಿ ಖುದ್ದು ಧರೆಯ ಸಂಚಾರಕ್ಕೆ ಬರುತ್ತಾರಂತೆ. ದಕ್ಷಿಣ ದಿಕ್ಕು ಲಕ್ಷ್ಮಿಯ ದಿಕ್ಕಂತೆ. ಆದರೆ, ಅಕ್ಷಯ ತೃತೀಯ ದಿನ ಮಹಾಲಕ್ಷ್ಮಿ ವಿಶೇಷವಾಗಿ ಈಶಾನ್ಯ ಕೋನದಲ್ಲಿ ಬಂದು ಕುಳಿತುಕೊಳ್ಳುತ್ತಾಳೆ. ಹಾಗಾಗಿ ಅದು ವಿಶೇಷ ದಿನ ವೆಂದು ಹೇಳಲಾಗುತ್ತದೆ.
ಬೆಂಗಳೂರು : ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದ ದಿನವೇ ಅಕ್ಷಯ ತೃತೀಯ (Akshaya Tritiya 2021) . ಈ ಸಲ ಅಕ್ಷಯ ತೃತೀಯ ಮೇ 14 ರಂದು ಬರಲಿದೆ. ಅಕ್ಷಯ ತೃತೀಯ ದಿನ ಬಂಗಾರ ಖರೀದಿಸುವುದು ಶುಭ ಎನ್ನಲಾಗುತ್ತದೆ. ಈ ದಿನ ಭಗವಾನ್ ವಿಷ್ಣು (Lord Vishnu) ಮತ್ತು ಮಹಾಲಕ್ಷ್ಮಿ ದೇವಿಯ (Godess Lakshmi) ಪೂಜೆ ಮಾಡಿದರೆ ಶುಭ ಮತ್ತು ಸುಖ ಸಮೃದ್ದಿ ಸಿಗುತ್ತದೆ ಎನ್ನಲಾಗುತ್ತದೆ.
ಆಸ್ತಿಕರ ನಂಬಿಕೆ ಪ್ರಕಾರ ಅಕ್ಷಯ ತೃತೀಯ ದಿನ ಮಹಾಲಕ್ಷ್ಮಿ (Godess Lakshmi) ಖುದ್ದು ಧರೆಯ ಸಂಚಾರಕ್ಕೆ ಬರುತ್ತಾರಂತೆ. ದಕ್ಷಿಣ ದಿಕ್ಕು ಲಕ್ಷ್ಮಿಯ ದಿಕ್ಕಂತೆ. ಆದರೆ, ಅಕ್ಷಯ ತೃತೀಯ ದಿನ (Akshaya Tritiya 2021) ಮಹಾಲಕ್ಷ್ಮಿ ವಿಶೇಷವಾಗಿ ಈಶಾನ್ಯ ಕೋನದಲ್ಲಿ ಬಂದು ಕುಳಿತುಕೊಳ್ಳುತ್ತಾಳೆ. ಹಾಗಾಗಿ ಅದು ವಿಶೇಷ ದಿನ ವೆಂದು ಹೇಳಲಾಗುತ್ತದೆ. ಆ ದಿನ ಲಕ್ಷ್ಮಿ ಕೃಪೆಗೆ ಬೇಗ ಪಾತ್ರರಾಗಬಹುದಂತೆ.
ಇದನ್ನೂ ಓದಿ : ನಿಮ್ಮ ಮನೆಯಲ್ಲೂ 7 ಕುದುರೆಗಳ ಫೋಟೋ ಇದೆಯಾ? ತಿಳಿಯಿರಿ ಇದರ ಮಹತ್ವ
ಅಕ್ಷಯ ತೃತೀಯ ದಿನ ಲಕ್ಷ್ಮಿಯು ಈಶಾನ್ಯ ಕೋನದಲ್ಲಿ ವಿರಾಜಮಾನವಾಗುವುದರಿಂದ ಅಕ್ಷಯ ತೃತೀಯ ದಿನ ಮನೆಯ ಈಶಾನ್ಯ ಭಾಗದಲ್ಲಿ ಯಾವುದಾದರೂ ವಸ್ತುವನ್ನು ಸ್ಥಾಪಿಸಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು.
ಈಶಾನ್ಯ ದಿಕ್ಕಿನಲ್ಲಿ ಏನು ಇಡಬೇಕು.
1. ಲಕ್ಷ್ಮಿ ಚರಣ ಪಾದುಕೆ
ಅಕ್ಷಯ ತೃತೀಯ ದಿನ (Akshaya Tritiya) ಈಶಾನ್ಯ ದಿಕ್ಕಿನಲ್ಲಿ ಲಕ್ಷ್ಮಿಯ ಚರಣ ಪಾದುಕೆಯನ್ನಿಟ್ಟು ಸ್ಥಾಪನೆ ಮಾಡಿದರೆ ಶುಭ ಎನ್ನಲಾಗುತ್ತದೆ. ನೀವು ಚಿನ್ನ (Gold), ಬೆಳ್ಳಿಯ ಚರಣ ಪಾದುಕೆಗಳನ್ನು ಇಡಬಹುದು. ಚಿನ್ನ ಬೆಳ್ಳಿಯ ಚರಣ ಪಾದುಕೆಗಳು ಇಲ್ಲದೇ ಹೋದರೆ, ಯಾವುದೇ ಲೋಹದ ಪಾದುಕೆಗಳನ್ನು ಇಟ್ಟು ಪೂಜೆಸಬಹುದು.
2. ಹಳದಿ ಕವಡೆ :
ಮಹಾಲಕ್ಷ್ಮಿಯನ್ನು ಎಂಟು ಸ್ವರೂಪಗಳಲ್ಲಿ ನೋಡಲಾಗುತ್ತದೆ. ಅದರಲ್ಲಿ ಒಂದು ಕವಡೆ, ಕವಡೆಯನ್ನು ಮಹಾಲಕ್ಷ್ಮಿಯ ಪ್ರತೀಕ ಎನ್ನಲಾಗುತ್ತದೆ. ಹಳದಿ ಕವಡೆಯನ್ನು ಈಶಾನ್ಯ ದಿಕ್ಕಿನಲ್ಲಿಟ್ಟು ಪೂಜೆ ಮಾಡಿದರೆ ಸುಖ ಸಮೃದ್ಧಿ ನಿಶ್ಚಿತವಂತೆ.
ಇದನ್ನೂ ಓದಿ : Richest Zodiac Sign: ಈ ನಾಲ್ಕು ರಾಶಿ ಜಾತಕದವರಿಗೆ ಜೀವನದಲ್ಲಿ ಹಣದ ಕೊರತೆ ಎಂದೂ ಕಾಡುವುದಿಲ್ಲ
3. ಏಕಾಕ್ಷಿ ತೆಂಗಿನಕಾಯಿ
ತೆಂಗಿನಕಾಯಿ (Coconut) ಕೂಡಾ ಲಕ್ಷ್ಮಿ ಸ್ವರೂಪವೇ. ಏಕಾಕ್ಷಿ ತೆಂಗಿನಕಾಯಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿಟ್ಟು ಪೂಜೆ ಮಾಡಿ. ಶುಭವಾಗುತ್ತದೆ.
4. ಲೋಹದ ಆಮೆ:
ಅಕ್ಷಯ ತೃತೀಯ ದಿನ ಈಶಾನ್ಯ ದಿಕ್ಕಿನಲ್ಲಿ ಖಂಡಿತವಾಗಿಯೂ ಲೋಹದ ಆಮೆ ಇಟ್ಟು ಪೂಜೆ ಮಾಡಿ. ನವರತ್ನದ ಆಮೆ ಇದ್ದರೆ ಇನ್ನೂ ಉತ್ತಮ. ಸ್ಪಟಿಕದ ಆಮೆ ಪೂಜೆಗೆ ಸರ್ವೋತ್ತಮ ಎಂದು ಹೇಳಲಾಗುತ್ತದೆ.
5. ದಕ್ಷಿಣಾವರ್ತಿ ಶಂಖ:
ಈಶಾನ್ಯ ದಿಕ್ಕಿಗೆ ದಕ್ಷಿಣಾವರ್ತಿ ಶಂಖ ಇಟ್ಟು ಪೂಜೆ ಮಾಡಿ. ಶಂಖ ಕೂಡಾ ಮಹಾಲಕ್ಷ್ಮಿಯ (Mahalakshmi) ಪ್ರತೀಕ ಎನ್ನಲಾಗುತ್ತದೆ. ಮುತ್ತಿನ ಶಂಖ ಸಿಕ್ಕಿದರೆ ಇನ್ನೂ ಒಳ್ಳೆಯದು.
ಇದನ್ನೂ ಓದಿ : ನಿಮ್ಮ ನೆಚ್ಚಿನ ಗೆಳೆಯ/ಗೆಳತಿಯ ಮೇಲೆ ಪ್ರೀತಿ ಹುಟ್ತಿದೆಯಾ? ತಿಳಿದುಕೊಳ್ಳುವುದು ಹೇಗೆ?
6.ಬಾನ್ಸುರಿ:
ಅಕ್ಷಯ ತೃತೀಯ ದಿನ ಈಶಾನ್ಯ ಭಾಗದಲ್ಲಿ ಖಂಡಿತಾ ಒಂದು ಬಾನ್ಸುರಿಯನ್ನು ಇಡಿ. ಅಕ್ಷಯ ತೃತೀಯ ದಿನ ಬಾನ್ಸುರಿಯ ಪೂಜೆ ಮಾಡಬೇಕು ಎಂಬ ನಿಯಮ ಇದೆ. ಇದರ ಜೊತೆ ಹಿತ್ತಾಳೆಯ ಗಂಟೆಯನ್ನೂ ಇಡಿ.
7. ಮಣ್ಣಿನ ಕಳಶ: ಅಕ್ಷಯ ತೃತೀಯ ದಿನ ಮನೆಯ ಈಶಾನ್ಯ ದಿಕ್ಕಿನಲ್ಲಿ ಮಣ್ಣಿನ ಕಳಶ (Kalasha) ಇಟ್ಟು ಪೂಜೆ ಮಾಡಿ. ಇದರಿಂದ ಶುಭವಾಗುತ್ತದೆ. ಇವೆಲ್ಲಾ ವಾಸ್ತು ಪಂಡಿತರು ಹೇಳುವಂತಾ ಪೂಜಾ ವಿಧಾನ. ಈ ಎಲ್ಲಾ ವಸ್ತುಗಳನ್ನು ತಂದು ಈಶಾನ್ಯ ದಿಕ್ಕಿನಲ್ಲಿಟ್ಟರೆ, ಮಹಾಲಕ್ಷ್ಮಿಯು ದಕ್ಷಿಣ ದಿಕ್ಕಿನಿಂದ ಈಶಾನ್ಯ ದಿಕ್ಕಿಗೆ ಬಂದು ಪ್ರತಿಷ್ಠಾಪನೆಗೊಳ್ಳುತ್ತಾಳೆ ಎನ್ನಲಾಗುತ್ತದೆ.
ಇದನ್ನೂ ಓದಿ : Sun Transit 2021: ಅಕ್ಷಯ ತೃತಿಯಾ ದಿನ ಸೂರ್ಯನ ರಾಶಿ ಪರಿವರ್ತನೆಯಿಂದ ಮೂರು ಗ್ರಹಗಳ ಯೋಗ, ಯಾರಿಗೆ ಲಾಭ? ಯಾರಿಗೆ ನಷ್ಟ?
ಕೊನೆಯ ಮಾತು : ಇದು ಕರೋನಾ ಕಾಲ ನೆನಪಿಡಿ. ಈ ವಸ್ತುಗಳನ್ನು ಕೊಳ್ಳಲು ಮಾರ್ಕೆಟ್ ಹೋಗುವ ಅಗತ್ಯವೇನಿಲ್ಲ. ಅದರಿಂದ ಅಪಾಯ ತಪ್ಪಿದ್ದಲ್ಲ. ಸಾಧ್ಯವಾದಷ್ಟು ಮನೆಯಲ್ಲೇ ಈ ಸಾಮಾಗ್ರಿ ಇದೆಯಾ ನೋಡಿ. ಇಲ್ಲವಾದರೆ ಆನ್ ಲೈನ್ ಮೂಲಕ ತರಿಸಿ. ಲಾಕ್ ಡೌನ್ (Lockdown) , ಕರೋನಾ ವೇಳೆ ಹೊರಗೆ ಹೋಗಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.