Vastu Tips for Home : ನೀವು ವಾಸ್ತು ಶಾಸ್ತ್ರವನ್ನು (Vastu Shastra) ನಂಬುವುದಾದರೆ ವಾಸ್ತುವಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳಿರುತ್ತವೆ. ಯಾವ ಮನೆಯಲ್ಲಿ ವಾಸ್ತು ದೋಷ (Vastu dosha) ಇರುತ್ತದೆಯೋ ಆ ಮನೆಯಲ್ಲಿ ಏಳಿಗೆ ಎನ್ನುವುದೇ ಇರುವುದಿಲ್ಲ. ಅಲ್ಲದೆ, ಮನೆಯ ಸದಸ್ಯರು ಕೂಡಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ಮನೆ ನಿರ್ಮಾಣಕ್ಕೂ ಮುನ್ನ ಅಥವಾ ಮನೆ ಖರೀದಿಗೆ ಮುನ್ನ ವಾಸ್ತು ನೋಡುವ ಸಲಹೆಯನ್ನು ಹಿರಿಯರು ನೀಡುತ್ತಾರೆ. ಒಂದು ವೇಳೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯನ್ನು ಒಡೆದು ಹಾಕಬೇಕು ಎಂದೇನಿಲ್ಲ. ಮನೆಯಲ್ಲಿನ ಕೆಲವು ವಸ್ತುಗಳ ದಿಕ್ಕು ಬದಲಾವಣೆಯಿಂದ ಅಥವಾ ವಾಸ್ತುವಿನಲ್ಲಿ ಸೂಚಿಸಿದ ಕೆಲ ವಸ್ತುಗಳಿಂದ ಈ ದೋಷಗಳನ್ನು ಸರಿಪಡಿಸಬಹುದು. 7 ಬಿಳಿ ಕುದುರೆಗಳ ಫೋಟೋಗೆ ವಾಸ್ತುವಿನಲ್ಲಿ ಬಹಳ ಪ್ರಾಮುಖ್ಯತೆಯಿದೆ.
ಏಳು ಬಿಳಿ ಕುದುರೆಗಳ ಫೋಟೋವನ್ನು ಮನೆಯಲ್ಲಿಟ್ಟರೆ ಆಗುವ ಪ್ರಯೋಜನಗಳು ಇವೆ :
1. ಕೆಲವೊಮ್ಮೆ ಮನೆಯಲ್ಲಿ ಇದಕ್ಕಿದ್ದಂತೆ ಗೊಂದಲ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿ 7 ಬಿಳಿ ಕುದುರೆಗಳ ಫೋಟೋವನ್ನು ( Seven horse picture) ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ಇದನ್ನೂ ಓದಿ : Richest Zodiac Sign: ಈ ನಾಲ್ಕು ರಾಶಿ ಜಾತಕದವರಿಗೆ ಜೀವನದಲ್ಲಿ ಹಣದ ಕೊರತೆ ಎಂದೂ ಕಾಡುವುದಿಲ್ಲ
2. ಇನ್ನು ನಿಮ್ಮ ಕೆಲಸದ ಸ್ಥಳದಲ್ಲಿ ಕುದುರೆಯ ಚಿತ್ರವನ್ನು ಇರಿಸಿದರೆ, ನಿಮ್ಮ ಕೆಲಸದಲ್ಲಿ ಅಭಿವೃದ್ಧಿ ಮತ್ತು ಪ್ರಗತಿಗೆ ಕಾರಣವಾಗುತ್ತದೆ. ನೀವು ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ಈ ಫೋಟೋವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸಿ. ಕಚೇರಿಗೆ ಹೋಗುವುದಾದರೆ, ಅದನ್ನು ಕಚೇರಿಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಇರಿಸಿ.
3. ನೀವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರೆ, ಮನೆಯ ಯಾವ ದಿಕ್ಕಿನಲ್ಲಾದರೂ ಸರಿ, ಈ ಫೋಟೋವನ್ನು ಹಾಕಿ. ಆದರೆ ನೆನಪಿಡಿ, ಈ ಚಿತ್ರ ನಿಮ್ಮ ಕಣ್ಣಿಗೆ ಆಗಾಗ ಬೀಳುವ ಜಾಗದಲ್ಲಿ ಫೋಟೋವನ್ನು ಹಾಕಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
4. ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ (Negetive energy) ಸಮಸ್ಯೆ ಇದ್ದರೆ, ಬಿಳಿ ಕುದುರೆಯ ಚಿತ್ರವನ್ನು ಮನೆಯ ಹಾಲ್ ನಲ್ಲೇ ಹಾಕಿ.
ಇದನ್ನೂ ಓದಿ : ನಿಮ್ಮ ನೆಚ್ಚಿನ ಗೆಳೆಯ/ಗೆಳತಿಯ ಮೇಲೆ ಪ್ರೀತಿ ಹುಟ್ತಿದೆಯಾ? ತಿಳಿದುಕೊಳ್ಳುವುದು ಹೇಗೆ?
5. ಓಡುತ್ತಿರುವ ಕುದುರೆ ಅಂದರೆ, ವಾಸ್ತು ಶಾಸ್ತ್ರದ (Vastu shastra) ಪ್ರಕಾರ ವೇಗ, ಯಶಸ್ಸು ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಅದರ ಫೋಟೋ ಹಾಕುವ ಮೂಲಕ, ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಪ್ರಗತಿ ನೆಲೆಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ