ನವದೆಹಲಿ: ವೈದಿಕ ಗ್ರಂಥಗಳಲ್ಲಿ ಬುಧ ಗ್ರಹವನ್ನು ಬುದ್ಧಿವಂತಿಕೆ ಮತ್ತು ತರ್ಕದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮೇಷ ರಾಶಿಯ 3ನೇ ಮತ್ತು 6ನೇ ಮನೆಯ ಅಧಿಪತಿ. ಈಗ ಬುಧ ಗ್ರಹವು ಮೇಷ ರಾಶಿಯ ಮೊದಲ ಮನೆಯಲ್ಲಿ ಏಪ್ರಿಲ್ 23ರಂದು ಅಸ್ತಮಿಸಲಿದೆ. ಬುಧನ ಈ ಅಸ್ತಮಿಕೆಯಿಂದ ಕೆಲವು ರಾಶಿಯರು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮ  ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಅಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರತಿಕೂಲ ಪರಿಣಾಮ ಎದುರಿಸಬೇಕಾಗಬಹುದು. ಅಲ್ಲದೆ ನಿದ್ರಾಹೀನತೆ, ಹಸಿವಿನ ಕೊರತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಕೊರತೆಯಂತಹ ಆರೋಗ್ಯ ಸಂಬಂಧಿತ ಸಮಸ್ಯೆಗಳುಂಟಾಗುತ್ತವೆ. ಬುಧಗ್ರಹದ ಅಸ್ತವ್ಯಸ್ತದಿಂದ 4 ರಾಶಿಯರಿಗೆ ಅದೃಷ್ಟವೂ ಕೈಕೊಡಲಿದೆ.  


COMMERCIAL BREAK
SCROLL TO CONTINUE READING

ಮೇಷ ರಾಶಿ: ಬುಧ ಅಸ್ತಮಿಸಿದಾಗ ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಧಿಕ ರಕ್ತದೊತ್ತಡ, ತಲೆನೋವಿನಂತಹ ಸಮಸ್ಯೆಗಳಿಂದ ಬಳಲಬೇಕಾಗಬಹುದು. ಹೀಗಾಗಿ ನೀವು ಆಹಾರದ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಜೀವನಶೈಲಿಯಲ್ಲಿ ಬದಲಾವಣೆ ತರುವ ಅವಶ್ಯಕತೆಯಿದೆ. ಈ ಸಮಯದಲ್ಲಿ ನೀವು ಉದ್ಯೋಗದಲ್ಲಿ ಉತ್ತಮ ಅವಕಾಶ ಪಡೆಯಬಹುದು. ನಿಮ್ಮ ಪ್ರತಿಸ್ಪರ್ಧಿಗಳಿಗೆ ಮಾತ್ರ ನೀವು ಕಠಿಣ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: ತುಳಸಿ ಸಸಿಯ ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ ಮನೆಯೊಳಗೆ ಲಕ್ಷ್ಮೀ ಪ್ರವೇಶ ಖಂಡಿತಾ


ಕರ್ಕಾಟಕ ರಾಶಿ: ಈ ರಾಶಿಯ ಜನರಿಗೆ ಬುಧನ ಅಸ್ತವು ಒಳ್ಳೆಯದಲ್ಲ. ಅನೇಕ ಸುವರ್ಣಾವಕಾಶಗಳು ಅವರ ಕೈಯಿಂದ ಜಾರಿಕೊಳ್ಳಬಹುದು. ಈ ರಾಶಿಯ ಕೆಲವರು ಕೆಲಸ ಕಳೆದುಕೊಳ್ಳಬೇಕಾಗಬಹುದು. ನಿಮ್ಮ ಗುರಿಗಳನ್ನು ಪೂರೈಸಲು ನಿಮಗೆ ಸಾಧ್ಯವಾಗದಿರಬಹುದು ಅಥವಾ ನಿಮ್ಮ ಹಿರಿಯರು ನಿಮ್ಮೊಂದಿಗೆ ಕೋಪಗೊಳ್ಳಬಹುದು. ಇದರಿಂದ ನಿಮ್ಮ ವೃತ್ತಿಜೀವನದಲ್ಲಿ ನೀವು ಬಳಲಬಹುದು. ನೀವು ಶಾಂತ ಮನಸ್ಸಿನಿಂದ ಯೋಜಿಸಿ ಕೆಲಸ ಮಾಡಿದರೆ ಯಶಸ್ಸನ್ನು ಪಡೆಯಬಹುದು.


ಕನ್ಯಾ ರಾಶಿ: ಬುಧನ ಅಸ್ತದಿಂದ ನೀವು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದೃಷ್ಟವು ನಿಮಗೆ ಒಲವು ತೋರುವ ಸಾಧ್ಯತೆಗಳು ಕಡಿಮೆ, ಈ ಕಾರಣದಿಂದ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಕೆಲಸದ ಸ್ಥಳದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು, ಇದರಿಂದ ನೀವು ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಸ್ವಂತ ವ್ಯಾಪಾರ ಮಾಡುವವರು ನಷ್ಟ ಅನುಭವಿಸಬಹುದು. ಸ್ಥಳೀಯರ ಖರ್ಚುಗಳು ಹೆಚ್ಚಾಗಬಹುದು. ಈ ಅವಧಿಯಲ್ಲಿ ಗಳಿಸಿದ ಹಣದಿಂದ ಉಳಿತಾಯ ಮಾಡುವುದು ನಿಮಗೆ ಸುಲಭವಲ್ಲ.


ಇದನ್ನೂ ಓದಿ: Vastu Tips For Money: ಇದೇ ಆ ಸಸ್ಯ, ಹಣವನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ! ಇಂದೇ ಮನೆಗೆ ತನ್ನಿ


ಧನು ರಾಶಿ: ಬುಧ ಗ್ರಹದ ಅಸ್ತದ ಕಾರಣ ನಿಮ್ಮ ಮುಂಬರುವ ಸಮಯವು ಸವಾಲಿನದಾಗಿರುತ್ತದೆ. ವ್ಯವಹಾರದಲ್ಲಿ ಕಠಿಣ ಸ್ಪರ್ಧೆ ಇರಬಹುದು. ವ್ಯಾಪಾರ ಪಾಲುದಾರರ ಸಂಪೂರ್ಣ ಬೆಂಬಲ ಪಡೆಯದ ಕಾರಣ, ನೀವು ನಷ್ಟ ಭರಿಸಬೇಕಾಗಬಹುದು. ನಿಮ್ಮ ಆದಾಯಕ್ಕೆ ಹೋಲಿಸಿದರೆ ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ, ಅದನ್ನು ಪೂರೈಸಲು ನಿಮಗೆ ಕಷ್ಟವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ನಿರಾಶೆ ಅನುಭವಿಸಬಹುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಬಹುದು.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.