ಈ ಚೈತ್ರ ನವರಾತ್ರಿ ಅಷ್ಟಮಿ-ನವಮಿಯಂದು ಅಪರೂಪದ ಯೋಗ! ಪೂಜೆಯ ಮಂಗಳಕರ ಸಮಯ ತಿಳಿಯಿರಿ

ಚೈತ್ರ ನವರಾತ್ರಿ ಅಷ್ಟಮಿ ದಿನಾಂಕ: ಹಿಂದೂ ಪಂಚಾಂಗ ಮತ್ತು ಜ್ಯೋತಿಷ್ಯದ ಪ್ರಕಾರ ಈ ಬಾರಿ ಚೈತ್ರ ನವರಾತ್ರಿಯ ಅಷ್ಟಮಿ ಮತ್ತು ನವಮಿ ದಿನಾಂಕಗಳಂದು ಅಪರೂಪದ ಯೋಗಗಳು ರೂಪುಗೊಳ್ಳುತ್ತಿವೆ. ಈ ಮಂಗಳಕರ ಯೋಗಗಳಲ್ಲಿ ಮಾಡುವ ಪೂಜೆಯು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ.

Written by - Puttaraj K Alur | Last Updated : Mar 27, 2023, 08:25 AM IST
  • ಹಿಂದೂ ಪಂಚಾಂಗದ ಪ್ರಕಾರ ಚೈತ್ರ ನವರಾತ್ರಿಯಲ್ಲಿ ಮಾರ್ಚ್ 29ರಂದು ಮಹಾ ಅಷ್ಟಮಿ ಬರುತ್ತದೆ
  • ಚೈತ್ರ ಶುಕ್ಲ ಅಷ್ಟಮಿ ಮಾ.28ರಂದು ರಾತ್ರಿ 7:02ರಿಂದ ಪ್ರಾರಂಭವಾಗಿ, ಮಾ.29ರಂದು ರಾತ್ರಿ 9:07ಕ್ಕೆ ಕೊನೆಗೊಳ್ಳುತ್ತದೆ
  • ರಾಮ ನವಮಿಯನ್ನು ಮಾರ್ಚ್ 30ರಂದು ಚೈತ್ರ ನವರಾತ್ರಿಯಲ್ಲಿ ಆಚರಿಸಲಾಗುತ್ತದೆ
ಈ ಚೈತ್ರ ನವರಾತ್ರಿ ಅಷ್ಟಮಿ-ನವಮಿಯಂದು ಅಪರೂಪದ ಯೋಗ! ಪೂಜೆಯ ಮಂಗಳಕರ ಸಮಯ ತಿಳಿಯಿರಿ title=
ಚೈತ್ರ ನವರಾತ್ರಿ ರಾಮ ನವಮಿ

ನವದೆಹಲಿ: ನವರಾತ್ರಿಯ 9 ದಿನಗಳಲ್ಲಿ ತಾಯಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ದೇವಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಜೀವನದ ಎಲ್ಲಾ ದುಃಖಗಳು ಮತ್ತು ನೋವುಗಳು ದೂರವಾಗುತ್ತವೆ. ಈ 9 ದಿನಗಳಲ್ಲಿ ದುರ್ಗಾ ಮಾತೆಯೇ ಭೂಮಿಯಲ್ಲಿ ಸಂಚರಿಸುತ್ತಾಳೆಂದು ನಂಬಲಾಗಿದೆ. ಈ ವರ್ಷ ಚೈತ್ರ ನವರಾತ್ರಿಯು ಮಾರ್ಚ್ 22ರಿಂದ ಪ್ರಾರಂಭವಾಗಿದ್ದು, ಮಾರ್ಚ್ 30ರವರೆಗೆ ನಡೆಯಲಿದೆ. ಈ ಬಾರಿ ನವರಾತ್ರಿಯಂದು ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನಗಳು ಬಹಳ ಮಂಗಳಕರವಾಗಿವೆ. ಮತ್ತೊಂದೆಡೆ ಅಷ್ಟಮಿ ಮತ್ತು ನವಮಿ ತಿಥಿಯಂದು ಶುಭ ಯೋಗಗಳ ಅಪರೂಪದ ಸಂಯೋಜನೆಯು ರೂಪುಗೊಳ್ಳುತ್ತಿದೆ. ಆ ನವಮಿ ತಿಥಿಯಲ್ಲಿ ರಾಮನವಮಿ ಎಂದು ಕರೆಯುತ್ತಾರೆ, ಏಕೆಂದರೆ ಈ ದಿನ ಭಗವಾನ್ ರಾಮನ ಜನ್ಮದಿನವನ್ನು ಆಚರಿಸಲಾಗುತ್ತದೆ. ಅಷ್ಟಮಿ ಮತ್ತು ನವಮಿ ದಿನಾಂಕಗಳು ಯಾವಾಗ ಬರುತ್ತವೆಂದು ತಿಳಿಯಿರಿ. ಅಲ್ಲದೆ ಈ ದಿನಾಂಕಗಳಲ್ಲಿ ಯಾವ ಶುಭ ಯೋಗಗಳು ರೂಪುಗೊಳ್ಳುತ್ತವೆ? ಅನ್ನೋದರ ಮಾಹಿತಿ ತಿಳಿಯಿರಿ.

ಅಷ್ಟಮಿ ದಿನಾಂಕ ಮತ್ತು ಮಂಗಳಕರ ಯೋಗ

ಹಿಂದೂ ಪಂಚಾಂಗದ ಪ್ರಕಾರ ಚೈತ್ರ ನವರಾತ್ರಿಯಲ್ಲಿ ಮಾರ್ಚ್ 29ರಂದು ಮಹಾ ಅಷ್ಟಮಿ ಬರುತ್ತದೆ. ಚೈತ್ರ ಶುಕ್ಲ ಅಷ್ಟಮಿ ದಿನಾಂಕವು ಮಾರ್ಚ್ 28ರಂದು ರಾತ್ರಿ 7:02ರಿಂದ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 29ರಂದು ರಾತ್ರಿ 9:07ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ದುರ್ಗಾ ಅಷ್ಟಮಿ ಉಪವಾಸವನ್ನು ಮಾರ್ಚ್ 29ರಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: Grah Gochar 2023: 20 ವರ್ಷಗಳ ನಂತರ ಮಂಗಳಕರ ರಾಜಯೋಗ, ಈ ರಾಶಿಯವರ ಮೇಲೆ ಹಣದ ಮಳೆ!

ಈ ಅಷ್ಟಮಿ ತಿಥಿಯಂದು ಶೋಭನ ಯೋಗ ಮತ್ತು ರವಿಯೋಗವು ರೂಪುಗೊಳ್ಳುತ್ತಿದೆ. ಶೋಭನ ಯೋಗವು ಮಾರ್ಚ್ 28ರ ರಾತ್ರಿ 11:36ರಿಂದ ಮಾರ್ಚ್ 29ರ ಬೆಳಗ್ಗೆ 12:13ರವರೆಗೆ ಇರುತ್ತದೆ. ಮತ್ತೊಂದೆಡೆ ಮಾರ್ಚ್ 29ರ ರಾತ್ರಿ 8:07ರಿಂದ ಮಾರ್ಚ್ 30ರ ಬೆಳಗ್ಗೆ 6:14ರವರೆಗೆ ರವಿಯೋಗ ಇರುತ್ತದೆ. ಈ ಯೋಗದಲ್ಲಿ ಮಾಡಿದ ಕೆಲಸವು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ.

ನವಮಿ ದಿನಾಂಕ ಮತ್ತು ಮಂಗಳಕರ ಯೋಗ

ರಾಮ ನವಮಿಯನ್ನು ಮಾರ್ಚ್ 30ರಂದು ಚೈತ್ರ ನವರಾತ್ರಿಯಲ್ಲಿ ಆಚರಿಸಲಾಗುತ್ತದೆ. ಇದನ್ನು ಮಹಾನವಮಿ ಎಂತಲೂ ಕರೆಯುತ್ತಾರೆ. ಈ ದಿನ ತಾಯಿ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಚೈತ್ರ ಶುಕ್ಲ ನವಮಿ ತಿಥಿಯು ಮಾರ್ಚ್ 29ರಂದು ರಾತ್ರಿ 9:07ರಿಂದ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 30ರಂದು ರಾತ್ರಿ 11:30ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ಮಾರ್ಚ್ 30ರಂದು ರಾಮ ನವಮಿ ಇರುತ್ತದೆ.

ಇದನ್ನೂ ಓದಿ: Horoscope Today : ಇಂದಿನ ರಾಶಿ ಭವಿಷ್ಯ : ಮಹಾದೇವನ ಕೃಪೆಯಿಂದ ಈ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು!

ಈ ರಾಮನವಮಿಯಂದು 4 ಶುಭ ಯೋಗಗಳ ಸಂಯೋಜನೆಯು ನಡೆಯುತ್ತಿದೆ. ನವಮಿ ತಿಥಿಯಂದು ಗುರು ಪುಷ್ಯ ಯೋಗ, ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗ ಇರುತ್ತದೆ. ಇಡೀ ದಿನ ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗವನ್ನು ಹೊಂದುವುದರಿಂದ ಇಡೀ ದಿನ ಹವನ-ಕನ್ಯಾ ಪೂಜೆಗೆ ಮಂಗಳಕರವಾಗಿರುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News