ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನು 25 ದಿನಗಳಲ್ಲಿ ರಾಶಿಯನ್ನು ಬದಲಾಯಿಸಲಿದ್ದಾನೆ. ಬುಧ ಗ್ರಹವು ಬುದ್ಧಿವಂತಿಕೆ, ಸಂಪತ್ತು, ವ್ಯವಹಾರ, ಸಂವಹನ, ತಾರ್ಕಿಕ ಶಕ್ತಿ ನೀಡುತ್ತದೆ. ಯಾರ ಜಾತಕದಲ್ಲಿ ಬುಧನು ಶುಭ ಸ್ಥಾನದಲ್ಲಿರುತ್ತದೋ ಅವರು ತೀಕ್ಷ್ಣ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ. ಅವರ ವಿವೇಚನಾ ಶಕ್ತಿ ಚೆನ್ನಾಗಿರುತ್ತದೆ. ಅವರು ವ್ಯಾಪಾರದಲ್ಲಿ ಅಪಾರ ಹಣ ಗಳಿಸುತ್ತಾರೆ. ಇಂತವರ ಜಾತಕದಲ್ಲಿ ಬುಧದ ಮಹಾದಶಾ ಪ್ರಾರಂಭವಾದಾಗ ಅವರು ಅಪಾರ ಲಾಭಗಳನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಸಾಕಷ್ಟು ಹಣವನ್ನು ಪಡೆಯುತ್ತಾರೆ.


COMMERCIAL BREAK
SCROLL TO CONTINUE READING

ಬುಧನ ಮಹಾದಶಾ 17 ವರ್ಷಗಳವರೆಗೆ ಇರುತ್ತದೆ


ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧದ ಮಹಾದಶವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಮೇಲೆ ಬುಧದ ಮಹಾದಶಾ 17 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಈ ರಾಶಿಯವರು ಬುದ್ಧಿವಂತಿಕೆ, ಸಂವಹನ ಶೈಲಿ, ಸೃಜನಶೀಲತೆ, ವ್ಯವಹಾರ ಮತ್ತು ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಪ್ರಭಾವವಿರುತ್ತದೆ. ಜಾತಕದಲ್ಲಿ ಬುಧನು ಶುಭವಾಗಿದ್ದರೆ, ವ್ಯಕ್ತಿಯ ಈ 17 ವರ್ಷಗಳ ಕಾಲ ರಾಜನಂತೆ ಜೀವನ ನಡೆಸುತ್ತಾನೆ. ಅವರು ಸಾಕಷ್ಟು ಹಣವನ್ನು ಪಡೆಯಲಿದ್ದು, ಅವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕಲೆ ಮತ್ತು ಬುದ್ಧಿವಂತಿಕೆಯ ಬಲದಿಂದ ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸುತ್ತಾರೆ. ಅವರ ಜನಪ್ರಿಯತೆ ಉತ್ತುಂಗದಲ್ಲಿರುತ್ತದೆ.


ಇದನ್ನೂ ಓದಿ: ಈ ರಾಶಿಯವರಿಗೆ ಹೋಳಿ ಬಹಳ ಮಂಗಳಕರ! ರಾಹು-ಶುಕ್ರರು ಹೊಸ ಉದ್ಯೋಗ-ಬಡ್ತಿ, ಹಣ ನೀಡಲಿದ್ದಾರೆ


ಮತ್ತೊಂದೆಡೆ ಬುಧ ಗ್ರಹವು ಜಾತಕದಲ್ಲಿ ದುರ್ಬಲವಾಗಿದ್ದರೆ, ಬುಧದ ಮಹಾದಶಾ ಪ್ರಭಾವವು ನಕಾರಾತ್ಮಕವಾಗಿರುತ್ತದೆ. ಹೀಗಾಗಿ ವ್ಯಕ್ತಿಯ ಬುದ್ಧಿಯು ಗೊಂದಲಕ್ಕೊಳಗಾಗುತ್ತದೆ. ಅವರು ತಮ್ಮ ಗುರಿಯಿಂದ ವಿಮುಖನಾಗುತ್ತಾರೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅವರ ಸಂವಹನ ಕೌಶಲ್ಯ ದುರ್ಬಲವಾಗುತ್ತದೆ. ವ್ಯಾಪಾರ ಮಾಡಿದರೆ ನಷ್ಟವನ್ನು ಎದುರಿಸಬೇಕಾಗುತ್ತದೆ.


ಬುಧದ ಮಹಾದಶಾ ಪರಿಹಾರಗಳು


ಜಾತಕದಲ್ಲಿ ಬುಧನು ಬಲಹೀನನಾಗಿದ್ದರೆ, ಬುಧ ಮಹಾದಶಾ ಸಮಯದಲ್ಲಿ ಅನೇಕ ರೀತಿಯ ಸಮಸ್ಯೆ ಮತ್ತು ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಬುಧಕ್ಕೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಬೇಕು.


- ಪ್ರತಿ ಬುಧವಾರ ಹಸುವಿಗೆ ಮೇವು ತಿನ್ನಿಸಬೇಕು. ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಹ ದಾನ ಮಾಡಬೇಕು.


- ನಿಮ್ಮ ಜಾತಕವನ್ನು ತಜ್ಞರಿಗೆ ತೋರಿಸಿ ಅವರಿಂದ ಸಲಹೆ ಪಡೆದು ಪಚ್ಚೆ ಕಲ್ಲು ಧರಿಸಬೇಕು.


- ಹಸಿರು ಬಟ್ಟೆಗಳನ್ನು ಧರಿಸಬೇಕು ಮತ್ತು ಆಹಾರದಲ್ಲಿ ಹೆಚ್ಚು ಹಸಿರು ತರಕಾರಿಗಳನ್ನು ಸೇವಿಸಬೇಕು.


- ಬುಧ ಗ್ರಹದ ಮಂತ್ರಗಳನ್ನು ಪಠಿಸಬೇಕು 


ಇದನ್ನೂ ಓದಿ: Budh Gochar 2023: ಬುಧಾದಿತ್ಯ ರಾಜಯೋಗದಿಂದ ಈ 5 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ


 (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.