What To Buy On Akshaya Tritiya: ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವನ್ನು ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ವರ್ಷ 22 ಏಪ್ರಿಲ್ 2023 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಈ ಆಚರಣೆಗೆ ಬಹಳ ಮಹತ್ವವಿದ್ದು, ಈ ದಿನ ಮನೆಗೆ ಕೆಲವು ವಸ್ತುಗಳನ್ನು ತರುವುದನ್ನು ತುಂಬಾ ಮಂಗಳಕರ ಎಂದು ನಂಬಲಾಗಿದೆ. ಹಾಗಿದ್ದರೆ,  ಅಕ್ಷಯ ತೃತೀಯ ದಿನ ಯಾವ ರಾಶಿಯವರು ಏನೆನ್ನು ಖರೀದಿಸಿದರ ಶುಭ ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಅಕ್ಷಯ ತೃತೀಯದಲ್ಲಿ ಯಾವ ರಾಶಿಯವರು ಏನನ್ನು ಖರೀದಿಸಬೇಕು?
ಮೇಷ ರಾಶಿ:  

ಶಾಸ್ತ್ರಗಳ ಪ್ರಕಾರ, ಅಕ್ಷಯ ತೃತೀಯ ದಿನ ಮೇಷ ರಾಶಿಯವರು ಚಿನ್ನ ಮತ್ತು ಹಿತ್ತಾಳೆ ಪದಾರ್ಥಗಳನ್ನು ಖರೀದಿಸಿದರೆ ಒಳಿತು. 


ವೃಷಭ ರಾಶಿ:  
ಈ ದಿನ ವೃಷಭ ರಾಶಿಯವರು ಬೆಳ್ಳಿ ಮತ್ತು ಉಕ್ಕಿನ ಪದಾರ್ಥಗಳನ್ನು ಮನೆಗೆ ತರುವುದು ಶುಭ. 


ಮಿಥುನ ರಾಶಿ:   
ಮಿಥುನ ರಾಶಿಯವರು ಅಕ್ಷಯ ತೃತೀಯದಂಡು ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆ ಪದಾರ್ಥಗಳನ್ನು ತರುವುದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. 


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಈ ದಿನ ಬೆಳ್ಳಿ ತಟ್ಟೆಯನ್ನು ಖರೀದಿಸುವುದನ್ನು ಶುಭ ಎನ್ನಲಾಗುತ್ತದೆ. 


ಇದನ್ನೂ ಓದಿ- Akshaya Tritiya 2023: ತಾಯಿ ಮಹಾಲಕ್ಷ್ಮೀ ಆಶೀರ್ವಾದಕ್ಕಾಗಿ ಅಕ್ಷಯ ತೃತೀಯದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ


ಸಿಂಹ ರಾಶಿ:   
ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ತಾಮ್ರದ ಪದಾರ್ಥಗಳನ್ನು ಖರೀದಿಸುವುದರಿಂದ ಸಿಂಹ ರಾಶಿಯವರ ಅದೃಷ್ಟವೇ ಬದಲಾಗುತ್ತದೆ ಎಂದು ನಂಬಲಾಗಿದೆ. 


ಕನ್ಯಾ ರಾಶಿ: 
ಈ ಶುಭ ದಿನದಂದು ಕನ್ಯಾ ರಾಶಿಯವರು ಚಿನ್ನ, ಬೆಳ್ಳಿ ಇಲ್ಲವೇ ಹಿತ್ತಾಳೆ ಪದಾರ್ಥಗಳನ್ನು ಖರೀದಿಸುವುದು ಮಂಗಳಕರ. 


ತುಲಾ ರಾಶಿ:  
ಅಕ್ಷಯ ತೃತೀಯ ದಿನದಂದು ತುಲಾ ರಾಶಿಯ ಜನರು ಬೆಳ್ಳಿ, ಎಲೆಕ್ಟ್ರಾನಿಕ್ಸ್ ಮತ್ತು ಪೀಠೋಪಕರಣಗಳನ್ನು ಖರೀದಿಸುವುದರಿಂದ ನಿಮ್ಮ ಅದೃಷ್ಟ ಬದಲಾಗಬಹುದು. 


ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರಿಗೆ ಅಕ್ಷಯ ತೃತೀಯ ದಿನದಂದು ಚಿನ್ನ ಇಲ್ಲವೇ ಹಿತ್ತಾಳೆ ಪದಾರ್ಥಗಳನ್ನು ಖರೀದಿಸಲು ಸೂಚಿಸಲಾಗುತ್ತದೆ. 


ಇದನ್ನೂ ಓದಿ- Akshaya Tritiya 2023: ಅಕ್ಷಯ ತೃತೀಯದಂದು ಈ ಕೆಲಸ ಮಾಡಿದ್ರೆ ಎಂದಿಗೂ ಖಾಲಿಯಾಗಲ್ಲ ಖಜಾನೆ


ಧನು ರಾಶಿ:  
ಧನು ರಾಶಿಯವರಿಗೆ ಅಕ್ಷಯ ತೃತೀಯ ದಿನದಲ್ಲಿ ಚಿನ್ನ, ಹಿತ್ತಾಳೆ, ಫ್ರಿಜ್, ವಾಟರ್ ಕೂಲರ್ ನಂತಹ ವಸ್ತುಗಳನ್ನು ಖರೀದಿಸುವುದನ್ನು ಪ್ರಯೋಜನಕಾರಿ ಎನ್ನಲಾಗುತ್ತದೆ. 


ಮಕರ ರಾಶಿ:  
ಮಕರ ರಾಶಿಯವರು ಅಕ್ಷಯ ತೃತೀಯ ದಿನದಂದು  ಚಿನ್ನ, ಹಿತ್ತಾಳೆ, ಬೆಳ್ಳಿ ಮತ್ತು ಉಕ್ಕಿನ ವಸ್ತುಗಳನ್ನು ಖರೀದಿಸುವುದನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ.  


ಕುಂಭ ರಾಶಿ:  
ಕುಂಭ ರಾಶಿಯವರಿಗೆ ಅಕ್ಷಯ ತೃತೀಯ ದಿನ ಚಿನ್ನ, ಬೆಳ್ಳಿ, ಹಿತ್ತಾಳೆ, ಉಕ್ಕು ಇಲ್ಲವೇ ವಾಹನಗಳನ್ನು ಖರೀದಿಸುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗುವುದು. 


ಮೀನ ರಾಶಿ: 
ಮೀನ ರಾಶಿಯವರು ಅಕ್ಷಯ ತೃತೀಯ ದಿನ ಚಿನ್ನ, ಹಿತ್ತಾಳೆ, ಪೂಜಾ ಸಾಮಗ್ರಿಗಳು ಮತ್ತು ಪಾತ್ರೆಗಳನ್ನು ಖರೀದಿಸುವುದನ್ನು ಶುಭ ಎನ್ನಲಾಗುತ್ತದೆ. 


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.