Mahan Yogas On Akshaya Tritiya 2023: ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಾಂಡು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 22ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುವುದು. ಧರ್ಮ ಗ್ರಂಥಗಳ ಪ್ರಕಾರ, ಅಕ್ಷಯ ತೃತೀಯ ದಿನವನ್ನು ತುಂಬಾ ಮಂಗಳಕರ ಈ ದಿನ ಚಿನ್ನ, ಬೆಳ್ಳಿ, ವಾಹನ ಖರೀದಿಸುವುದನ್ನು ತುಂಬಾ ಶುಭ ಎಂದು ಬಣ್ಣಿಸಲಾಗುತ್ತದೆ. ಈ ವರ್ಷದ ಅಕ್ಷಯ ತೃತೀಯ ದಿನದಂದು ಏಳು ಮಹಾನ್ ಯೋಗಗಳು ನಿರ್ಮಾಣಗೊಳ್ಳಲಿವೆ. ಹಾಗಾಗಿ, 2023ರ ಅಕ್ಷಯ ತೃತೀಯ ಮತ್ತಷ್ಟು ವಿಶೇಷವಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2023ರ ಅಕ್ಷಯ ತೃತೀಯದ ದಿನ ಏಳು ಮಹಾನ್ ಯೋಗಗಳು ರೂಪುಗೊಳ್ಳುತ್ತಿವೆ. ಹೀಗೆ ಹಲವು ಮಂಗಳಕರ ಮಹಾನ್ ಯೋಗಗಳು ನಿರ್ಮಾಣಗೊಳ್ಳಲಿವೆ. ಈ ದಿನ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಇಷ್ಟಾರ್ಥಗಳೆಲ್ಲವೂ ಸಿದ್ದಿಯಾಗುತ್ತವೆ ಎಂದು ಹೇಳಲಾಗುತ್ತದೆ. ಆ ಪ್ರಮುಖ ಯೋಗಗಳೆಂದರೆ:
* ಅಕ್ಷಯ ತೃತೀಯದ ದಿನ ಚಂದ್ರನು ವೃಷಭ ರಾಶಿಯಲ್ಲಿ ಉತ್ಕೃಷ್ಟನಾಗಿ, ಸೂರ್ಯ ದೇವನ ಒಡೆತನದ ಕೃತಿಕಾ ನಕ್ಷತ್ರದಲ್ಲಿ ಉಳಿಯಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನ ಬೆಳ್ಳಿಯನ್ನು ಖರೀದಿಸುವುದು ತುಂಬಾ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ.
* ಅಕ್ಷಯ ತೃತೀಯ ದಿನದಂದು ನಿರ್ಮಾಣಗೊಳ್ಳಲಿರುವ ಇತರ ಯೋಗಗಳೆಂದರೆ
- ಅಮೃತ ಸಿದ್ಧಿ ಯೋಗ
- ರವಿ ಯೋಗ
- ಸರ್ವಾರ್ಥ ಸಿದ್ಧಿ ಯೋಗ
- ಸೌಭಾಗ್ಯ ಯೋಗ
- ತ್ರಿಪುಷ್ಕರ ಯೋಗ
- ಆಯುಷ್ಮಾನ್ ಯೋಗ
ಇದನ್ನೂ ಓದಿ- Akshaya Tritiya 2023: ಅಕ್ಷಯ ತೃತೀಯದಂದು ಈ ಕೆಲಸ ಮಾಡಿದ್ರೆ ಎಂದಿಗೂ ಖಾಲಿಯಾಗಲ್ಲ ಖಜಾನೆ
ಅಕ್ಷಯ ತೃತೀಯ 2023 ಮುಹೂರ್ತ:
ವೈಶಾಖ ಶುಕ್ಲ ತೃತೀಯ ದಿನಾಂಕ- 22 ಏಪ್ರಿಲ್ 2023, ಬೆಳಿಗ್ಗೆ 07.49ಕ್ಕೆ ಆರಂಭವಾಗಿ ಮರುದಿನ 23 ಏಪ್ರಿಲ್ 2023ರಂದು ಬೆಳಿಗ್ಗೆ 07.47ಕ್ಕೆ ಕೊನೆಗೊಳ್ಳಲಿದೆ.
ಅಕ್ಷಯ ತೃತೀಯ ಶುಭ ಸಮಯ:
ಏಪ್ರಿಲ್ 22 ರಂದು ಶನಿವಾರ ಬೆಳಿಗ್ಗೆ 7.49 ರಿಂದ ಮಧ್ಯಾಹ್ನ 12.20 ರವರೆಗೆ ಇರುತ್ತದೆ.
ಇದನ್ನೂ ಓದಿ- ಈ ಬಾರಿ ಅಕ್ಷಯ ತೃತೀಯಕ್ಕಿದೆ ವಿಶೇಷ ಪ್ರಾಮುಖ್ಯತೆ! ಈ ಮುಹೂರ್ತದಲ್ಲಿಯೇ ಖರೀದಿಸಿ ಚಿನ್ನ
ಅಕ್ಷಯ ತೃತೀಯದ ದಿನ ಈ ಒಂದು ಕೆಲಸ ಮಾಡಿದರೆ ಅದೃಷ್ಟವೇ ಬದಲಾಗುತ್ತದೆ:-
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯದ ದಿನ ಶುಭ ಲಗ್ನದಲ್ಲಿ ನಿಯಮಾನುಸಾರ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಯೂರುತ್ತಾಳೆ ಎಂಬ ನಂಬಿಕೆ ಇದೆ. ಇದಲ್ಲದೆ, ಅಕ್ಷಯ ತೃತೀಯ ದಿನದಂದು ಏನನ್ನಾದರೂ ದಾನ ಮಾಡುವುದು ಕೂಡ ಮಂಗಳಕರ ಫಲಗಳನ್ನು ನೀಡಲಿದೆ. ಅಗತ್ಯವಿರುವವರಿಗೆ ಕೈಲಾದದನ್ನು ದಾನ ಮಾಡುವುದರಿಂದ ಲಕ್ಷ್ಮೀದೇವಿ ಪ್ರಸನ್ನಳಾಗಿ ಭಕ್ತರ ಬೇಡಿಕೆಯನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.