Do’s and Do not’s on Ugadi: ಯುಗಾದಿ ಹಿಂದೂ ಧರ್ಮದ ಅನುಸಾರ ಹೊಸ ವರ್ಷವಾಗಿ ಆಚರಣೆ ಮಾಡಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದಂದು ಈ ಹಬ್ಬವನ್ನು ಯುಗಾದಿ ಎಂಬ ಹೆಸರಿನಿಂದ ಆಚರಣೆ ಮಾಡುತ್ತೇವೆ. ಬ್ರಹ್ಮದೇವರು ಈ ದಿನದಂದು ಭೂಮಿಯಲ್ಲಿ ಎಲ್ಲಾ ಸೃಷ್ಟಿಗಳನ್ನು ಪ್ರಾರಂಭಿಸಿದನು. ಆ ಕಾರಣದಿಂದ ಈ ದಿನವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ ಎಂಬುದು ನಂಬಿಕೆ. ಮತ್ತೊಂದು ಪುರಾಣದ ಪ್ರಕಾರ ಮತ್ಸ್ಯ ರೂಪ ತಳೆದ ವಿಷ್ಣು ದೇವರು ಸೋಮಕುವನ್ನು ಸಂಹರಿಸಿ ವೇದಗಳನ್ನು ರಕ್ಷಿಸಿದ್ದು ಕೂಡ ಯುಗಾದಿಯ ದಿನವೇ ಎನ್ನಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಯುಗಾದಿಗೆ 60000 ಗಡಿ ದಾಟಿದ ಚಿನ್ನ, ಹೊಸ ದಾಖಲೆ.. 10 ಗ್ರಾಂ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ!


ಯುಗಾದಿ ಎಂಬ ಹೆಸರು ಕೇಳಿದೊಡನೆಯೇ ಪ್ರಕೃತಿಯ ಅದ್ಭುತವಾದ ಹಬ್ಬ ನೆನಪಾಗುತ್ತದೆ. ಪ್ರಕೃತಿಯ ದೃಷ್ಟಿಯಿಂದ, ವಸಂತ ಋತುವು ಚೈತ್ರಶುದ್ಧ ಪಾಡ್ಯಮಿಯಿಂದ ಪ್ರಾರಂಭವಾಗುತ್ತದೆ. ಆಗ ಮರಗಳು ಚಿಗುರಿ ಹೂವುಗಳ ಪರಿಮಳದಿಂದ ಅರಳುವ ಸಮಯ. ಆದುದರಿಂದಲೇ ಯುಗಾದಿಯನ್ನು ಹೊಸತನದ ಆರಂಭ ಎಂದು ಬಣ್ಣಿಸುತ್ತಾರೆ.


ಆದರೆ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತವೆ. ಆ ದಿನಗಳಲ್ಲಿ ಮಾಡಬೇಕಾದ ಕೆಲವು ಕೆಲಸಗಳಿವೆ.. ಮಾಡಬಾರದ ಕೆಲಸಗಳೂ ಇರುತ್ತವೆ. ನಮ್ಮ ಹಿರಿಯರು, ವಿದ್ವಾಂಸರು ಹಬ್ಬ ಹರಿದಿನಗಳಲ್ಲಿ ಮಾಡಬೇಕಾದುದು ಮತ್ತು ಮಾಡಬಾರದ ವಿಷಯಗಳ ಬಗ್ಗೆ ತಿಳಿಸಿದ್ದಾರೆ.


ಸಾಮಾನ್ಯವಾಗಿ ಅನೇಕರು ಬೆಳಗ್ಗೆ 9 ರಿಂದ 10 ಗಂಟೆ ತನಕ ಮಲಗುತ್ತಾರೆ. ಆದರೆ ಯುಗಾದಿ ದಿನ ತಡವಾಗಿ ಏಳುವುದು ಒಳ್ಳೆಯದಲ್ಲ. ಇನ್ನು ಕೆಲವರು ಹಬ್ಬ ಹರಿದಿನಗಳಲ್ಲಿ ಸಾರಾಯಿ, ಮಾಂಸಾಹಾರ ಸೇವನೆ ಮಾಡುತ್ತಾರೆ. ಆದರೆ ಈ ದಿನದಂದು ಹಾಗೆ ಮಾಡಬೇಡಿ.


ಯುಗಾದಿಯ ದಿನ ಅನೇಕರು ಪಂಚಾಂಗವನ್ನು ಕೇಳುತ್ತಾರೆ. ಆದರೆ ಪಂಚಾಂಗ ಶ್ರವಣವನ್ನು ದಕ್ಷಿಣಾಭಿಮುಖವಾಗಿ ಕುಳಿತು ಮಾಡಬಾರದು. ಈ ತಪ್ಪುಗಳನ್ನು ಮಾಡದಿದ್ದರೆ ಒಳ್ಳೆಯದೇ ಆಗುತ್ತದೆ ಎಂದು ಹೇಳಲಾಗುತ್ತದೆ.


ಇವುಗಳ ಜೊತೆಗೆ ಹಬ್ಬದ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಯುಗಾದಿ ದಿನ ಹೊಸ ಕೊಡೆ ಕೊಂಡರೆ ಒಳ್ಳೆಯದಾಗುತ್ತದೆ. ಹೀಗೆ ಮಾಡುವುದರಿಂದ ವರ್ಷವಿಡೀ ನಿಮ್ಮ ಮನೆಯಲ್ಲಿ ಹಣ ಉಳಿಯುತ್ತದೆ ಎನ್ನುತ್ತಾರೆ ಶಾಸ್ತ್ರಜ್ಞರು. ಯುಗಾದಿಯ ದಿನ ದಾನ ಮಾಡಿದರೆ ಕೂಡ ಒಳ್ಳೆಯ ಫಲ ಸಿಗುತ್ತದೆ. ಹಾಗೆಯೇ ಮನೆಯಲ್ಲಿ ಯುಗಾದಿ ಪೂಜೆಯನ್ನು ಸಂಭ್ರಮದಿಂದ ಮಾಡಬೇಕು.


ಇದನ್ನೂ ಓದಿ: 30 ವರ್ಷಗಳ ಬಳಿಕ ಆಗಮಿಸಿದೆ ಇಂಥಾ ‘ವಿಶೇಷ ಯುಗಾದಿ’: ಈ ರಾಶಿಯವರಿಗೆ ಊಹಿಸಲಾಗದಷ್ಟು ಲಾಭವೋ ಲಾಭ!


(ಸೂಚನೆ: ಈ ಲೇಖನವು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅಂತರ್ಜಾಲದಲ್ಲಿ ಮಾತ್ರ ಲಭ್ಯವಿರುವ ಮಾಹಿತಿ. ಜೀ ನ್ಯೂಸ್ ಕನ್ನಡ ಇದನ್ನು ಖಚಿತಪಡಿಸಿಲ್ಲ. ಇದು ಸಂಪೂರ್ಣ ಸತ್ಯ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.