Ugadi 2023 Gold Price : ಯುಗಾದಿಗೆ 60000 ಗಡಿ ದಾಟಿದ ಚಿನ್ನ, ಹೊಸ ದಾಖಲೆ.. 10 ಗ್ರಾಂ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ!

Ugadi 2023 Gold Price : ವಿಶ್ವದಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆಯ ಕೆಟ್ಟ ಸ್ಥಿತಿ ಮತ್ತು ಷೇರು ಮಾರುಕಟ್ಟೆಯ ಕುಸಿತದ ಮಧ್ಯೆ, ಚಿನ್ನವು ನಿರಂತರವಾಗಿ ಹೊಸ ಎತ್ತರವನ್ನು ತಲುಪುತ್ತಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ 60,000 ರೂ. ಗಡಿಯನ್ನು ದಾಟಿದೆ.  

Written by - Chetana Devarmani | Last Updated : Mar 21, 2023, 11:38 AM IST
  • ಯುಗಾದಿಗೆ 60000 ಗಡಿ ದಾಟಿದ ಚಿನ್ನ
  • ಏರತ್ತಲೇ ಇದೆ ಬಂಗಾರದ ಬೆಲೆ
  • 10 ಗ್ರಾಂ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ!
Ugadi 2023 Gold Price : ಯುಗಾದಿಗೆ 60000 ಗಡಿ ದಾಟಿದ ಚಿನ್ನ, ಹೊಸ ದಾಖಲೆ.. 10 ಗ್ರಾಂ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ! title=
Gold Price

Gold Price Today, 21 March 2023: ಚಿನ್ನ ಖರೀದಿಸುವವರಿಗೆ ಒಂದು ದೊಡ್ಡ ಸುದ್ದಿ ಇದೆ. ನಿಮಗೂ ಚಿನ್ನ ಖರೀದಿಸುವ ಪ್ಲಾನ್ ಇದ್ದರೆ ಇಂದು ಚಿನ್ನ ಹೊಸ ದಾಖಲೆ ನಿರ್ಮಿಸಿದೆ. ಪ್ರಸ್ತುತ, ವಿಶ್ವದಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆಯ ಕೆಟ್ಟ ಸ್ಥಿತಿ ಮತ್ತು ಷೇರು ಮಾರುಕಟ್ಟೆಯ ಕುಸಿತದ ಮಧ್ಯೆ, ಚಿನ್ನವು ನಿರಂತರವಾಗಿ ಹೊಸ ಎತ್ತರವನ್ನು ತಲುಪುತ್ತಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ 60,000 ರೂ. ಗಡಿಯನ್ನು ದಾಟಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇದರೊಂದಿಗೆ ಪ್ರತಿ ಕೆಜಿಗೆ ಬೆಳ್ಳಿ ಬೆಲೆ ಕೂಡ ಹೆಚ್ಚಾಗಿದೆ. 

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 60,413 ರೂ.ನಲ್ಲಿ ಶೇ.1.73 ರಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ. ಇದರೊಂದಿಗೆ ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 58220 ರೂ. ಆಗಿದೆ.  ಇದಲ್ಲದೇ ಬೆಳ್ಳಿ ಕೂಡ ಇಂದು ವೇಗವಾಗಿ ವಹಿವಾಟು ನಡೆಸುತ್ತಿದೆ. ಇಂದು ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 69,353 ರಷ್ಟು ಏರಿಕೆಯೊಂದಿಗೆ ಶೇ.1.24 ರಷ್ಟು ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲೂ ದರ ಏರಿಕೆ :

ನಾವು ಜಾಗತಿಕ ಮಾರುಕಟ್ಟೆಯ ಬಗ್ಗೆ ಮಾತನಾಡುವುದಾದರೆ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಭಾರಿ ಜಿಗಿತವಿದೆ. ಕೊಮ್ಯಾಕ್ಸ್‌ನಲ್ಲಿ ಚಿನ್ನವು ಔನ್ಸ್‌ಗೆ $ 1990 ಮತ್ತು ಬೆಳ್ಳಿ $ 22.58 ಔನ್ಸ್‌ನಲ್ಲಿ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ: ರೋಡ್ ಟ್ಯಾಕ್ಸ್ ಕಟ್ಟದೆ 4 ಲಕ್ಷಕ್ಕೆ ಮಾರುತಿ ಸ್ವಿಫ್ಟ್ ಮನೆಗೆ ಕೊಂಡೊಯ್ಯಿರಿ!

ಚಿನ್ನ ಖರೀದಿಸುವ ಮುನ್ನ ಈ ವಿಷಯ ತಿಳಿದಿರಲಿ :

ನೀವು ಕೂಡ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ನೀವು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ನೀವು ಚಿನ್ನದ ಶುದ್ಧತೆ ನಿಜವೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಬಹುದು. ಇದಲ್ಲದೇ ಈ ಆಪ್ ಮೂಲಕವೂ ದೂರು ನೀಡಬಹುದು.

ದರಗಳನ್ನು ಪರಿಶೀಲಿಸಿ :

ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ ಸಂದೇಶವನ್ನು ಕಳುಹಿಸುತ್ತೀರೋ ಅದೇ ಸಂಖ್ಯೆಗೆ ಸಂದೇಶವು ಬರುತ್ತದೆ. 

ಇದನ್ನೂ ಓದಿ: Arecanut price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೀಗಿದೆ ನೋಡಿ

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ : 

ಚೆನ್ನೈ  : 

22k - ₹ 55,700

24k - ₹ 60,770

ಮುಂಬೈ

22k - ₹ 55,000

22k - ₹ 60,000

ದೆಹಲಿ

22k - ₹ 55,150

22k - ₹ 60,150

ಕೋಲ್ಕತ್ತಾ

22k - ₹ 55,000

24k - ₹ 60,000

ಬೆಂಗಳೂರು

22k - ₹ 55,050

24k - ₹ 60,050

ಹೈದರಾಬಾದ್

22k - ₹ 55,000

24k - ₹ 60,000

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News