Meditation benefits and suggestions: ಪ್ರತಿನಿತ್ಯ ಧ್ಯಾನ ಮಾಡುವುದರಿಂದ ದೇಹ ಹಾಗೂ ಮನಸ್ಸು ಮತ್ತು ಮೆದುಳನ್ನು ಶಾಂತವಾಗಿ ಮತ್ತು ಆರೋಗ್ಯವಾಗಿಡುವಲ್ಲಿ ಹಾಗೂ ದೇಹದ ಸಮತೋಲವನ್ನು ಕಾಪಡುವಲ್ಲಿ ಬಹಳ  ಪ್ರಯೋಜನಕಾರಿಯಾಗಿದೆ. ನಿದ್ರೆಯ ಕೊರತೆಯಿಂದಾಗಿ ಅನೇಕ ಗಂಭೀರ ಸಮಸ್ಯೆಗಳಿಗೆ ಎಡ ಮಾಡಿಕೊಟ್ಟಂತಾಗುತ್ತದೆ. ಆದರೆ ಧ್ಯಾನ ಮಾಡುವುದರಿಂದ ಮಾತ್ರ ಈ ರೀತಿಯ ಸಮಸ್ಯೆಗಳನ್ನು  ಗುಣಪಡಿಸಿಕೊಳ್ಳಬಹುದು. ಸಂತೋಷ, ಶಾಂತಿ ಮತ್ತು ಬೆಳವಣಿಗೆಗೆ ಧ್ಯಾನವು ಉತ್ತಮ ಪರಿಹಾರವಾಗಿದೆ. ಆದಾಗ್ಯೂ, ಧ್ಯಾನ ಮಾಡುವಾಗ ಏಕಾಗ್ರತೆಯನ್ನು ಹೊಂದಲು ಸಾಧ್ಯವಾಗದಿದ್ದರೆ,ಅಂತವರು ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಯೋಗ ಸಲಹೆಗಳು ಪ್ರಕ್ರಿಯೆಗಳ ಕುರಿತು ಇಲ್ಲಿ ತಿಳಿಯಿರಿ.


COMMERCIAL BREAK
SCROLL TO CONTINUE READING

ಧ್ಯಾನವನ್ನು ಯಾರು ಮಾಡಬಹುದು
ಎರಡು ವರ್ಷದ ಮಗುವಿನಿಂದ ಹಿಡಿದು ವಯಸ್ಸಾದ ವ್ಯಕ್ತಿಯವರೆಗೆ ಪ್ರತಿಯೊಬ್ಬರೂ ಧ್ಯಾನ ಮಾಡಬಹುದು. ಚಿಕ್ಕ ಮಕ್ಕಳಿಗೂ ಧ್ಯಾನ ಮಾಡಲು ಕಲಿಸಬೇಕು.


ಇದನ್ನೂ ಓದಿ: Weight Loss Tea: ಈ ಸ್ಪೆಷಲ್ ಟೀ ಸೇವನೆಯಿಂದ ಒಂದೇ ತಿಂಗಳಲ್ಲಿ ಕಡಿಮೆಯಾಗುತ್ತೆ ತೂಕ


ಧ್ಯಾನ ಮಾಡುವಾಗ ಕೇಂದ್ರೀಕರಿಸುವುದು ಹೇಗೆ


ಜನರು ಸಾಮಾನ್ಯವಾಗಿ ಬೆಳಗ್ಗಿನ ಸಮಯದಲ್ಲಿ ಧ್ಯಾನ ಮಾಡಲು ಇಷ್ಟಪಡುತ್ತಾರೆ. ಇದು ಧ್ಯಾನ ಮಾಡಲು ಇದು ಸರಿಯಾದ ಸಮಯ ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪಲ್ಲ, ಬದಲಿಗೆ  ಮುಂಜಾನೆ ಮಾಡಲು ಸಾಕಷ್ಟು ಕೆಲಸವಿರುವುದರಿಂದ ಅಂತಹ ಪರಿಸ್ಥಿತಿಯಲ್ಲಿ, ಮನಸ್ಸನ್ನು ಶಾಂತಗೊಳಿಸುವುದು ಮತ್ತು ಧ್ಯಾನ ಮಾಡುವುದು ಬಹಳ ಕಷ್ಟ. ಆತುರದಲ್ಲಿ ಧ್ಯಾನ ಮಾಡಿದಂತಾಗುತ್ತದೆ ಇದರಿಂದ ಯಾವುದೇ ಪ್ರಯೋಜನಗಳು ಕಂಡು ಬರುವುದಿಲ್ಲ, ಬದಲಿಗೆ  ಮುಕ್ತ ಮತ್ತು ವಿಶ್ರಾಂತಿಯ ಸಮಯದಲ್ಲಿ ಧ್ಯಾನ ಮಾಡಬಹುದು. ಇದರ ಹೊರತಾಗಿ ಧ್ಯಾನಕ್ಕೆ ನಿಗದಿತ ಸಮಯ ಎಂದೇನು ಇರುವುದಿಲ್ಲ. ನೀವು ಯಾವಾಗ ಬೇಕಾದರೂ ಧ್ಯಾನ ಮಾಡಬಹುದು.


ಧ್ಯಾನ ಮಾಡುವಾಗ ಗಮನವನ್ನು ಕೇಂದ್ರೀಕರಿಸುವುದು ತುಂಬಾ ಮುಖ್ಯ, ಒಂದು ವೇಳೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂದರೆ  ಒಂದು ಮಾರ್ಗವಿದೆ.  ದೇವರ ಹೆಸರನ್ನು ತೆಗೆದುಕೊಳ್ಳುವುದು ಅಥವಾ ಓಂ ಪದವನ್ನು ಮತ್ತೆ ಮತ್ತೆ ಉಚ್ಚರಿಸುವುದು. ದೇವರ ನಾಮವನ್ನು ಜಪಿಸುವುದರಿಂದ ಧ್ಯಾನದಲ್ಲಿ ಮಗ್ನರಾಗಬಹುದು. ಇದರೊಂದಿಗೆ ರಾತ್ರಿ ಮಲಗುವ ಮೊದಲು  ಪ್ರತಿದಿನ ಐದರಿಂದ ಹತ್ತು ನಿಮಿಷಗಳ ಕಾಲ ಇದನ್ನು ಮಾಡಬಹುದು.


ಇದನ್ನೂ ಓದಿ: ಗ್ರೀನ್ ಟೀ-ಬ್ಲಾಕ್ ಕಾಫಿ ಅಲ್ಲ, ತೂಕ ಇಳಿಕೆಗೆ ವರದಾನ ಈ ಐದು ದೇಸಿ ಮಸಾಲ ಟೀಗಳು!


ಧ್ಯಾನ ಮಾಡುವಾಗ ಏಕಾಗ್ರತೆಯನ್ನು ಹೊಂದಿದ್ದರೆ, ಇಡೀ ದಿನದ ಪ್ರತಿಯೊಂದು ವಿಷಯವನ್ನು ನೆನಪಿನಲ್ಲಿಡುವ ಶಕ್ತಿಯನ್ನು ಗ್ರಹಿಸಬಹುದು. ಮಲಗುವ ಮೊದಲು, ದಿನವೆಲ್ಲಾ ಮಾಡಿದ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ತಪ್ಪುಗಳನ್ನು ನೆನಪಿಕೊಂಡು ಮಲಗುವುದು ಒಳ್ಳೆಯದು. ಈ ರೀತಿಯ ಧ್ಯಾನವನ್ನು 'ಪ್ರತಿ ಪ್ರಶ್ನ ಸಾಧನೆ' ಎಂದು ಕರೆಯಲಾಗುತ್ತದೆ.


ಮಹಿಳೆಯರು ಧ್ಯಾನ ಮಾಡುವಾಗ ಹಣೆಯ ಮೇಲೆ ಧರಿಸುವ ಬಿಂದಿಯ ಕಡೆಗೆ  ಗಮನ ಕೊಡಿ. ಪ್ರತಿದಿನ ಐದು ನಿಮಿಷಗಳ ಕಾಲ ಬಿಂದಿಯ ಮೇಲೆ  ಗಮನವನ್ನು ಕೇಂದ್ರೀಕರಿಸುವುದರಿಂದ ಕೆಟ್ಟ ಆಲೋಚನೆಗಳು ಕೆಲವೇ ದಿನಗಳಲ್ಲಿ ನಿಮ್ಮಿಂದ ದೂರವಾಗುತ್ತದೆ.


ಧ್ಯಾನದ ಮತ್ತುಂದು ವಿಧಾನವೆಂದರೆ ಉಸಿರಾಟದ ಮೇಲೆ ಕೇಂದ್ರೀಕರಿಸುವುದು.ಧ್ಯಾನ ಮಾಡಲು ಶುರು ಮಾಡಿದರೆ ಅನೇಕ ಆಲೋಚನೆಗಳು ಮನಸ್ಸಿಗೆ ಬರುತ್ತವೆ. ಅಂತಹ ಸಂದರ್ಭಗಳಲ್ಲಿ, ಕೇಂದ್ರೀಕರಿಸಲು ತುಂಬಾ ಕಷ್ಟವೆನಿಸುತ್ತದೆ. ಆದರೆ ನಿಯಮಿತವಾಗಿ ಧ್ಯಾನ ಮಾಡುವಾಗ, ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ, ಆಲೋಚನೆಗಳು ನಿಮ್ಮನ್ನು ತೊಂದರೆಗೊಳಿಸುವುದಿಲ್ಲ. 


ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ 2 ಪದಾರ್ಥ ಬಳಸಿ ಮನೆಯಲ್ಲಿಯೇ ತಯಾರಿಸಿ ಈ ಎಣ್ಣೆ, ಕೂದಲುದುರುವಿಕೆಗೆ ರಾಮಬಾಣ!


ಧ್ಯಾನದಿಂದಾಗುವ ಪ್ರಯೋಜನಗಳು


* ಮನಸ್ಸಿನ ನಿಯಂತ್ರಣಕ್ಕೆ ಸಹಾಯಕ
* ಸಂಯಮದ ಹೃದಯ ಬಡಿತ
* ಅತಿಯಾಗಿ ಯೋಚಿಸುವುದನ್ನು ಕಡಿಮೆ ಮಾಡುತ್ತದೆ. 
* ಜೀವನದ ಬಗ್ಗೆ ಇರುವ ಆತಂಕವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
* ಸಮಸ್ಯೆಯ ವೇಗವನ್ನು ಹೆಚ್ಚಿಸುವ ಮೊದಲು ಪರಿಸ್ಥಿತಿಯನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ.
* ಹೆಚ್ಚು ತಾಳ್ಮೆಯಿಂದಿರಲು  ಸಹಾಯ ಮಾಡುತ್ತದೆ.
* ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ.


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನದ  ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ