Diwali Lakshmi Yantra Pooja : ದೀಪಾವಳಿ ಪೂಜೆಯಲ್ಲಿ ಲಕ್ಷ್ಮೀಗೆ  ವಿಶೇ ಷ ಸ್ಥಾನವನ್ನು ನೀಡಲಾಗಿದೆ. ಈ ದಿನವನ್ನು  ಲಕ್ಷ್ಮೀ ದೇವಿಗೆ ಸಮರ್ಪಿಸಲಾಗಿದೆ. ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುವ ಸಲುವಾಗಿ, ಈ ದಿನ  ಲಕ್ಷ್ಮೀ ಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಲಕ್ಷ್ಮೀ ದೇವಿಗೆ ಪ್ರಿಯವಾದ ವಸ್ತುಗಳನ್ನು ಪೂಜೆಯಲ್ಲಿ ಸೇರಿಸಲಾಗುತ್ತದೆ. ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಈ ದಿನ, ಲಕ್ಷ್ಮೀ -ಗಣೇಶನ ಪೂಜೆಯ ಸಮಯದಲ್ಲಿ ಧನ ಲಕ್ಷ್ಮೀಯ ಯಂತ್ರವನ್ನು ಸ್ಥಾಪಿಸಲಾಗುತ್ತದೆ. ದೀಪಾವಳಿಯ ಪೂಜೆಯಲ್ಲಿ ಧನ ಲಕ್ಷ್ಮೀಯ ಯಂತ್ರವನ್ನು ಸ್ಥಾಪಿಸಿದರೆ ಸಂಪತ್ತಿನ ದೇವತೆ ಸಂತೋಷದಿಂದ ಭಕ್ತರ ಮೇಲೆ ತಮ್ಮ ಕೃಪಾ ದೃಷ್ಟಿ ಹರಿಸುತ್ತಾಳೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಧನಲಕ್ಷ್ಮೀ  ಯಂತ್ರದ ಪ್ರಯೋಜನಗಳು : 
- ಈ ಯಂತ್ರವನ್ನು ಪೂಜೆಯಲ್ಲಿ ಸ್ಥಾಪಿಸುವುದರಿಂದ  ಲಕ್ಷ್ಮೀ ಕೃಪೆ ಮನೆಯಲ್ಲಿ  ನೆಲೆಯಾಗುತ್ತದೆ. 
-ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ. ಸದಾ ಸಂತೋಷ ಮತ್ತು ಶಾಂತಿ ಇರುತ್ತದೆ. 
ಎಲ್ಲಾ ರೀತಿಯ ಆರ್ಥಿಕ ತೊಂದರೆಗಳನ್ನು ತಪ್ಪಿಸಲು ಈ ಯಂತ್ರವು ಅದ್ಭುತವಾಗಿದೆ ಎಂದು ನಂಬಲಾಗಿದೆ. 
- ಕುಟುಂಬದ ಸದಸ್ಯರು ದೀರ್ಘಕಾಲದದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ,  ವಿಧಿವತ್ತಾಗಿ ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗದಿಂದ ಮುಕ್ತರಾಗಲು ಸಹಾಯ ಮಾಡುತ್ತದೆ. 
- ಈ ಯಂತ್ರವನ್ನು ಪೂಜಿಸುವುದರಿಂದ ಬಾಕಿ ಉಳಿದಿರುವ ಹಣ ಕೂಡಾ ಕೈ ಸೇರುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿ ಸಾಲದಿಂದ ಮುಕ್ತನಾಗುತ್ತಾನೆ ಎಂದು ಹೇಳಲಾಗುತ್ತದೆ. 
-ಈ ಯಂತ್ರವನ್ನು ನಿಯಮಿತವಾಗಿ ಪೂಜಿಸಿದರೆ, ಹಣ ಸಂಪಾದಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. 


ಇದನ್ನೂ ಓದಿ : 2000 ವರ್ಷಗಳ ಬಳಿಕ ದೀಪಾವಳಿ ದಿನವೇ ರೂಪುಗೊಳ್ಳುತ್ತಿದೆ ಈ ಐದು ಯೋಗ, ಬೆಳಕಿನ ಹಬ್ಬ ಬೆಳಗಲಿದೆ ಈ ರಾಶಿಯವರ ಜೀವನ


ಧನಲಕ್ಷ್ಮೀ ಯಂತ್ರವನ್ನು ಈ ರೀತಿ ಸ್ಥಾಪಿಸಿ :
ಸಂತೋಷ, ಸಮೃದ್ಧಿ ಮತ್ತು ಖ್ಯಾತಿಯನ್ನು ಪಡೆಯಲು ವಿಧಿವತ್ತಾಗಿ ಧನ ಲಕ್ಷ್ಮೀ ಯಂತ್ರವನ್ನು ಸ್ಥಾಪಿಸಬೇಕು. ಸ್ನಾನ ಮಾಡಿ ಮಡಿಯುಟ್ಟು ಯಂತ್ರವನ್ನು ಪಂಚಾಮೃತ ಮತ್ತು ಗಂಗಾಜಲದಿಂದ ಸ್ವಚ್ಛಗೊಳಿಸಬೇಕು. ನಂತರ ಈಶಾನ್ಯ ಮೂಲೆಯಲ್ಲಿ ಕೆಂಪು ಬಣ್ಣದ ಬಟ್ಟೆಯ ಮೇಲೆ ಈ ಯಂತ್ರವನ್ನು ಸ್ಥಾಪಿಸಬೇಕು. ಪೂಜೆಯ ವೇಳೆ ಓಂ ಶ್ರೀ ಹ್ರೀಂ ಶ್ರೀ ನಮಃ ಅಥವಾ ಓಂ ಶ್ರೀ ಹ್ರೀಂ ಶ್ರೀ ಮಂತ್ರವನ್ನು ಪಠಿಸಬೇಕು. 


ಧನ ಲಕ್ಷ್ಮೀ ಯಂತ್ರದ ಪೂಜಾ ವಿಧಾನ :
 - ಲಕ್ಷ್ಮೀ ಯಂತ್ರದ ಪೂಜಾ ವಿಧಾನವು ಬೆಳಿಗ್ಗೆಯಿಂದಲೇ ಪ್ರಾರಂಭವಾಗುತ್ತದೆ.  ಇದಕ್ಕಾಗಿ ಮುಂಜಾನೆ ಸ್ನಾನ ಮಾಡಿ ಹಳದಿ ಬಟ್ಟೆಯನ್ನು ಧರಿಸಿ. 
-ಪೂಜೆಗೂ ಮುನ್ನ ಶ್ರೀ ಯಂತ್ರವನ್ನು ಪಂಚಾಮೃತದಲ್ಲಿ ಇರಿಸಲಾಗುತ್ತದೆ. 
-ನಂತರ  ಅದರ ಮೇಲೆ ಕೆಂಪು ಚಂದನವನ್ನು ಸಿಂಪಡಿಸಿ. 
-ಈಗ ಕೆಂಪು ಗುಲಾಬಿ ಹೂವುಗಳು ಮತ್ತು ಅಕ್ಕಿಯನ್ನು ತೆಗೆದುಕೊಂಡು ಯಂತ್ರದ ಮೇಲೆ ಹಾಕಿ  
-ತುಪ್ಪದ ದೀಪವನ್ನು ಹಚ್ಚಿ ಯಂತ್ರದ ಆರತಿ ಮಾಡಿ. ಈ ದಿನ ದುರ್ಗಾ ಸಪ್ತಮಿಯನ್ನು ಕೂಡಾ ಪಠಿಸಬಹುದು. 
 - ಓಂ ಶ್ರೀ ಹ್ರೀಂ ಶ್ರೀ ಕಮಲೇ ಕಮಲಯೇ ಪ್ರಸೀದ್ ಪ್ರಸೀದ್, ಓಂ ಶ್ರೀ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೈ ನಮಃ. ಈ ಯಂತ್ರವನ್ನು ಪಠಿಸಿ. 


 ಶಾಸ್ತ್ರ ಬದ್ದವಾಗಿ ಈ ಯಂತ್ರವನ್ನು ಪೂಜಿಸುವುದರಿಂದ ಶೀಘ್ರವೇ ಪೂಜಾ ಫಲ ಕೂಡಾ ಲಭಿಸುವುದು. 


ಇದನ್ನೂ ಓದಿ : Diwali 2022: ತಾಯಿ ಲಕ್ಷ್ಮಿಯ ವಿಶೇಷ ದೇವಾಲಯ, ದೀಪಾವಳಿಯಂದು ಭಕ್ತರಿಗೆ ಹಣ, ಚಿನ್ನ, ಬೆಳ್ಳಿಯೇ ಪ್ರಸಾದ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.