ದಾಳಿಂಬೆ ತಿಂದರೆ ಹೆಚ್ಚಾಗುತ್ತದೆಯೇ ಬ್ಲಡ್ ಶುಗರ್ ? ಏನು ಹೇಳುತ್ತಾರೆ ತಜ್ಞರು
ಮಧುಮೇಹ ಹೊಂದಿರುವ ಜನರು ಅಪಧಮನಿಕಾಠಿಣ್ಯದ ಅಪಾಯವನ್ನು ಹೊಂದಿರುತ್ತಾರೆ. ಇದು ಹೃದಯ ಕಾಯಿಲೆ, ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ರಕ್ತಪರಿಚಲನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಬೆಂಗಳೂರು : ಇತ್ತೀಚೀನ ದಿನಗಳಲ್ಲಿ ಮಧುಮೇಹ ಎನ್ನುವುದು ಸಾಮಾನ್ಯ ಕಾಯಿಲೆಯಾಗಿದೆ (Diabetes). ಚಿಕ್ಕ ವಯಸ್ಸಿನಲ್ಲಿಯೇ ಬ್ಲಡ್ ಶುಗರ್ ಅಧಿಕವಾಗಿರುವ ಅಪಾಯ ಎದುರಾಗುತ್ತದೆ. ಬ್ಲಡ್ ಶುಗರ್ (Blood sugar)ಹೆಚ್ಚಾದರೆ ಅಥವಾ ಮಧುಮೇಹವಿದ್ದಾಗ ಹೃದಯದ ಕಾಯಿಲೆಗಳ ಅಪಾಯ ಕೂಡಾ ಎದುರಾಗುತ್ತದೆ.
ಮಧುಮೇಹ (diabetes) ಹೊಂದಿರುವ ಜನರು ಅಪಧಮನಿಕಾಠಿಣ್ಯದ ಅಪಾಯವನ್ನು ಹೊಂದಿರುತ್ತಾರೆ. ಇದು ಹೃದಯ ಕಾಯಿಲೆ (Heart disease), ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ರಕ್ತಪರಿಚಲನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ : Healthy Bathing Tips: ಹೊಳೆಯುವ ತ್ವಚೆಗಾಗಿ ಸ್ನಾನ ಮಾಡುವ ನೀರಿನಲ್ಲಿ ಈ ಮಸಾಲೆ ಬೆರೆಸಿ!
ಮಧುಮೇಹ ಹೊಂದಿರುವ ಜನರು ಮೂರು ತಿಂಗಳ ಕಾಲ ದಾಳಿಂಬೆ ರಸವನ್ನು (Pomagranate juice)ಸೇವಿಸಿದರೆ ಅಪಧಮನಿಕಾಠಿಣ್ಯದ ಅಪಾಯವು ಕಡಿಮೆಯಾಗುತ್ತದೆ. ಇದರ ಜೊತೆಗೆ, ದಾಳಿಂಬೆ ರಸವು ಪ್ರತಿರಕ್ಷಣಾ ಕೋಶಗಳಿಂದ LDL ಕೊಲೆಸ್ಟ್ರಾಲ್, ಅನಾರೋಗ್ಯಕರ LDL ಕೊಲೆಸ್ಟ್ರಾಲ್ (cholesterol) ಅನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ.
ದಾಳಿಂಬೆ ರಸದಲ್ಲಿ ಕಂಡುಬರುವ ಆ್ಯಂಟಿ ಒಕ್ಸಿಡೆಂಟ್ ಮಧುಮೇಹಕ್ಕೆ ಸಂಬಂಧಿಸಿದಂತೆ ಹೃದಯ ಸಂಬಂಧಿತ ಅಪಾಯಗಳನ್ನು ಕಡಿಮೆ ಮಾಡಲು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ (Pomogranate for diabetes).
ಇದನ್ನೂ ಓದಿ : ನವರಾತ್ರಿಯ ವೇಳೆ ನೀವೂ ಉಪವಾಸ ಮಾಡುತ್ತೀರಾ? ಕಲ್ಲು ಉಪ್ಪಿಗೆ ಸಂಬಂಧಿಸಿದ ಈ ಸತ್ಯ ತಿಳಿಯಿರಿ
"ಹೆಚ್ಚಿನ ಹಣ್ಣಿನ ರಸಗಳಲ್ಲಿ, ಸಕ್ಕರೆಗಳು ಹಾನಿಕಾರಕ ರೂಪಗಳಲ್ಲಿ ಕಂಡು ಬರುತ್ತವೆ. ಆದರೆ, ದಾಳಿಂಬೆ ರಸದಲ್ಲಿ, ಸಕ್ಕರೆಗಳು ಆ್ಯಂಟಿ ಒಕ್ಸಿಡೆಂಟ್ ಗುಣವನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಇದು ಅಪಧಮನಿಕಾಠಿಣ್ಯದ ವಿರುದ್ಧ ಹೃದಯವನ್ನು ರಕ್ಷಿಸುತ್ತದೆ."
ದಾಳಿಂಬೆ ರಸವು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಇದು ಪ್ರತಿರಕ್ಷಣಾ ಕೋಶಗಳಿಂದ ಆಕ್ಸಿಡೀಕರಣಗೊಂಡ "ಕೆಟ್ಟ" LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎನ್ನುವುದು ಸಂಶೋಧನೆಯಲ್ಲಿ ತಿಳಿದು ಬಂದಿದೆ.
ದಾಳಿಂಬೆ ರಸವು ಇತರ ಹಣ್ಣಿನ ರಸಗಳಿಗೆ ಸಮಾನವಾದ ಸಕ್ಕರೆ ಮಟ್ಟವನ್ನು ಹೊಂದಿರುತ್ತದೆ. ಆದರೆ, ಇದರಲ್ಲಿರುವ ಸಕ್ಕರೆಯ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹದಗೆಡಿಸುವುದಿಲ್ಲ ಎನ್ನುವುದು ಕೂಡಾ ಈ ಸಂಶಿಧನೆಯಲ್ಲಿ ಸಾಬೀತಾಗಿದೆ (Blood sugar level).
ಸೂಚನೆ : ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನೂ ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆದುಕೊಳ್ಳಿ, ZEE NEWS ಇದನ್ನೂ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.