ಬೆಂಗಳೂರು : ಬೇಸಿಗೆ ಶುರುವಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಶುರುವಾಗಿದೆ. ಈ ಅಪಾಯಕಾರಿ ಪರಾವಲಂಬಿಗಳು ನಮ್ಮ ರಕ್ತವನ್ನು ಕುಡಿಯುವುದು ಮಾತ್ರವಲ್ಲದೆ ಅನೇಕ ರೋಗಗಳಿಗೆ ಕಾರಣವಾಗುತ್ತವೆ . ಸೊಳ್ಳೆಗಳ ಪರಿಹಾರಕ್ಕೆ ಮಾರುಕಟ್ಟೆಯಲ್ಲಿ ಅನೇಕ್ ವಿಧದ ಕಾಯಿಲ್, ಕ್ರೀಂ, ಜೆಲ್ ಗಳು ಲಭ್ಯವಿದೆಯಾದರೂ, ನಯಾವುದೂ ಪರಿಣಾಮಕಾರಿಯಾಗಿಲ್ಲ (How to Stop Mosquitoes).  ಆದರೆ ಈ ಹೊಸ ಮಾರ್ಗವನ್ನು ಬಳಸುವ ಮೂಲಕ  ಸೊಳ್ಳೆಗಳು ಮನೆಗೆ ಪ್ರವೇಶಿಸಲು ಸಾಧ್ಯವಾಗದಂತೆ ಮಾಡಬಹುದು. 


COMMERCIAL BREAK
SCROLL TO CONTINUE READING

ನೆದರ್ಲೆಂಡ್ಸ್‌ನ ಕೀಟಶಾಸ್ತ್ರಜ್ಞರು ಸೊಳ್ಳೆಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ.  Deutsche Welle ಅವರ ವರದಿಯ ಪ್ರಕಾರ, ಈ ವಿಜ್ಞಾನಿಗಳು ಪ್ಲಾಸ್ಟಿಕ್ ಜಾಲರಿಯನ್ನು ಕಂಡುಹಿಡಿದಿದ್ದು, ಇದನ್ನು ಮನೆಯ ಕಿಟಕಿಗಳು ಮತ್ತು ಪೈಪ್‌ಗಳಲ್ಲಿ ಅಳವಡಿಸಿದರೆ ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ(How to Stop Mosquitoes) . ವರದಿಯ ಪ್ರಕಾರ, ಈ ಜಾಲರಿಯ ಮೇಲೆ ವಿಶೇಷ ರೀತಿಯ ಕೀಟನಾಶಕವನ್ನು ಅನ್ವಯಿಸಲಾಗಿದೆ (Mosquitoe bite). ಸೊಳ್ಳೆಗಳು ಅದರ ಮೇಲೆ ಕುಳಿತ ತಕ್ಷಣ ಮೆಶ್ ಮೇಲೆ ಹಾಕಿದ ಕೆಮಿಕಲ್ ಸೊಳ್ಳೆಗಳ ಮೈಮೇಲೆ ಲೇಪನವಾಗುತ್ತದೆ.  


ಇದನ್ನೂ ಓದಿ :  Health Tips: ನೀವೂ ಬೆಳಗ್ಗೆ ಎದ್ದಾಕ್ಷಣ ಚಹಾ ಸೇವಿಸುತ್ತೀರಾ? ಈ ಲೇಖನ ಮೊದಲು ಓದಿ


ಸೊಳ್ಳೆಗಳ ಸಾವಿಗೆ ಕಾರಣವಾಗಲಿದೆ ಕೆಮಿಕಲ್ : 
ಈ ರಾಸಾಯನಿಕದ ಪರಿಣಾಮವಾಗಿ ಸೊಳ್ಳೆಗಳು ಕೊಲ್ಲಲ್ಪಡುತ್ತದೆ.  ನೆದರ್ಲೆಂಡ್ಸ್‌ನ ವಿಜ್ಞಾನಿಗಳು ಟಾಂಜಾನಿಯಾದ ಕೆಲವು ಪ್ರದೇಶಗಳಲ್ಲಿ ಈ ತಂತ್ರವನ್ನು ಪರೀಕ್ಷಿಸಿದ್ದಾರೆ. ಪರೀಕ್ಷೆಯ ಫಲಿತಾಂಶಗಳು ಉತ್ತಮವಾಗಿ ಬಂದಿವೆ.  ಇನ್ನೂ ವಿಶೇಷವೆಂದರೆ ಈ ತಂತ್ರವು ತುಂಬಾ ದುಬಾರಿ ಅಲ್ಲ (Mosquitoes net). ಒಂದು ಜಾಲರಿ ಸುಮಾರು 6 ತಿಂಗಳವರೆಗೆ ಕೆಲಸ ಮಾಡುತ್ತದೆ ಮತ್ತು ಅದರ ವೆಚ್ಚ ಕೇವಲ 100 ರೂಪಾಯಿಗಳು ಮಾತ್ರ (Mosquitoes net Price) . 


ಸ್ಮಾರ್ಟ್‌ಫೋನ್‌ಗಳಿಂದ ಸೊಳ್ಳೆಗಳು ಓಡಿಹೋಗುತ್ತವೆಯೇ?
ಸ್ಮಾರ್ಟ್‌ಫೋನ್‌ಗಳು (Smartphone)ಸೊಳ್ಳೆಗಳನ್ನು ಓಡಿಸಲು ಸಹಾಯಕವಾಗಿದೆ ಎಂದು ಸಾಬೀತುಪಡಿಸಬಹುದು. ಕೆಲವು ಅಪ್ಲಿಕೇಶನ್ ಗಳನ್ನು ಸ್ಮಾರ್ಟ್‌ಫೋನ್‌ಗಳಿಂದ ಡೌನ್ ಲೋಡ್ ಮಾಡಬಹುದು.  ಇದರಲ್ಲಿ ಹೈ ಫ್ರೀಕ್ವೆನ್ಸಿ  ಶಬ್ದಗಳು ಹೊರಬರುತ್ತವೆ. ಸೊಳ್ಳೆಗಳು ಈ ಶಬ್ದಗಳನ್ನು ಇಷ್ಟಪಡುವುದಿಲ್ಲ ಮತ್ತು ಈ ಶಬ್ದಗಳು ಸೊಳ್ಳೆಗಳನ್ನು ಮನೆಯಿಂದ ದೂರವಿಡುತ್ತವೆ. 


ಇದನ್ನೂ ಓದಿ : Green Tea ಕುಡಿದು ಟೀ ಬ್ಯಾಗ್ ಎಸೆಯುತ್ತೀರಾ ? ಬಳಸಿದ ಟೀ ಬ್ಯಾಗ್ ನ ಅದ್ಭುತ ಪ್ರಯೋಜನ ತಿಳಿಯಲು ಈ ವರದಿ ಓದಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.