ಹೀಗೆ ಮಾಡಿದರೆ ಸೊಳ್ಳೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

ಮಳೆಗಾಲ ಆಗಮನದೊಂದಿಗೆ ಸೊಳ್ಳೆಗಳ ಆಗಮನವೂ ಪ್ರಾರಂಭವಾಗುತ್ತದೆ. ಸೊಳ್ಳೆಗಳನ್ನು (Mosquitoes) ಓಡಿಸಲು, ಜನರು ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳು ಲಭ್ಯವಿರುತ್ತವೆ. ಆದರೂ ಅದು ಸೊಳ್ಳೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. 

Written by - Ranjitha R K | Last Updated : Jun 23, 2021, 05:40 PM IST
  • ಮಳೆಗಾಲ ಬಂತೆಂದರೆ ಸೊಳ್ಳೆ ಕಾಟವೂ ಶುರು
  • ಮುಕ್ತಿ ಪಡೆಯಲು ನೈಸರ್ಗಿಕ ಉಪಾಯ
  • ರಾಸಾಯನಿಕಗಳ ಬಳಕೆಯಿಲ್ಲದೆ ಸೊಳ್ಳೆಯನ್ನು ಓಡಿಸಬಹುದು
 ಹೀಗೆ ಮಾಡಿದರೆ ಸೊಳ್ಳೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ title=
ಸೊಳ್ಳೆಕಾಟದಿಂದ ಮುಕ್ತಿ ಪಡೆಯಲು ನೈಸರ್ಗಿಕ ಉಪಾಯ (photo india.com)

ನವದೆಹಲಿ : ಮಳೆಗಾಲ ಆಗಮನದೊಂದಿಗೆ ಸೊಳ್ಳೆಗಳ ಆಗಮನವೂ ಪ್ರಾರಂಭವಾಗುತ್ತದೆ. ಸೊಳ್ಳೆಗಳನ್ನು (Mosquitoes) ಓಡಿಸಲು, ಜನರು ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳು ಲಭ್ಯವಿರುತ್ತವೆ. ಆದರೂ ಅದು ಸೊಳ್ಳೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಅಲ್ಲದೆ ಅದು ಕೆಮಿಕಲ್ ಗಳಾಗಿರುವುದರಿಂದ ಅದು ನಮ್ಮ ಆರೋಗ್ಯಕ್ಕೂ ತೊಂದರೆ ಉಂಟು ಮಾಡುತ್ತದೆ. ಆದರೆ ಇಂದು ನಾವು ಹೇಳುವ  ಕೆಲ ಪರಿಹಾರಗಳಿಂದ ಸೊಳ್ಳೆ ಕಾಟವೂ ತಪ್ಪುತ್ತದೆ. ನಿಮ್ಮ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುವುದಿಲ್ಲ. 

ಚಕ್ಕೆ :
ಸೊಳ್ಳೆಗಳು   (Mosquitoes) ಚಕ್ಕೆ  ಪರಿಮಳವನ್ನು ಇಷ್ಟಪಡುವುದಿಲ್ಲ. ಇದರಲ್ಲಿ ಸಿನ್ನಮಾಲ್ಡಿಹೈಡ್ ಮತ್ತು ಸಿನ್ನಮೈಲ್ ಅಸಿಟೇಟ್ ನಂತಹ ಅನೇಕ ಪದಾರ್ಥಗಳಿವೆ. ಇದು ಸೊಳ್ಳೆಗಳನ್ನು ದೂರವಿರಿಸುತ್ತದೆ. ಸ್ಪ್ರೇ ಬಾಟಲಿಯಲ್ಲಿ ಕೆಲವು ಹನಿ ಚಕ್ಕೆ ಎಣ್ಣೆಯನ್ನು ಹಾಕಿ ಮತ್ತು ಅದಕ್ಕೆ ನೀರು ತುಂಬಿಸಿ.  ನಿಮ್ಮ ದೇಹದ ಮೇಲೆ ಇದನ್ನು ಸಿಂಪಡಿಸಿಕೊಳ್ಳಿ. 

ಇದನ್ನೂ ಓದಿ : Senna Tora Leaves Benefits : ಮಳೆಗಾಲದಲ್ಲಿ ಶೀತ, ಜ್ವರದಿಂದ ರಕ್ಷಿಸಿಕೊಳ್ಳಲು ಬಳಸಿ ತಗತೆ ಸೊಪ್ಪು!

ಬೇವು:

ಬೇವು (Neem) ಸೊಳ್ಳೆಗಳನ್ನು ಓಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. 30 ಮಿಲಿ ನೀರಿನಲ್ಲಿ 10 ಹನಿ ಬೇವಿನ ಎಣ್ಣೆಯನ್ನು (Neem oil) ಬೆರೆಸಿ ದೇಹದ ಭಾಗಗಳಿಗೆ ಹಚ್ಚಿ. ಸೊಳ್ಳೆಗಳು ನಿಮ್ಮ ಹತ್ತಿರ ಕೂಡಾ ಸುಳಿಯುವುದಿಲ್ಲ. 

ಬೆಳ್ಳುಳ್ಳಿ : 
ಬೆಳ್ಳುಳ್ಳಿಯ (Garlic) ಪರಿಮಳಕ್ಕು ಸೊಳ್ಳೆಗಳು ನಿಲ್ಲುವುದಿಲ್ಲ. ಹಾಗಾಗಿ, ಬೆಳ್ಳುಳ್ಳಿ ಮೊಗ್ಗುಗಳನ್ನು ಒಂದು ಚಮಚ ಎಣ್ಣೆಯಲ್ಲಿ ಹಾಕಿ ರಾತ್ರಿ ಇಡೀ ಬಿಡಿ. ಈ ಎಣ್ಣೆಗೆ ಒಂದು ಚಮಚ ನಿಂಬೆ ಮತ್ತು 2 ಕಪ್ ನೀರು ಸೇರಿಸಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಮನೆಯಲ್ಲಿ ಇರಿಸಿದ ಸಸ್ಯಗಳ ಮೇಲೆ ಸಿಂಪಡಿಸಿ.

ಇದನ್ನೂ ಓದಿ : ವರ್ಷ ೫೦ ದಾಟಿದರೆ ಖಂಡಿತಾ ನಿಮ್ಮ ಆಹಾರ ಕ್ರಮ ಬದಲಾಯಿಸಿ

ವಿನೆಗರ್ ಮತ್ತು ಬೇಕಿಂಗ್ ಸೋಡಾ : 
1 ಕಪ್ ವಿನೆಗರ್ ನಲ್ಲಿ 1/4 ಕಪ್ ಅಡಿಗೆ ಸೋಡಾವನ್ನು (Baking soda) ಬೆರೆಸಿ ಸ್ಪ್ರೇ ಬಾಟಲಿಯಲ್ಲಿಹಾಕಿ. ಈಗ ಈ ಮಿಶ್ರಣವನ್ನು ಮನೆಗೆ ಸಿಂಪಡಿಸಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News