Kesar kulfi recipe : ಮನೆಯಲ್ಲೇ ಮಾಡಿ ಕೇಸರಿ ಕುಲ್ಫಿ, ತುಂಬಾ ಸಿಂಪಲ್, ಮಕ್ಕಳಿಗೂ ಇಷ್ಟ ಆಗುತ್ತೆ.!
Kesar kulfi recipe : ಬೇಸಿಗೆ ಲಾಕ್ ಡೌನ್ ನಲ್ಲಿಯೇ ಕಳೆದು ಹೋಗಿದೆ. ಐಸ್ ಕ್ರೀಂ ಚಪ್ಪರಿಸುವ ಖುಷಿ ಕಣ್ಮರೆಯಾಗಿದೆ. ಹಾಗಂತ ನೀವು ಬೇಸರ ಮಾಡಬೇಕಿಲ್ಲ. ಮನೆಯಲ್ಲೇ ಕೇಸರ್ ಕುಲ್ಫಿ ಮಾಡಬಹುದು. ಇದು ಸಿಂಪಲ್. ಹೆಚ್ಚಿಗೆ ಸಾಮಾಗ್ರಿಗಳೂ ಬೇಕಾಗಿಲ್ಲ.
ನವದೆಹಲಿ : ಬೇಸಿಗೆ ಲಾಕ್ ಡೌನ್ ನಲ್ಲಿಯೇ ಕಳೆದು ಹೋಗಿದೆ. ಐಸ್ ಕ್ರೀಂ ಚಪ್ಪರಿಸುವ ಖುಷಿ ಕಣ್ಮರೆಯಾಗಿದೆ. ಹಾಗಂತ ನೀವು ಬೇಸರ ಮಾಡಬೇಕಿಲ್ಲ. ಮನೆಯಲ್ಲೇ ಕೇಸರ್ ಕುಲ್ಫಿ (Kesar Kulfi) ಮಾಡಬಹುದು. ಇದು ಸಿಂಪಲ್. ಹೆಚ್ಚಿಗೆ ಸಾಮಾಗ್ರಿಗಳೂ ಬೇಕಾಗಿಲ್ಲ. ಮನೆಯಲ್ಲೇ ಇರುವ ಸಾಮಾಗ್ರಿಗಳನ್ನು ಬಳಸಿ ಮಾಡಬಹುದು. ಮಕ್ಕಳಿಗೂ ಇಷ್ಟ ವಾಗುತ್ತದೆ. ಹೆಲ್ತಿ ಆಗಿರುತ್ತದೆ ಕೂಡಾ. ಕರೋನಾ (Coronavirus) ಕಾಲದಲ್ಲಿ ಹೊರಗೆ ಹೋಗಿ ಕುಲ್ಫಿ ತಿನ್ನುವ ರಿಸ್ಕ್ ಕೂಡಾ ಇರಲ್ಲ. ಹೆಲ್ತಿ ಕುಲ್ಫಿ (Healthy kulfi) ಮನೆಯಲ್ಲೇ ಮಾಡಿ. ಇದು ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿದೆ ಕೇಸರಿ ಕುಲ್ಫಿಯ ರೆಸಿಪಿ.
ಕೇಸರ್ ಕುಲ್ಫಿ ಮಾಡಲು ಬೇಕಾದ ಸಾಮಾಗ್ರಿಗಳು :
1. 2 ಕಪ್ ಹಾಲು (Milk)
2. 1 ಕಪ್ ಕಂಡೆನ್ಸ್ಡ್ ಹಾಲು, 2 ಟೇಬಲ್ ಸ್ಪೂನ್ ಕಾರ್ನ್ ಹಿಟ್ಟು (Corn flour)
3. 1 ಟೀ ಸ್ಪೂನ್ ಏಲಕ್ಕಿ ಪೌಡರ್
4. 2 ಟೇಬಲ್ ಸ್ಪೂನ್ ಬಾದಾಮ್ ( ಪೀಸ್ ಪೀಸ್ ಮಾಡಿದ್ದು)
5. 1 ಟೇಬಲ್ ಸ್ಪೂನ್ ಗೋಡಂಬಿ (ಪೀಸ್ ಪೀಸ್ ಮಾಡಿದ್ದು)
6. 2-3 ಏಲಕ್ಕಿ. (ಚೆನ್ನಾಗಿ ಜಜ್ಜಿರಬೇಕು)
7. 10-12 ಕೇಸರಿ ಎಸಳು
ಇದನ್ನೂ ಓದಿ : food to avoid with milk : ಹಾಲಿನ ಜೊತೆ ಈ ಕಾಂಬಿನೇಷನ್ ಒಳ್ಳೆಯದಲ್ಲ..ಗೊತ್ತಿರಲಿ
ಕೇಸರಿ ಕುಲ್ಫಿ ಮಾಡುವ ವಿಧಾನ :
ಒಂದು ಪಾನ್ ಗೆ ಹಾಲು (Milk) ಹಾಕಿ ಸಿಮ್ ನಲ್ಲಿಟ್ಟು ಬಿಸಿ ಮಾಡುತ್ತಲಿರಿ. ಹಾಲು ಬಿಸಿಯಾಗುತ್ತಿದ್ದಂತೆಯೇ ಅದಕ್ಕೆ ಕಂಡೆನ್ಸ್ಡ್ ಹಾಲು (Condensed milk) ಹಾಕಿ ತಿರುಗಿಸುತ್ತಾ ಇರಿ. ಸ್ವಲ್ಪ ಹೊತ್ತಿನ ಬಳಿಕ ಏಲಕ್ಕಿ ಪುಡಿ ಹಾಕಿ. ಹಾಲು ಕುದಿ ಬರುವ ತನಕ ತಿರುಗಿಸುತ್ತಲೇ ಇರಿ. ಇದರಲ್ಲೀಗ ಕತ್ತರಿಸಿದ ಗೋಡಂಬಿ (Cashew) , ಬಾದಾಮಿ ಹಾಕಿ ಹಾಲನ್ನು ಕುದಿಸಿ. ಮತ್ತೊಂದು ಕಡೆ ಒಂದು ಚಮಚ ಹಾಲಿನಲ್ಲಿ ಏಲಕ್ಕಿ ಪುಡಿ, ಕೇಸರಿ ಮತ್ತು ಕಾರ್ನ್ ಹಿಟ್ಟು ಹಾಕಿ ಮಿಕ್ಸ್ ಮಾಡಿ. ಅದನ್ನು ಕುದಿಯುವ ಹಾಲಿಗೆ ಹಾಕಿ. ಅದು ದಪ್ಪ ಆಗುವ ತನಕ ಕುದಿಸುತ್ತಲೇ ಇರಿ. ದಪ್ಪ ಆದ್ಮೇಲೆ ಸ್ಷೌವ್ ಬಂದ್ ಮಾಡಿ. ಪಾನ್ ಎತ್ತಿ ಬದಿಗಿಡಿ. ಅದು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಆ ಪೇಸ್ಟನ್ನು ಕುಲ್ಫಿ ಮೋಲ್ಡ್ಸ್ (Kulfi moulds) ಅಥವಾ ಸಣ್ಣ ಸ್ಟೀಲ್ ಅಥವಾ ಪ್ಲಾಸ್ಟಿಕ್ ಗ್ಲಾಸಿಗೆ ಹಾಕಿ. ಆ ಕುಲ್ಫಿ ಮೋಲ್ಡ್ ಅನ್ನು 7-8 ಗಂಟೆ ಫ್ರಿಜರ್ ನಲ್ಲಿಡಿ. ಕುಲ್ಫಿ ಮೇಲೆ ಬಾದಾಮಿ ಮತ್ತು ಗೋಡಂಬಿ ಹಾಕಿ ಸರ್ವ್ ಮಾಡಿ.
ಇದನ್ನೂ ಓದಿ : ಹೀಗೆ ಮಾಡಿ.! ಫ್ರಿಜ್ ಇಲ್ಲದಿದ್ದರೂ ಟೊಮ್ಯಾಟೋ, ದನಿಯಾ, ಪುದಿನ ಫ್ರೆಶ್ ಇರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ