ನವದೆಹಲಿ : ಫ್ರಿಜ್ ನಲ್ಲಿ ತುಂಬಾ ದಿನ ಇಟ್ಟ ಆಹಾರ ವಸ್ತು ಒಳ್ಳೆಯದಲ್ಲ. ನಾವಿಂದು ಫ್ರಿಜ್ ನಲ್ಲಿ ಇಡದೇ ಟೊಮ್ಯಾಟೋ (Tomato), ಪುದಿನ ಮತ್ತು ಕೊತ್ತಂಬರಿಸೊಪ್ಪಿನ ತಾಜಾತನ ಉಳಿಸುವುದು ಹೇಗೆ (how to keep coriander fresh). ಅದು ಬಹಳ ಹೊತ್ತು ಹಾಳಾಗದಂತೆ ಉಳಿಸುವುದು ಹೇಗೆ ಎಂಬುದರ ಬಗ್ಗೆ ಹೇಳುತ್ತೇವೆ.
1. ಮೊದಲು ಫ್ರೆಶ್ ಕೊತ್ತಂಬರಿ ಸೊಪ್ಪಿನಲ್ಲಿರುವ (Coriander) ಹಾಳಾಗಿರುವ ಎಲೆಗಳನ್ನು ತೆಗೆಯಿರಿ. ಅದರ ಕಾಂಡ ಮತ್ತು ಬೇರುಗಳನ್ನು ಕಟ್ ಮಾಡಿ ಕ್ಲೀನ್ ಮಾಡಿ. ನಂತರ ಅದನ್ನು ಸ್ವಚ್ಛ ಕಾಗದದಲ್ಲಿ ಸುತ್ತಿ ಒಂದು ತಂಪಾದ ಜಾಗದಲ್ಲಿಡಿ. ದನಿಯಾ ತುಂಬಾ ಹೊತ್ತು ಫ್ರೆಶ್ ಇರುತ್ತದೆ.
2. ಫ್ರೆಶ್ ಕೊತ್ತಂಬರಿ ಸೊಪ್ಪಿನ ಹಾಳಾದ ಎಲೆ ತೆಗೆದು ಕ್ಲೀನ್ ಮಾಡಿ. ಕಾಂಡ ಬೇರು ಕತ್ತರಿಸಿ, ಸ್ವಚ್ಛಮಾಡಿ. ಬಳಿಕ ಅದನ್ನು ಕ್ಲೀನ್ ಕಾಗದ ಅಥವಾ ಪ್ಲಾಸ್ಟಿಕ್ ಪಾಕೆಟಿನಲ್ಲಿ ಸುತ್ತಿಡಿ. ಒಂದು ರಬ್ಬರ್ ಬ್ಯಾಂಡ್ ಬಳಸಿ ಅದನ್ನು ಕಟ್ಟಿ. ಇದರಿಂದ ಅದು ತುಂಬಾ ಹೊತ್ತು ಫ್ರೆಶ್ (how to keep coriander fresh) ಆಗಿರುತ್ತದೆ.
ಇದನ್ನೂ ಓದಿ : Green Tea : ಕೊರೋನಾ ವಿರುದ್ಧ ಹೋರಾಡಲು ಗ್ರೀನ್ ಟೀ : ಸಂಶೋಧನೆಯಿಂದ ಮಾಹಿತಿ ಬಹಿರಂಗ!
3. ಮಾರುಕಟ್ಟೆಯಿಂದ ತಂದ ಪುದಿನದ ಕಟ್ಟು (Mint leave) ಬಿಚ್ಚಿ. ಅದರ ಕಾಂಡದ ಭಾಗವನ್ನು ಸ್ವಲ್ಪ ಕಟ್ ಮಾಡಿ. ಹಾಳಾದ ಎಲೆಗಳನ್ನು ತೆಗೆಯಿರಿ. ಅದನ್ನು ಚೆನ್ನಾಗಿ ಕ್ಲೀನ್ ಮಾಡಿ. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಳ್ಳಿ. ಕಾಂಡದ ಭಾಗ ನೀರಿಗೆ (Water) ತಾಗುವಂತೆ, ಎಲೆ ಮೇಲ್ಭಾಗದಲ್ಲಿರುವಂತೆ ಪುದಿನವನ್ನು ಪಾತ್ರೆಯಲ್ಲಿಡಿ. ಒಂದು ಸ್ವಚ್ಛ ಒದ್ದೆ ಬಟ್ಟೆಯನ್ನು ಅದಕ್ಕೆ ಮುಚ್ಚಿ. ನಿಮ್ಮ ಪುದಿನ ಬಾಡುವುದೇ ಇಲ್ಲ.
4. ಫ್ರಿಜ್‍ನಲ್ಲಿಡದೇ ಟೊಮ್ಯಾಟೋವನ್ನು (Tomato) ಕೆಡದಂತೆ ಇಡಬಹುದು. ಹೀಗೆ ಮಾಡಬೇಕಾದರೆ, ಮೊದಲು ಟೊಮ್ಯಾಟೋ ಒಂದೆಕ್ಕೊಂದು ಪರಸ್ಪರ್ ಟಚ್ ಆಗದಿರುವಂತೆ ಶೇಖರಿಸಿಡಿ. ಅದನ್ನು ತಂಪಾದ ಜಾಗದಲ್ಲಿಯೇ ಇಡಿ. ಹೀಗಿಟ್ಟರೆ, ಫ್ರಿಜ್ ಇಲ್ಲದೆಯೂ ಟ್ಯೊಮ್ಯಾಟೋ ಫ್ರೆಶ್ (how to keep tomato fresh without fridge) ಇರುತ್ತದೆ.
ಇದನ್ನೂ ಓದಿ : Health benefits of capsicum : ದೊಣ್ಣೆ ಮೆಣಸಿನಕಾಯಿ ಯಾಕೆ ತಿನ್ನಬೇಕು..? ಇಲ್ಲಿದೆ ನಾಲ್ಕು ಕಾರಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ