ರಾಜನೀತಿಯಲ್ಲಿ ಈ ರಾಶಿಯವರದ್ದು ಎತ್ತಿದ ಕೈ ..! ಶ್ರೀ ರಾಮ ಕೂಡಾ ಇದೇ ರಾಶಿಯಲ್ಲಿ ಅವತರಿಸಿದ್ದರಂತೆ
ಕರ್ಕಾಟಕ ರಾಶಿಯವರು ಸ್ಪಷ್ಟ ಮೈಬಣ್ಣವನ್ನು ಹೊಂದಿರುತ್ತಾರೆ. ಭಾವುಕತೆ, ಅಪಾರ ಕುತೂಹಲ, ಐಷಾರಾಮಿ, ವ್ಯವಹಾರ ದಕ್ಷತೆ ಇತ್ಯಾದಿ ಗುಣಗಳನ್ನು ಇವರು ಹೊಂದಿರುತ್ತಾರೆ. ತಮ್ಮ ಕರ್ತವ್ಯಗಳಿಗೆ ನಿಷ್ಠರಾಗಿರುತ್ತಾರೆ
ಬೆಂಗಳೂರು : ಇಂದು ನಾವು ನಾಲ್ಕನೇ ರಾಶಿಯಾಗಿರುವ ಕರ್ಕ ರಾಶಿಯವರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಈ ರಾಶಿಯ ಬಗ್ಗೆ ಜನರಲ್ಲಿ ಕೆಲವು ಗೊಂದಲಗಳಿವೆ ಎನ್ನಲಾಗಿದೆ. ಪ್ರತಿಯೊಂದು ಜಾತಕದಲ್ಲಿಯೂ ರಾಶಿ ಮತ್ತು ಚಂದ್ರನ ಚಿಹ್ನೆ ಇರುತ್ತದೆ. ರಾಶಿಗನುಗುಣವಾಗಿ ಪ್ರತಿಯೊಬ್ಬರೂ ಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ.
ಕರ್ಕಾಟಕ ರಾಶಿಯವರು ಉತ್ತಮ ರಾಜಕಾರಣಿಗಳು :
ಕರ್ಕಾಟಕ ರಾಶಿಯವರು ಸ್ಪಷ್ಟ ಮೈಬಣ್ಣವನ್ನು ಹೊಂದಿರುತ್ತಾರೆ. ಭಾವುಕತೆ, ಅಪಾರ ಕುತೂಹಲ, ಐಷಾರಾಮಿ, ವ್ಯವಹಾರ ದಕ್ಷತೆ ಇತ್ಯಾದಿ ಗುಣಗಳನ್ನು ಇವರು ಹೊಂದಿರುತ್ತಾರೆ. ತಮ್ಮ ಕರ್ತವ್ಯಗಳಿಗೆ ನಿಷ್ಠರಾಗಿರುತ್ತಾರೆ. ತಮ್ಮ ಜೊತೆಗಿರುವವರನ್ನು ಗೌರವಿಸುತ್ತಾರೆ. ಇವರು ನುರಿತ ರಾಜಕಾರಣಿಯಾಗುವುದರ ಜೊತೆಗೆ, ಉನ್ನತ ಸ್ಥಾನಕ್ಕೆ ಏರುತ್ತಾರೆ. ಇವರು ಬುದ್ದಿವಂತರಾಗಿರುತ್ತಾರೆ ಮಾತ್ರವಲ್ಲ ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ.
ಇದನ್ನೂ ಓದಿ : Zodiac Matches: ಈ ರಾಶಿಯ ಜನರು ಲೈಫ್ ಲಾಂಗ್ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ
ಸ್ಥೂಲಕಾಯತೆಯ ಬಗ್ಗೆ ಜಾಗರೂಕರಾಗಿರಿ :
ಕರ್ಕ ಎಂದರೆ ಏಡಿ. ಕರ್ಕ ರಾಶಿಯವರು ಅನೇಕ ಕೆಲಸಗಳನ್ನು ಏಕಕಾಲದಲ್ಲಿ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಅಂದರೆ ಬಹುಕಾರ್ಯಕ ಪ್ರತಿಭೆ ಅವರಲ್ಲಿ ಅಡಗಿರುತ್ತದೆ. ಕರ್ಕಾಟಕ ರಾಶಿಯು ಪುನರ್ವಸುವಿನ ಒಂದು ಚರಣ. ಪುಷ್ಯದ ನಾಲ್ಕು ಚರಣ, ಮತ್ತು ಆಶ್ಲೇಷಾದ ಚರಣಗಳು ಸೇರಿ ಆಗಿದೆ. ಇದು ಉತ್ತರ ದಿಕ್ಕಿನ ಪರಿಚಾರಕ. ಚಂದ್ರನು ಈ ಲಗ್ನದ ಅಧಿಪತಿ. ಚಂದ್ರ ಕೇವಲ ಕರ್ಕ ರಾಶಿಯ ಅಧಿಪತಿಯಾಗಿರುತ್ತಾನೆ.
ಈ ರಾಶಿಯಲ್ಲಿ ಗುರು ಉಚ್ಚನಾಗಿರುತ್ತಾನೆ. ಮಂಗಳ ಈ ರಾಶಿಯಲ್ಲಿ ದುರ್ಬಲನಾಗುತ್ತಾನೆ. ಕರ್ಕಾಟಕ ರಾಶಿಯ ಜನರು ಸ್ಥೂಲಕಾಯತೆಯ ಬಗ್ಗೆ ಬಹಳ ಜಾಗರೂಕರಾಗಿರಬೇಕು.
ಆಭರಣಗಳನ್ನು ಸಂಗ್ರಹಿಸುವ ಹವ್ಯಾಸ :
ಚಿನ್ನಾಭರಣ ಸಂಗ್ರಹಿಸುವುದರಲ್ಲಿಯೂ ಈ ರಾಶಿಯವರು ಒಲವು ಹೊಂದಿರುತ್ತಾರೆ. ಕರ್ಕಾಟಕ ರಾಶಿಯವರು ಅಮೂಲ್ಯವಾದ ವಸ್ತುಗಳನ್ನು ಸಂಗ್ರಹಿಸುತ್ತಲೇ ಇರುತ್ತಾರೆ. ಕರ್ಕ ರಾಶಿಯವರು ರತ್ನಗಳನ್ನು ಸಂಗ್ರಹಿಸುತ್ತಾರೆ.
ಇದನ್ನೂ ಓದಿ : Gemology: ವಜ್ರ ಧರಿಸುವ ಮುನ್ನ ಈ ವಿಚಾರ ತಿಳಿದಿರಲಿ.. ಇಲ್ಲವಾದರೆ ದೊಡ್ಡ ಬೆಲೆ ತೆರಬೇಕಾದೀತು
ಕನಸುಗಳನ್ನು ನನಸಾಗಿಸುವ ಸಾಮರ್ಥ್ಯ :
ಈ ರಾಶಿಯವರು ತಮ್ಮ ಕರ್ತವ್ಯಗಳಿಗೆ ನಿಷ್ಠರಾಗಿರುತ್ತಾರೆ. ತಮ್ಮ ಜೊತೆಗಿರುವವರನ್ನು ಗೌರವಿಸುತ್ತಾರೆ. ಕರ್ಕಾಟಕ ರಾಶಿಯ ಜನರು ತಮ್ಮ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರಲ್ಲಿ ಸ್ನೇಹಿತರ ಬಗ್ಗೆ ಹೆಚ್ಚಿನ ಪ್ರೀತಿ ಮತ್ತು ಉದಾರತೆ ಇರುತ್ತದೆ.
ಭಗವಾನ್ ರಾಮನು ಕರ್ಕಾಟಕ ರಾಶಿಯಲ್ಲಿ ಅವತರಿಸಿದನಂತೆ :
ಒಬ್ಬ ವ್ಯಕ್ತಿಯ ಲಘ್ನ ಅಥವಾ ರಾಶಿ ಅವನ ಹಿಂದಿನ ಜನ್ಮದ ಕರ್ಮಗಳಿಂದ ಉಂಟಾಗುತ್ತದೆ ಮತ್ತು ಶ್ರೀರಾಮನು ಅವತರಿಸಿರುವ ರಾಶಿಯು ಸಾಮಾನ್ಯವಾಗಿರಲು ಸಾಧ್ಯವಿಲ್ಲ. ಜಾತಕದಲ್ಲಿ ನಾಲ್ಕನೇ ಮನೆಯ ಉಪಸ್ಥಿತಿಯಿಂದಾಗಿ, ಸಂತೋಷ, ಸಮೃದ್ಧಿ, ವಾಸಸ್ಥಳ ಮತ್ತು ಸಾರ್ವಜನಿಕ ಸಂಪರ್ಕಗಳು ಬಹಳ ಉನ್ನತ ಮಟ್ಟದಲ್ಲಿರುತ್ತವೆ. ಜಾತಕದಲ್ಲಿ ಚಂದ್ರನು ಉತ್ತಮ ಮತ್ತು ಬಲವಾದ ಸ್ಥಾನದಲ್ಲಿದ್ದರೆ, ಅಂತಹ ವ್ಯಕ್ತಿಯು ಅತ್ಯಂತ ಉನ್ನತ ಸ್ಥಾನವನ್ನುಪಡೆದುಕೊಳ್ಳುತ್ತಾನೆ.
ಶತ್ರುಗಳನ್ನು ಎಂದಿಗೂ ಮರೆಯುವುದಿಲ್ಲ :
ಕರ್ಕಾಟಕ ರಾಶಿಯವರು ಅವರ ಶತ್ರುಗಳನ್ನು ಎಂದಿಗೂ ಮರೆಯುವುದಿಲ್ಲ. ಶತ್ರುಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಇವರ ವಿಶೇಷವಾದ ಸಾಮರ್ಥ್ಯವೆಂದರೆ ಅವರು ಪ್ರಾಣಿಗಳ ಹಾವಭಾವಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಆಂಜನೇಯನಿಗೆ ಈ ರಾಶಿಯವರ ಮೇಲೆ ವಿಶೇಷ ಪ್ರೀತಿ ಇರುತ್ತದೆಯಂತೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.