Guru Gochar 2022: 2023ರವರೆಗೆ ಈ ಮೂರು ರಾಶಿಯವರಿಗೆ ಭಾರೀ ಅದೃಷ್ಟ .! ಪ್ರತಿ ಕೆಲಸದಲ್ಲಿಯೂ ಗುರು ನೀಡಲಿದ್ದಾನೆ ಯಶಸ್ಸು

Guru Gochar 2022: ಜ್ಯೋತಿಷ್ಯದಲ್ಲಿ ಗುರುವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಗ್ರಹವು ಮಂಗಳಕರ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಅದೃಷ್ಟವು ಹೆಚ್ಚಾಗುತ್ತದೆ. ಜೀವನದಲ್ಲಿ ಯಶಸ್ಸು, ಸಮೃದ್ಧಿಯನ್ನು ನೀಡುತ್ತದೆ. 

Written by - Ranjitha R K | Last Updated : May 9, 2022, 10:34 AM IST
  • ಗುರು ಬೆಳಗಲಿದ್ದಾನೆ ಅದೃಷ್ಟ
  • ಇನ್ನೊಂದು ವರ್ಷ ಹಿಡಿದ ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು
  • ತೆರೆಯಲಿದೆ ಮೂರು ರಾಶಿಯವರ ಅದೃಷ್ಟದ ಬಾಗಿಲು
Guru Gochar 2022: 2023ರವರೆಗೆ ಈ ಮೂರು ರಾಶಿಯವರಿಗೆ ಭಾರೀ ಅದೃಷ್ಟ .! ಪ್ರತಿ ಕೆಲಸದಲ್ಲಿಯೂ ಗುರು ನೀಡಲಿದ್ದಾನೆ  ಯಶಸ್ಸು  title=
Guru Gochar 2022 (file photo)

ಬೆಂಗಳೂರು : Guru Gochar 2022: ಜ್ಯೋತಿಷ್ಯದ ಪ್ರಕಾರ, ಗುರುವಿನ ರಾಶಿಚಕ್ರದ ಬದಲಾವಣೆಯು ಎಲ್ಲಾ ರಾಶಿಅವರಿಗೂ ಬಹಳ ಮುಖ್ಯವಾಗಿರುತ್ತದೆ. ಏಪ್ರಿಲ್ 12 ರಂದು, ಗುರು ಗ್ರಹ ಮೀನ ರಾಶಿಯನ್ನು ಪ್ರವೇಶಿಸಿದೆ. ಮುಂದಿನ ಒಂದು ವರ್ಷದವರೆಗೆ ಈ ರಾಶಿಯಲ್ಲಿ ಗುರು ಉಳಿಯಲಿದೆ. ದೇವಗುರು ಸ್ಥಾನವನ್ನು ಹೊಂದಿರುವ ಗುರು ಗ್ರಹವು ವರ್ಷದಲ್ಲಿ ಒಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತದೆ. ಅಂದರೆ, ಇನ್ನು ಮುಂದಿನ ವರ್ಷ ಏಪ್ರಿಲ್ ನಲ್ಲಿ ಗುರು ಗ್ರಹ ತನ್ನ ರಾಶಿ ಪರಿವರ್ತನೆ ಮಾಡಲಿದೆ. ಗುರುವಿನ ರಾಶಿ ಪರಿವರ್ತನೆಯಿಂದ ಮೂರು ರಾಶಿಯವರು ಭಾರೀ ಯಶಸ್ಸು ಪಡೆಯುತ್ತಾರೆ. ಇಡೀ ವರ್ಸಃ ಸುಖ ಸಂತೋಷದಿಂದ ಕಳೆಯುತ್ತದೆ.

ವೃಷಭ : ಗುರು ಮೀನರಾಶಿಗೆ ಪ್ರವೇಶಿಸಿದ ಕೂಡಲೇ ವೃಷಭ ರಾಶಿಯವರಿಗೆ ಒಳ್ಳೆಯ ದಿನಗಳು ಶುರುವಾಗಿವೆ. ಮುಂಬರುವ 1 ವರ್ಷ, ಗುರು ಗ್ರಹವು ಅವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ದೊಡ್ಡ ಪ್ರಗತಿ ಕಾಣಲಿದೆ. ವೃತ್ತಿಜೀವನದ ಬಗ್ಗೆ ಕಾಣುತ್ತಿರುವ ದೊಡ್ಡ ಕನಸು ನನಸಾಗಬಹುದು. ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ಕೊನೆಗೊಳ್ಳಲಿದೆ.   ಆದಾಯ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ನೀವು ಮಾಡುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಈ ಸಮಯವು ಪ್ರೇಮ ಜೀವನ, ವೈವಾಹಿಕ ಜೀವನಕ್ಕೂ ಉತ್ತಮವಾಗಿರುತ್ತದೆ. 

ಇದನ್ನೂ ಓದಿ : Lucky people by zodiac: ಈ 4 ರಾಶಿಗಳ ಮೇಲಿರುತ್ತದೆ ಲಕ್ಷ್ಮೀಯ ವಿಶೇಷ ಕೃಪೆ ! ಇವರ ಜೀವನದಲ್ಲಿ ಹಣದ ಕೊರತೆಯಾಗುವುದೇ ಇಲ್ಲ

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಈ ಸಮಯವು ವೃತ್ತಿ-ವ್ಯವಹಾರದಲ್ಲಿ ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ. ಅವರು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಆದಾಯ ಹೆಚ್ಚಾಗಬಹುದು. ಈ ರಾಶಿಯ ಕೆಲವರು ದೊಡ್ಡ ಸ್ಥಾನವನ್ನು ಪಡೆಯಬಹುದು. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗಲಿದೆ. ವಿಶೇಷವಾಗಿ ಮಾಧ್ಯಮ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ದೊಡ್ಡ ಮಟ್ಟದ ಲಾಭವನ್ನು ಪಡೆಯುತ್ತಾರೆ. 

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಾವುದೇ ಅಡೆತಡೆಗಳಿಲ್ಲದೆ ನೆರವೇರಲಿದೆ. ಇಲ್ಲಿಯವರೆಗೆ ಅರ್ಧಕ್ಕೆ  ನಿಂತಿರುವ ಕೆಲಸಗಳು ಕೂಡಾ ಪೂರ್ಣಗೊಳ್ಳಲಿವೆ.  ಪ್ರಯಾಣದಲ್ಲಿ ಭಾರೀ ಯಶಸ್ಸು ಸಿಗಲಿದೆ. ವ್ಯಾಪಾರಸ್ಥರಿಗೂ ಗುರುವು ಅನೇಕ ಲಾಭಗಳನ್ನು ನೀಡುತ್ತಾನೆ. ತಮ್ಮ ವ್ಯಾಪಾರವನ್ನು ಇನ್ನಷ್ಟು ಬೆಳೆಸುವುದು ಸಾಧ್ಯವಾಗುತ್ತದೆ.

ಇದನ್ನೂ ಓದಿ : Mars Transit: ಮಂಗಳನ ರಾಶಿ ಪರಿವರ್ತನೆ- 10 ದಿನಗಳ ನಂತರ ಈ ರಾಶಿಯವರಿಗೆ ಶುಭ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News