ಬೆಂಗಳೂರು : ಸಂತೋಷ, ಸಮೃದ್ದಿ ಅಭಿವೃದ್ದಿಯ ಪ್ರತೀಕವಾಗಿರುವ ಶುಕ್ರ ಸೆಪ್ಟೆಂಬರ್ 24 ರಂದು ತನ್ನ ರಾಶಿಯನ್ನು ಬದಲಾಯಿಸುತ್ತಿದ್ದಾನೆ. ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ ಅದರ ಪರಿಣಾಮ ಇತರ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಇನ್ನು ಹತ್ತು ದಿನಗಳಲ್ಲಿ ಶುಕ್ರ ತನ್ನ ರಾಶಿ ಬದಲಾಯಿಸಲಿದ್ದು, ಇದರ ಪರಿಣಾಮ ಇತರ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಅದರಲ್ಲೂ ಮಕರ ರಾಶಿಯ ಮೇಲೆ ಸ್ವಲ್ಪ ಹೆಚ್ಚೇ ಆಗಲಿದೆ. ರಾಕ್ಷಸ ಗುರು ಶುಕ್ರಾಚಾರ್ಯರನ್ನು ಪ್ರತಿನಿಧಿಸುವ ಶುಕ್ರ ಗ್ರಹವು ತನ್ನ ಶತ್ರು ಸೂರ್ಯನ ರಾಶಿಯಾದ ಸಿಂಹ ರಾಶಿಯನ್ನು ತೊರೆದು ತನ್ನ ಮಿತ್ರ ಬುಧ ರಾಶಿಯ ಕನ್ಯಾರಾಶಿಯನ್ನು ಪ್ರವೇಶಿಸಲಿದೆ. 


COMMERCIAL BREAK
SCROLL TO CONTINUE READING

ಮದುವೆಯಾಗಲು ಶುಭ ಸಮಯ : 
ಶುಕ್ರನ ಸಂಕ್ರಮಣದಿಂದ ಮಕರ ರಾಶಿಯ ಜನರ ಪ್ರೇಮ ಪ್ರಣಯ ಗಟ್ಟಿಯಾಗಲಿದೆ. ಇದು ಮದುವೆ ಬಂಧದವರೆಗೂ ಹೋಗಬಹುದು.  ವಿವಾಹವಾಗುವ ನಿರ್ಧಾರ ತೆಗೆದುಕೊಳ್ಳಲು ಈ ಸಮಯ ಹೆಚ್ಚು ಸೂಕ್ತವಾಗಿರಲಿದೆ. ಈ ಸಮಯದಲ್ಲಿ ಶುಕ್ರನು ತನ್ನ ಸ್ನೇಹಿತ ಬುಧ ಗ್ರಹದೊಂದಿಗೆ ಸೇರಿಕೊಂಡು ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳಲಿದೆ. ಇನ್ನೊಂದು ವಿಶೇಷವೆಂದರೆ ಈ ಸಮಯದಲ್ಲಿ ರಾಹು ಮತ್ತು ಕೇತು ಶುಕ್ರ ಮತ್ತು ಬುಧ ಸಂಯೋಗದ ಮೇಲೆ ಗೋಚರಿಸುವುದಿಲ್ಲ, ಇದರಿಂದಾಗಿ ಶುಭ ಫಲಿತಾಂಶಗಳು ಇನ್ನಷ್ಟು ಹೆಚ್ಚಾಗುತ್ತವೆ.


ಇದನ್ನೂ ಓದಿ : ಈ 5 ಅಭ್ಯಾಸಗಳು ನಿಮ್ಮ ಪಾಕೆಟ್ ಖಾಲಿ ಮಾಡುತ್ತವೆ, ತಕ್ಷಣ ಬದಲಿಸಿಕೊಳ್ಳಿ!


ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಗಳನ್ನು  ಪಡೆಯಬಹುದು : 
ಏತನ್ಮಧ್ಯೆ, ವೃತ್ತಿಜೀವನಕ್ಕೆ ಸಮಯವು ಅನುಕೂಲಕರವಾಗಿರುತ್ತದೆ. ನಿರುದ್ಯೋಗಿ ಯುವಕರು ಬಹು ರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಪಡೆಯಬಹುದು. ಮಾರ್ಕೆಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳು ತಮ್ಮ ಮಾತನಾಡುವ ಕೌಶಲ್ಯದಿಂದ ಉತ್ತಮ ಕೆಲಸವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ತಮ್ಮ ಜಾತಕದಲ್ಲಿ ಶನಿ ಸಾಡೇ ಸಾತಿ ಇರುವವರು ತಮ್ಮ ಉದ್ಯೋಗ ಅಥವಾ ವ್ಯವಹಾರದಲ್ಲಿ ಬದಲಾವಣೆ ಮಾಡದಿರುವುದು ಒಳ್ಳೆಯದು. 


 ಯಶಸ್ಸಿನ ಉತ್ತುಂಗಕ್ಕೆ ಏರಬಹುದು : 
ಉದ್ಯೋಗ, ವ್ಯಾಪಾರ, ಹಾಡುಗಾರಿಕೆ, ನೃತ್ಯ, ಚಿತ್ರಕಲೆ, ಐಟಿ, ಕಂಪ್ಯೂಟರ್ ಮತ್ತು ಮ್ಯಾನೇಜ್‌ಮೆಂಟ್ ಕ್ಷೇತ್ರದ ಜನರಿಗೆ ಭಾರೀ ಯಶಸ್ಸು ಸಿಗಲಿದೆ. ಈ ಜನರು ತಮ್ಮ ಕ್ಷೇತ್ರದಲ್ಲಿ ಅದ್ಬುತ ಯಶಸ್ಸನ್ನು ಸಾಧಿಸುತ್ತಾರೆ. ಆದರೆ ಇದಕ್ಕಾಗಿ ಅವರು ಕಷ್ಟಪಟ್ಟು ಕೆಲಸ  ಕೂಡಾ ಮಾಡಬೇಕಾಗುತ್ತದೆ. ಈ ರಾಶಿಯವರಿಗೆ ಗೌರವದೊಂದಿಗೆ ಹಣವೂ ಸಿಗುತ್ತದೆ. ಹಣಕಾಸಿನ  ನಿರ್ವಹಣೆಯಲ್ಲಿ ಯಶಸ್ಸು ಸಿಗಲಿದೆ. ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಎಲ್ಲಾ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು. 


ಇದನ್ನೂ ಓದಿ : Pitru Paksha: ಪಿತೃ ಪಕ್ಷದಲ್ಲಿ ಮಗುವಿನ ಜನನ ನೀಡುತ್ತೆ ಈ ಸೂಚನೆ.!


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.