ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ಚಿನ್ನ ಅಥವಾ ವಜ್ರದ ಉಂಗುರವನ್ನು ಧರಿಸಲು ಇಷ್ಟಪಡುತ್ತಾರೆ. ಪ್ರತಿಯೊಂದು ಲೋಹಕ್ಕೂ ಅದರದ್ದೇ ಆದ ಮಹತ್ವವಿದೆ. ಲೋಹಗಳ ಮಹತ್ವ, ಮತ್ತು ವಿಶೇಷತೆಯನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ವಜ್ರವನ್ನು ಎಲ್ಲರೂ ಧರಿಸುವಂತಿಲ್ಲ. ರಾಶಿಗನುಗುಣವಾಗಿ ವಜ್ರವನ್ನು ಕೆಲವು ರಾಶಿಯಾರು ಮಾತ್ರ ಧರಿಸಬೇಕು. ಅದೇ ರೀತಿ ಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಅದು ಅವರಿಗೆ ಹೆಚ್ಚು ಅದೃಷ್ಟವನ್ನು ತರುತ್ತದೆ. ಪ್ರತಿಯೊಂದು ಲೋಹವು ವ್ಯಕ್ತಿಯ ಜೀವನದಲ್ಲಿ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ಧರಿಸುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಮಕ್ಕಳ ಸಂತೋಷದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಧನಲಾಭ ಮತ್ತು ವೃತ್ತಿ ಪ್ರಗತಿಯನ್ನು ಕೂಡಾ ಸಾಧಿಸಬಹುದು ಎಂದು ಹೇಳಲಾಗುತ್ತದೆ.
ಈ ರಾಶಿಯವರ ಅದೃಷ್ಟ ಹೆಚ್ಚಿಸುತ್ತದೆ ಚಿನ್ನದ ಉಂಗುರ :
ಸಿಂಹ ರಾಶಿ : ಸಿಂಹ ರಾಶಿಯವರಿಗೆ ಚಿನ್ನದ ಉಂಗುರ ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸಿಂಹ ರಾಶಿಯು ಬೆಂಕಿಯ ಅಂಶದ ಸಂಕೇತವಾಗಿದೆ. ಈ ರಾಶಿಯ ಅಧಿಪತಿ ಸೂರ್ಯ. ಆದ್ದರಿಂದ, ಸಿಂಹ ರಾಶಿಯ ಜನರು ಚಿನ್ನದ ಉಂಗುರವನ್ನು ಧರಿಸುವುದು ಮಂಗಳಕರ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ಮಹಾಪುರುಷ ರಾಜಯೋಗ ರೂಪಿಸುತ್ತಿರುವ ಶನಿದೇವ , ಮೂರು ರಾಶಿಯವರಿಗೆ ಕರುಣಿಸಲಿದ್ದಾನೆ ಭಾರೀ ಅದೃಷ್ಟ
ಕನ್ಯಾ ರಾಶಿ : ಈ ರಾಶಿಯ ಜನರು ಸುಖ ಸಮೃದ್ದಿಯ ಜೀವನವನ್ನು ಇಷ್ಟ ಪಡಿಸುತ್ತಾರೆ. ಕನ್ಯಾ ರಾಶಿಯ ಜನರು ಚಿನ್ನದ ಉಂಗುರ, ಚೈನ್ ಹೀಗೆ ಚಿನ್ನದಿಂದ ಮಾಡಿದ ಯಾವುದಾದರೂ ಆಭರಣವನ್ನು ಧರಿಸಿದರೆ ಅದು ಅವರಿಗೆ ಶುಭ.
ತುಲಾ ರಾಶಿ : ತುಲಾ ರಾಶಿಯ ಜನರಿಗೂ ಚಿನ್ನವನ್ನು ಮಂಗಳಕರವೆಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನದ ಉಂಗುರವು ತುಲಾ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ. ಈ ರಾಶಿಯ ಅಧಿಪತಿ ಶುಕ್ರ ದೇವ. ಚಿನ್ನ ಶುಕ್ರನಿಗೆ ಲಾಭದಾಯಕ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : Astrology: ಜನ್ಮ ಜಾತಕದಲ್ಲಿ ಈ ಯೋಗ ಇರುವವರ ಭಾಗ್ಯ ಬಂಬಾಟಾಗಿರುತ್ತದೆ, ಪಂಚ ಮಹಾಪುರುಷ ಯೋಗಗಳಲ್ಲಿ ಇದೂ ಒಂದು
ಮೀನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನವನ್ನು ಧರಿಸುವುದು ಮೀನ ರಾಶಿಯವರಿಗೆ ಅತ್ಯಂತ ಶುಭ. ಚಿನ್ನವನ್ನು ಧರಿಸುವುದು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.
( ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.