ನವದೆಹಲಿ: ಹೂಕೋಸು(Cauliflower) ತರಕಾರಿಯಿಂದ ಮಾಡುವ ಪರಾಠಾ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. ಆದರೆ ಕೆಲವು ಕಾಯಿಲೆಗಳಿರುವ ವ್ಯಕ್ತಿಗಳು ಇದನ್ನು ಸೇವಿಸಬಾರದು. ಹೀಗಾಗಿ ನೀವು ಹೂಕೋಸಿನ ಸೈಡ್ ಎಫೆಕ್ಟ್‌(Cauliflower Side Effects)ಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಇದು ನಿಮಗೆ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅತಿಯಾದರೆ ಅಮೃತವು ವಿಷವೆಂಬಂತೆ ಹಿತಮಿತವಾಗಿ ಹೂಕೋಸು ಸೇವಿಸುವುದು ಉತ್ತಮ.  


COMMERCIAL BREAK
SCROLL TO CONTINUE READING

ಹೂಕೋಸು ಕ್ಯಾಲ್ಸಿಯಂ, ರಂಜಕ, ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಇದರ ಜೊತೆಗೆ ಇದು ವಿಟಮಿನ್ ಎ, ಬಿ, ಸಿ ಮತ್ತು ಪೊಟ್ಯಾಸಿಯಮ್ ಅನ್ನು ಸಹ ಒಳಗೊಂಡಿದೆ. ಇದನ್ನು ತಿನ್ನುವುದು ನಿಮಗೆ ಪ್ರಯೋಜನಕಾರಿ. ಆದರೆ ನಿಮಗೆ ಥೈರಾಯ್ಡ್ ಅಥವಾ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಹೂಕೋಸು ಸೇವಿಸುವುದನ್ನು ಆದಷ್ಟು ತಪ್ಪಿಸಬೇಕು(Food Side Effects).


ಇದನ್ನೂ ಓದಿ: Raisin Water : ಈ ಸಮಯದಲ್ಲಿ ಒಣದ್ರಾಕ್ಷಿ ನೆನಸಿದ ನೀರು ಸೇವಿಸಿ : ಇದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು


ಜೀರ್ಣಕ್ರಿಯೆಯೊಂದಿಗೆ ಸಮಸ್ಯೆಗಳು


ನಿಮಗೆ ಗ್ಯಾಸ್ ಸಮಸ್ಯೆ ಇದ್ದರೂ ಹೂಕೋಸು ಸೇವಿಸಬೇಡಿ. ಈ ತರಕಾರಿ ರಾಫಿನೋಸ್ ಅನ್ನು ಹೊಂದಿರುತ್ತದೆ, ಇದು ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದೆ. ಇದು ನೈಸರ್ಗಿಕವಾಗಿ ಕೆಲವು ತರಕಾರಿಗಳಲ್ಲಿ ಇರುತ್ತದೆ, ಆದರೆ ನಮ್ಮ ದೇಹವು ಅದನ್ನು ಸರಿಯಾಗಿ ಜೀರ್ಣಿಸಲು ಸಾಧ್ಯವಿಲ್ಲ. ಇದರಿಂದ ಅಸಿಡಿಟಿ ಸಮಸ್ಯೆ ಹೆಚ್ಚಾಗಬಹುದು. ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಹೂಕೋಸು ಸೇವಿಸಬೇಡಿ.


ಹೂಕೋಸು ಆಂಟಿಆಕ್ಸಿಡೆಂಟ್‌ಗಳು, ಫೈಟೊನ್ಯೂಟ್ರಿಯೆಂಟ್‌ಗಳು, ಫೋಲೇಟ್, ವಿಟಮಿನ್ ಕೆ ಮತ್ತು ಫೈಬರ್‌ನಂತಹ ಪೋಷಕಾಂಶಗಳನ್ನು ಹೊಂದಿದೆ. ಇದರ ಜೊತೆಗೆ ಸಲ್ಫರ್-ಒಳಗೊಂಡಿರುವ ರಾಸಾಯನಿಕಗಳಾದ ಗ್ಲುಕೋಸಿನೋಲೇಟ್‌ಗಳನ್ನು ಹೊಂದಿರುತ್ತದೆ. ಈ ರಾಸಾಯನಿಕಗಳು ಹೊಟ್ಟೆಯಲ್ಲಿ ಸೇರಿದಾಗ ಅವು ಹೈಡ್ರೋಜನ್ ಸಲ್ಫೈಡ್ ಸಂಯುಕ್ತವನ್ನು ರೂಪಿಸುತ್ತವೆ. ಇದರಿಂದ ಗ್ಯಾಸ್ ಸಮಸ್ಯೆ(Digestive Problem) ಉಂಟಾಗುತ್ತದೆ.


ಇದನ್ನೂ ಓದಿ: Weight Loss : ನಿಮ್ಮ ದೇಹದ ಬೊಜ್ಜು ಕರಗಿಸಬೇಕಾ? ಹಾಗಿದ್ರೆ, ಪ್ರತಿ ದಿನ ರಾತ್ರಿ ಈ ಜ್ಯೂಸ್ ಸೇವಿಸಿ


ಥೈರಾಯ್ಡ್ ರೋಗಿಗಳು ಸೇವಿಸಬೇಡಿ


ನಿಮಗೆ ಥೈರಾಯ್ಡ್ ಸಮಸ್ಯೆ(Thyroid Problem) ಇದ್ದರೆ ಹೂಕೋಸು ಸೇವಿಸಬೇಡಿ. ಇದು T3 ಮತ್ತು T4 ಹಾರ್ಮೋನುಗಳನ್ನು ಹೆಚ್ಚಿಸಬಹುದು.


ಮೂತ್ರಪಿಂಡದ ಸಮಸ್ಯೆ ಇದ್ದವರು ಸೇವಿಸಬೇಡಿ


ಪಿತ್ತಕೋಶ ಅಥವಾ ಮೂತ್ರಪಿಂಡದ ಕಲ್ಲಿನ ಸಮಸ್ಯೆ(Kidney Stone) ಇದ್ದವರು ಹೂಕೋಸು ಸೇವಿಸಿದರೆ ಹಾನಿಯನ್ನುಂಟು ಮಾಡುತ್ತದೆ. ಏಕೆಂದರೆ ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣವು ಅಧಿಕವಾಗಿರುತ್ತದೆ. ಯೂರಿಕ್ ಆಮ್ಲ ಹೆಚ್ಚಾದರೂ ಹೂಕೋಸು ಸೇವಿಸಬೇಡಿ. ಇದನ್ನು ತಿನ್ನುವುದರಿಂದ ನಿಮ್ಮ ಸಮಸ್ಯೆ ಹೆಚ್ಚಾಗುತ್ತದೆ.


ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ


ಹೂಕೋಸುಗಳಲ್ಲಿ ಪೊಟ್ಯಾಸಿಯಮ್ ಪ್ರಮಾಣ ಹೆಚ್ಚಾಗಿರುತ್ತದೆ. ಇದನ್ನು ಹೆಚ್ಚು ಸೇವಿಸುವ ಜನರ ರಕ್ತವು ಕ್ರಮೇಣ ದಪ್ಪವಾಗಲು ಪ್ರಾರಂಭಿಸುತ್ತದೆ. ನೀವು ಈಗಾಗಲೇ ರಕ್ತವನ್ನು ದಪ್ಪವಾಗಿಸುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ವೈದ್ಯರ ಸಲಹೆಯ ನಂತರವೇ ಹೂಕೋಸು ಸೇವಿಸಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.