Weight Loss : ನಿಮ್ಮ ದೇಹದ ಬೊಜ್ಜು ಕರಗಿಸಬೇಕಾ? ಹಾಗಿದ್ರೆ, ಪ್ರತಿ ದಿನ ರಾತ್ರಿ ಈ ಜ್ಯೂಸ್ ಸೇವಿಸಿ

ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ ಹೊಟ್ಟೆಯ ಕೊಬ್ಬನ್ನೂ ಕರಗಿಸುವ ಇಂತಹ ಜ್ಯೂಸ್ ಬಗ್ಗೆ ನಾವು ನಿಮಗಾಗಿ ಮಾಹಿತಿ ತಂದಿದ್ದೇವೆ. ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯುವುದರಿಂದ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ಕಾಣಬಹುದು.

Written by - Channabasava A Kashinakunti | Last Updated : Nov 29, 2021, 08:51 PM IST
  • ನಿಮ್ಮ ದೇಹದ ಕೊಬ್ಬು ಕಡಿಮೆ ಮಾಡುವ ಜ್ಯೂಸ್ ನಿಮಗಾಗಿ
  • ಪ್ರತಿದಿನ ರಾತ್ರಿ ಈ ಜ್ಯೂಸ್ ಸೇವಿಸಿದರೆ ನಿಮ್ಮ ಬೊಜ್ಜು ಕಡಿಮೆಯಾಗುತ್ತದೆ
  • ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ
Weight Loss : ನಿಮ್ಮ ದೇಹದ ಬೊಜ್ಜು ಕರಗಿಸಬೇಕಾ? ಹಾಗಿದ್ರೆ, ಪ್ರತಿ ದಿನ ರಾತ್ರಿ ಈ ಜ್ಯೂಸ್ ಸೇವಿಸಿ title=

ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ಸುದ್ದಿ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ ಹೊಟ್ಟೆಯ ಕೊಬ್ಬನ್ನೂ ಕರಗಿಸುವ ಇಂತಹ ಜ್ಯೂಸ್ ಬಗ್ಗೆ ನಾವು ನಿಮಗಾಗಿ ಮಾಹಿತಿ ತಂದಿದ್ದೇವೆ. ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯುವುದರಿಂದ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ಕಾಣಬಹುದು. ಈ ಜ್ಯೂಸ್ ಮಾಡಲು ವಿಶೇಷವಾದದ್ದೇನೂ ಬೇಕಾಗಿಲ್ಲ. ಈ ಎಲ್ಲಾ ವಸ್ತುಗಳು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುತ್ತವೆ. ಈ ಸ್ಪೆಷಲ್ ಜ್ಯೂಸ್ ಮಾಡುವುದು ಹೇಗೆ? ಎಂಬುದು ಇಲ್ಲಿದೆ ನೋಡಿ..

ಬೇಕಾದ ಸಾಮಗ್ರಿಗಳು 

1. 1 ನಿಂಬೆ ಹೋಳು
2. 1 ಗ್ಲಾಸ್ ನೀರು
3. 1 ಸೌತೆಕಾಯಿ
4. 1 ಟೀ ಚಮಚ ತುರಿದ ಶುಂಠಿ
5.1 ಟೀ ಸ್ಪೂನ್ ಅಲೋವೆರಾ ರಸ
6. ಕೊತ್ತಂಬರಿ ಸೊಪ್ಪು

ಈ ರೀತಿ ಜ್ಯೂಸ್ ಮಾಡಿ

- ಮೊದಲನೆಯದಾಗಿ, ಈ ಪದಾರ್ಥಗಳನ್ನ ತೆಗೆದುಕೊಂಡು ಅವುಗಳನ್ನು ಗ್ರೈಂಡರ್ನಲ್ಲಿ ಹಾಕಿ.
- ಸುಮಾರು 10 ನಿಮಿಷಗಳ ಕಾಲ ಅವುಗಳನ್ನು ಗ್ರೈಂಡರ್ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಇದನ್ನು ಒಂದು ಲೋಟದಲ್ಲಿ ತೆಗೆದುಕೊಂಡು ರಾತ್ರಿ ಮಲಗುವ ಮೊದಲು(Before Sleeping) ಕುಡಿಯಿರಿ.
- ಇಂತಹ ಅಂಶಗಳು ಇದರಲ್ಲಿ ಕಂಡುಬರುತ್ತವೆ, ಇದು ರಾತ್ರಿಯಲ್ಲಿ ಸೇವಿಸುವುದರಿಂದ ನಿಮ್ಮ ದೇಹದಿಂದ ಕೊಬ್ಬನ್ನು ಕಡಿಮೆ ಮಾಡುತ್ತದೆ, ಇದು ನಿಮ್ಮ ಸ್ಥೂಲಕಾಯತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : Raisin Water : ಈ ಸಮಯದಲ್ಲಿ ಒಣದ್ರಾಕ್ಷಿ ನೆನಸಿದ ನೀರು ಸೇವಿಸಿ : ಇದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು

ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ

ಪ್ರತಿದಿನ ರಾತ್ರಿ ಈ ಜ್ಯೂಸ್(Juice) ಕುಡಿಯುವುದರಿಂದ ನಿಮ್ಮ ಬೊಜ್ಜು ಕಡಿಮೆಯಾಗುತ್ತದೆ. ಈ ರಸವು ನಿಮ್ಮ ದೇಹದ ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ನೀವು ನಿದ್ರೆಯಲ್ಲಿರುವಾಗ, ನಿಮ್ಮ ಚಯಾಪಚಯ ಕ್ರಿಯೆಯು ಸಕ್ರಿಯವಾಗಿರುತ್ತದೆ ಮತ್ತು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರಲ್ಲೂ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಇದು ತುಂಬಾ ಉಪಯುಕ್ತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News