Chaitra Navratri 2023: 110 ವರ್ಷಗಳ ಬಳಿಕ ಅದ್ಭುತ ಕಾಕತಾಳೀಯ ನಿರ್ಮಾಣ, ತಾಯಿ ದುರ್ಗೆಯ ಕೃಪೆಯಿಂದ ಅಪಾರ ಸುಖ-ಸಮೃದ್ಧಿ!
Chaitra Navratri Shubh Muhurat 2023: ಈ ವರ್ಷ, ಚೈತ್ರ ನವರಾತ್ರಿಯಂದು ಅಪರೂಪದ ಕಾಕತಾಳೀಯ ಸಂಭವಿಸುತ್ತಿದೆ, ಈ ಪರ್ವ ತಾಯಿ ದುರ್ಗೆಯ ಆಶೀರ್ವಾದ ಪಡೆಯಲು ತುಂಬಾ ವಿಶೇಷವಾಗಿದೆ. 110 ವರ್ಷಗಳ ನಂತರ ಚೈತ್ರ ನವರಾತ್ರಿಯಂದು ಇಂತಹ ಕಾಕತಾಳೀಯ ಸಂಭವಿಸುತ್ತಿದೆ.
Chaitra Navratri Shubha Yog: ಹಿಂದೂ ಪಂಚಾಂಗದ ಪ್ರಕಾರ, ನವರಾತ್ರಿಯು ವರ್ಷದಲ್ಲಿ 4 ಬಾರಿ ಬರುತ್ತಿದೆ. ಇದರಲ್ಲಿ ಚೈತ್ರದ ನವರಾತ್ರಿಯೇ ಮೊದಲ ನವರಾತ್ರಿ. ಚೈತ್ರ ನವರಾತ್ರಿಯ ಮೊದಲ ದಿನದಿಂದ ಹಿಂದೂ ಹೊಸ ವರ್ಷ ಯುಗಾದಿ ಆರಂಭವಾಗುತ್ತದೆ. . ಈ ವರ್ಷ ಚೈತ್ರ ನವರಾತ್ರಿಯು ಮಾರ್ಚ್ 22, ಬುಧವಾರದಿಂದ ಪ್ರಾರಂಭವಾಗುತ್ತಿದ್ದು, ಇದು ಮಾರ್ಚ್ 30, ಗುರುವಾರದವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ, ಅತ್ಯಂತ ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ, 110 ವರ್ಷಗಳ ನಂತರ ಇಂತಹ ಮಂಗಳಕರ ಯೋಗಗಳ ಅಪರೂಪದ ಸಂಯೋಜನೆಯನ್ನು ನಿರ್ಮಿಸುತ್ತಿದೆ. ಈ ಅಪರೂಪದ ಕಾಕತಾಳೀಯದಿಂದಾಗಿ, ತಾಯಿ ಶಕ್ತಿಯ ಆರಾಧನೆಯ ಈ ಹಬ್ಬವು ಇನ್ನಷ್ಟು ವಿಶೇಷವಾಗಿದೆ.
ನೌಕೆಯಲ್ಲಿ ದೇವಿ ದುರ್ಗೆಯ ಆಗಮನ
ಈ ಬಾರಿಯ ಚೈತ್ರ ನವರಾತ್ರಿಯಲ್ಲಿ ದೇವಿ ದುರ್ಗೆ ನೌಕೆಯಲ್ಲಿ ಆಗಮಿಸುತ್ತಿದ್ದಾಳೆ. ಇದನ್ನು ಸಂತೋಷ-ಸಮೃದ್ಧಿ ಅಂಶ ಎಂದು ಕರೆಯಲಾಗುತ್ತದೆ. ನೌಕೆಯಲ್ಲಿನ ದೇವಿ ದುರ್ಗೆಯ ಆಗಮನವು ಸಂತೋಷವನ್ನು ತರುತ್ತದೆ ಮತ್ತು ಇಷ್ಟಾರ್ಥಗಳನ್ನು ನೆರವೇರಿಸುತ್ತದೆ. ಇದಲ್ಲದೇ 110 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ನವರಾತ್ರಿಯಂದು ಗ್ರಹಗಳ ಮತ್ತು ರಾಶಿಗಳ ಸ್ಥಾನಮಾನ ತುಂಬಾ ವಿಶೇಷವಾಗಿರಲಿದೆ. ನವರಾತ್ರಿಯ ಸಮಯದಲ್ಲಿ ಶನಿ ಮತ್ತು ಗುರುಗಳು ತಮ್ಮದೇ ಆದ ರಾಶಿಗಳಲ್ಲಿ ಇರುತ್ತಾರೆ. ಕುಂಭ ರಾಶಿಯಲ್ಲಿ ಶನಿ ಮತ್ತು ಮೀನ ರಾಶಿಯಲ್ಲಿ ಗುರು ಇರುತ್ತಾನೆ. ಇದಲ್ಲದೇ 4 ಪ್ರಮುಖ ಗ್ರಹ ಸಂಕ್ರಮಣಗಳೂ ನಡೆಯುತ್ತಿವೆ. ಇದಲ್ಲದೆ, ಈ ವರ್ಷ ನವರಾತ್ರಿಯು 9 ದಿನಗಳದ್ದಾಗಿದೆ. ಅಂದರೆ ನವರಾತ್ರಿಯ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲಿ. ನವರಾತ್ರಿಯ ಪೂರ್ಣ 9 ದಿನಗಳನ್ನು ಹೊಂದಿರುವುದು ಕೂಡ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಹಿಂದೂ ಪಂಚಾಂಗದ ಪ್ರಕಾರ, ಚೈತ್ರ ಪ್ರತಿಪದ ತಿಥಿಯು ಮಾರ್ಚ್ 21 ರ ರಾತ್ರಿ 11:04 ಕ್ಕೆ ಪ್ರಾರಂಭವಾಗುತ್ತದೆ. ಹೀಗಾಗಿ ನವರಾತ್ರಿಯು ಮಾರ್ಚ್ 22 ರಂದು ಸೂರ್ಯೋದಯದೊಂದಿಗೆ ಘಟಸ್ಥಾಪನೆಯಿಂದಿಗೆ ನವರಾತ್ರಿ ಪ್ರಾರಂಭವಾಗಲಿದೆ.
ಇದನ್ನೂ ಓದಿ-ತನ್ನ ನೀಚ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಭ್ರಮಣೆ ಆರಂಭ, 5 ರಾಶಿಗಳ ಜನರಿಗೆ ಅಪಾರ ಯಶಸ್ಸು-ಧನ ಪ್ರಾಪ್ತಿಯ ಯೋಗ!
ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ
1- ನವರಾತ್ರಿಯ ಮೊದಲ ದಿನ 22 ಮಾರ್ಚ್ 2023 ದಿನ ಬುಧವಾರ: ತಾಯಿ ಶೈಲಪುತ್ರಿ ಪೂಜೆ (ಘಟಸ್ಥಾಪನೆ)
2- ನವರಾತ್ರಿ ಎರಡನೇ ದಿನ 23 ಮಾರ್ಚ್ 2023 ದಿನ ಗುರುವಾರ: ತಾಯಿ ಬ್ರಹ್ಮಚಾರಿಣಿ ಪೂಜೆ
3- ನವರಾತ್ರಿ ಮೂರನೇ ದಿನ 24 ಮಾರ್ಚ್ 2023 ದಿನ ಶುಕ್ರವಾರ: ತಾಯಿ ಚಂದ್ರಘಂಟ ಪೂಜೆ
4- ನವರಾತ್ರಿ ನಾಲ್ಕನೇ ದಿನ 25 ಮಾರ್ಚ್ 2023 ದಿನ ಶನಿವಾರ: ತಾಯಿ ಕೂಷ್ಮಾಂಡ ಪೂಜೆ
ಇದನ್ನೂ ಓದಿ-ಶತ್ರುವಿನ ರಾಶಿಯಲ್ಲಿ ಗ್ರಹಗಳ ಸೇನಾಪತಿಯ ವಾಸ, ಧನಹಾನಿಯ ಯೋಗ, ಈ ಜನರು ಎಚ್ಚರದಿಂದಿರಬೇಕು!
5- ನವರಾತ್ರಿ ಐದನೇ ದಿನ 26 ಮಾರ್ಚ್ 2023 ದಿನ ಭಾನುವಾರ: ತಾಯಿ ಸ್ಕಂದಮಾತಾ ಪೂಜೆ
6- ನವರಾತ್ರಿ ಆರನೇ ದಿನ 27 ಮಾರ್ಚ್ 2023 ದಿನ ಸೋಮವಾರ: ತಾಯಿ ಕಾತ್ಯಾಯನಿ ಪೂಜೆ
7- ನವರಾತ್ರಿ ಏಳನೇ ದಿನ 28 ಮಾರ್ಚ್ 2023 ದಿನ ಮಂಗಳವಾರ: ತಾಯಿ ಕಾಳರಾತ್ರಿ ಪೂಜೆ
8- ನವರಾತ್ರಿ ಎಂಟನೇ ದಿನ 29 ಮಾರ್ಚ್ 2023 ದಿನ ಬುಧವಾರ: ತಾಯಿ ಮಹಾಗೌರಿ ಪೂಜೆ
9- ನವರಾತ್ರಿ 9 ನೇ ದಿನ 30 ಮಾರ್ಚ್ 2023 ದಿನ ಗುರುವಾರ: ತಾಯಿ ಸಿದ್ಧಿದಾತ್ರಿ ಪೂಜೆ
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.