ನವದೆಹಲಿ : ಆಚಾರ್ಯ ಚಾಣಕ್ಯನ ತಂತ್ರ ಜಗತ್ಪ್ರಸಿದ್ಧವಾದುದು. ಅವರ ನೀತಿಗಳ ಬಲದ ಮೇಲೆ, ಅವರು ಚಂದ್ರಗುಪ್ತನನ್ನು ಚಕ್ರವರ್ತಿಯಾಗಿ ಮಾಡಿದರು. ಸಾಮಾನ್ಯವಾಗಿ, ಚಾಣಕ್ಯ ನೀತಿಯ ಮಾತುಗಳು ಜನರಿಗೆ ಕಹಿಯಾಗಿ ತೋರುತ್ತದೆ (Chanakya Niti). ಆದರೆ ಇದು ಜೀವನದ ನಿಜವಾದ ಸತ್ಯವನ್ನು ತೋರಿಸುತ್ತದೆ. ದಾಂಪತ್ಯ ಜೀವನ ಸದಾ ಸುಖಮಯವಾಗಿರಬೇಕಾದರೆ ಕೆಲವೊಂದು ಗುಣಗಳನ್ನು ತಕ್ಷಣ ಕೈ ಬಿಡುವಂತೆ ಚಾಣಾಕ್ಯ ನೀತಿಯಲ್ಲಿ ಹೇಳಲಾಗಿದೆ (Chanakya niti for good relation).  


COMMERCIAL BREAK
SCROLL TO CONTINUE READING

ಕೋಪವು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ:
ಚಾಣಕ್ಯ ನೀತಿಯ ಪ್ರಕಾರ (Chanakya Niti), ಸಂತೋಷದ ವೈವಾಹಿಕ ಜೀವನವನ್ನು ಹಾಳುಮಾಡಲು ಕೋಪ ಒಂದು ಸಾಕು. ಕೋಪವು ಗಂಡ ಮತ್ತು ಹೆಂಡತಿಯ ಪವಿತ್ರ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೋಪದಲ್ಲಿ, ವ್ಯಕ್ತಿಯು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ಮರೆತುಬಿಡುತ್ತಾನೆ. ಕೋಪದಲ್ಲಿ, ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಾನೆ. ಹೀಗಿರುವಾಗ ವ್ಯಕ್ತಿಯು ಯಾವಾಗಲೂ ತನ್ನ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು (Chanakya niti for good relation). 


ಇದನ್ನೂ ಓದಿ : ಈ ಕೆಲಸ ಮಾಡಿದರೆ ತಕ್ಷಣವೇ ಪ್ರಾಪ್ತಿಯಾಗುತ್ತದೆ ಸಿರಿತನ


ಸಂಬಂಧದಲ್ಲಿ ನಂಬಿಕೆ :
ಚಾಣಕ್ಯನ ಪ್ರಕಾರ ಯಾವುದೇ ಸಂಬಂಧದಲ್ಲಿ ಮೋಸ ಇರಬಾರದು. ವೈವಾಹಿಕ ಜೀವನದಲ್ಲಿ, ಮೋಸಕ್ಕೆ ಜಾಗ ಇರಬಾರದು. ಸಂಬಂಧವೂ ನಂಬಿಕೆಯ ಮೇಲೆ ನಿಂತಿರುತ್ತದೆ (Chanakya Niti about relation). ಸಂಬಂಧದಲ್ಲಿ ಒಂದು ಸಣ್ಣ ಬಿರುಕು ಮೂಡಿದರೂ,  ಮದುವೆಯಂತಹ ಪವಿತ್ರ ಸಂಬಂಧವೂ ಶಾಶ್ವತವಾಗಿ ಕೊನೆಗೊಳ್ಳುತ್ತದೆ. ಆದ್ದರಿಂದ ನಿಮ್ಮ ಸಂಬಂಧದಲ್ಲಿ ಯಾವಾಗಲೂ ಪ್ರಾಮಾಣಿಕವಾಗಿರಿ. 


ಮುಕ್ತವಾಗಿ ಮಾತನಾಡಿ :
ವೈವಾಹಿಕ ಜೀವನದಲ್ಲಿ ಗಂಡ-ಹೆಂಡತಿ ಸುಖ ದುಃಖವನ್ನು ಪರಸ್ಪರ ಹಂಚಿಕೊಳ್ಳಬೇಕು. ಏಕೆಂದರೆ ಸಂಬಂಧದಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲು ತಮ್ಮ ನಡುವಿನ ಸಂವಹನವು ಬಹಳ ಮುಖ್ಯವಾಗಿದೆ. ಏನಾದರೂ ಕೆಟ್ಟದಾಗಿದ್ದರೆ, ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಅದನ್ನು ಸ್ಪಷ್ಟಪಡಿಸಬೇಕು. ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿ ಪರಸ್ಪರ ಸಂವಹನ ನಡೆಸದಿದ್ದರೆ, ಜೀವನದಲ್ಲಿ ಅಪಶ್ರುತಿ ಉಂಟಾಗುತ್ತದೆ ಮತ್ತು ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. 


ಇದನ್ನೂ ಓದಿ :  Holi 2022: ಹೋಳಿ ಹಬ್ಬದಂದು ಲಕ್ಷ್ಮಿ ಹಾಗೂ ಆಂಜನೇಯನಿಗೆ ಸಂಬಂಧಿಸಿದ ಈ ಉಪಾಯಗಳನ್ನು ಮಾಡಿ, ಜೀವನವೇ ಬದಲಾಗಲಿದೆ


ಸಂಬಂಧದಲ್ಲಿ ಗೌರವ ಇರಬೇಕು :
ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ಪವಿತ್ರ ಸಂಬಂಧವನ್ನು ಕಾಪಾಡಿಕೊಳ್ಳಲು, ಗಂಡ ಮತ್ತು ಹೆಂಡತಿ ಪರಸ್ಪರ ಗೌರವವನ್ನು ಹೊಂದಿರಬೇಕು. ಸಂಬಂಧದಲ್ಲಿ ಗೌರವ ಇಲ್ಲದಿದ್ದರೆ ದಾಂಪತ್ಯ ಜೀವನವು ನರಕಕ್ಕಿಂತ ಕೆಟ್ಟದಾಗಿರುತ್ತದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.