ಬಡತನ ವಕ್ಕರಿಸುವ ಮೊದಲು ಸಿಗುತ್ತವೆ ಈ ಸಂಕೇತಗಳು, ಎಚ್ಚೆತ್ತುಕೊಳ್ಳದಿದ್ದರೆ ಎದುರಿಸಬೇಕಾಗುತ್ತದೆ ನಷ್ಟ

ಒಳ್ಳೆಯ ಅಥವಾ ಕೆಟ್ಟ ಘಟನೆಗಳು ಸಂಭವಿಸುವ ಮೊದಲು ಅದರ ಕೆಲವು ಚಿಹ್ನೆಗಳು ಸಿಗುತ್ತವೆ. ನಾವು ಅವುಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಎದುರಾಗುತ್ತದೆ.   ಚಾಣಕ್ಯ ನೀತಿ ಹೇಳುವಂತೆ ಕೆಲವೊಂದು ಲಕ್ಷಣಗಳು ಕಂಡು ಬಂದರೆ ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ದೊಡ್ಡ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.   

Written by - Zee Kannada News Desk | Last Updated : Mar 14, 2022, 10:15 AM IST
  • ಈ ಸಂಕೇತಗಳು ಸಿಕ್ಕಿದರೆ ಎಚ್ಚೆತ್ತುಕೊಳ್ಳಿ
  • ಬಡತನ ವಕ್ಕರಿಸುವ ಸಂಕೇತಗಳಾಗಿರಬಹುದು
  • ಈ ಸಂಕೇತಗಳ ಬಗ್ಗೆ ಎಚ್ಚರದಿಂದ ಇರಿ
ಬಡತನ ವಕ್ಕರಿಸುವ ಮೊದಲು ಸಿಗುತ್ತವೆ ಈ ಸಂಕೇತಗಳು, ಎಚ್ಚೆತ್ತುಕೊಳ್ಳದಿದ್ದರೆ ಎದುರಿಸಬೇಕಾಗುತ್ತದೆ ನಷ್ಟ  title=
ಈ ಸಂಕೇತಗಳು ಸಿಕ್ಕಿದರೆ ಎಚ್ಚೆತ್ತುಕೊಳ್ಳಿ (file photo)

ಬೆಂಗಳೂರು : ಆಚಾರ್ಯ ಚಾಣಕ್ಯ ಅವರು ಶ್ರೇಷ್ಠ ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕರಾಗಿರುವುದರ ಜೊತೆಗೆ ಉತ್ತಮ ರಣನೀತಿಕಾರ  ಮತ್ತು ಸಮಾಜಶಾಸ್ತ್ರಜ್ಞರೂ ಆಗಿದ್ದರು (Chanakya Niti). ಜೀವನದಲ್ಲಿನ ಎಲ್ಲಾ ತೊಂದರೆಗಳಿಂದ ಪರಿಹಾರ ಕಂಡುಕೊಳ್ಳುವ ಮಾರ್ಗಗಳನ್ನು ಸೂಚಿಸಿದ್ದರು. ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಒಬ್ಬ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಮಾತ್ರವಲ್ಲ ತೃಪ್ತಿದಾಯಕ ಮತ್ತು ಯಶಸ್ವಿ ಜೀವನವನ್ನು ನಡೆಸಬಹುದು. ಚಾಣಕ್ಯ ನೀತಿ ಪ್ರಕಾರ, ಆರ್ಥಿಕ ಬಿಕ್ಕಟ್ಟು ಬರುವ ಮೊದಲು ಕೆಲವು ಲಕ್ಷಣಗಳು ಗೋಚರಿಸುತ್ತವೆಯಂತೆ (Chanakya Niti for Success). ಅಂತಹ ಚಿಹ್ನೆಗಳು ಕಂಡುಬಂದರೆ, ವ್ಯಕ್ತಿಯು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ, ಮುಂದೆ ಸಂಭವಿಸಬಹುದಾದ ನಷ್ಟಕ್ಕೆ ಸಿದ್ದರಿರಬೇಕು. 

ಬಡತನದ ಚಿಹ್ನೆಗಳು :
ಮನೆಯಲ್ಲಿ ಪ್ರತಿದಿನ ಜಗಳಗಳು ನಡೆಯಲು ಪ್ರಾರಂಭಿಸಿದರೆ, ಇದರ ಬಗ್ಗೆ ಗಮನ ಹರಿಸಬೇಕು (Chanakya Niti for Success). ಮನೆಯ ಸದಸ್ಯರು ಕುಳಿತು ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ನಿರಂತರ ಜಗಳಗಳು ಮನೆಯ ಸದಸ್ಯರ ಆರ್ಥಿಕ ಪ್ರಗತಿಯನ್ನು ತಡೆಯುತ್ತದೆ ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ (Chanakya Niti for money). 

ಇದನ್ನೂ ಓದಿ : Lakshmana Plant: ದೇವಿ ಲಕ್ಷ್ಮಿಗೆ ಈ ಸಸ್ಯ ತುಂಬಾ ಇಷ್ಟ, ನಿಮ್ಮ ಮನೆಯಲ್ಲಿಯೂ ಇದ್ದರೆ ಹಣದ ಹೊಳೆಯೇ ಹರಿಯಲಿದೆ

ಯಾವ ಮನೆಯಲ್ಲಿ ಪೂಜಾ ಕಾರ್ಯಗಳನ್ನು ನಡೆಸುವುದಿಲ್ಲವೋ, ದೇವರ ಧ್ಯಾನ ಮಾಡುವುದಿಲ್ಲವೋ ಆ ಮನೆಯವರ ಮೇಲೆ ಮಹಾ ಲಕ್ಷ್ಮೀ  (Godess Lakshmi) ಎಂದಿಗೂ ಕೃಪೆ ತೋರುವುದಿಲ್ಲ. ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಕೂಡಾ ಮರೀಚಿಕೆಯಾಗಿರುತ್ತದೆ. ಒಂದು ವೇಳೆ ಮನೆಯಲ್ಲಿರುವ ಜನರು ಇದ್ದಕ್ಕಿದ್ದಂತೆ ದೇವರ ಭಕ್ತಿ ಮಾಡುವುದನ್ನು ನಿಲ್ಲಿಸಿದರೆ, ಧಾರ್ಮಿಕ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಿದರೆ, ಅದು ಮುಂಬರುವ ಆರ್ಥಿಕ ಬಿಕ್ಕಟ್ಟಿನ ದೊಡ್ಡ ಸಂಕೇತವಾಗಿದೆ. 

ಮನೆಯಲ್ಲಿರುವ ಹಿರಿಯರನ್ನು ಅವಮಾನಿಸಬಾರದು. ಹಿರಿಯರ ಕಾಳಜಿ ವಹಿಸದಿದ್ದರೆ, ಬಡತನವು ಅಲ್ಲಿಗೆ ಕಾಲಿಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಹಿರಿಯರನ್ನು ಗೌರವಿಸಿದ ಜಾಗದಲ್ಲಿ ಲಕ್ಷ್ಮೀ ನೆಲೆಯಾಗುವುದಿಲ್ಲವಂತೆ. ಮನೆಯಲ್ಲಿ ಹಿರಿಯರನ್ನು ಪದೇ ಪದೇ ಅವಮಾನಿಸಿದರೆ ಬಡತನ ಆ ಮನೆಯನ್ನು ಬಡಿದೆಬ್ಬಿಸುತ್ತದೆ  ಎನ್ನುತ್ತಾರೆ ಆಚಾರ್ಯ ಚಾಣಾಕ್ಯ. 

ಇದನ್ನೂ ಓದಿ : HOLI 2022: ಮೊಟ್ಟಮೊದಲ ಬಾರಿಗೆ ಹೋಳಿ ಹಬ್ಬ ಎಲ್ಲಿ ಆಚರಿಸಲಾಗಿದೆ ಗೊತ್ತಾ?

ಮನೆಯಲ್ಲಿ ನೆಟ್ಟ ತುಳಸಿ ಗಿಡ (Tulsi plant) ಹಠಾತ್ತನೆ ಒಣಗಲು ಪ್ರಾರಂಭಿಸಿದರೆ, ಅದು ಎದುರಾಗುವ ದೊಡ್ಡ ನಷ್ಟದ ಸಂಕೇತವಾಗಿರುತ್ತದೆ. ಇದು ಮುಂಬರುವ ಆರ್ಥಿಕ ಬಿಕ್ಕಟ್ಟಿನ ಸಂಕೇತವಾಗಿರಬಹುದು. ಹಾಗಾಗಿ ತುಳಸಿ ಒಣಗಿದ ಕೂಡಲೇ, ಬೇರೆ ತುಳಸಿಯನ್ನು ಬದಲಾಯಿಸಿಕೊಳ್ಳಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News