ನವದೆಹಲಿ: Ethics Of Chanakya - ಚಾಣಕ್ಯ (Chanakya Niti Kannada Version) ನೀತಿ ನಮಗೆ ನಮ್ಮ ಜೀವನವನ್ನು ಹೇಗೆ ಉತ್ತಮವಾಗಿ ಮತ್ತು ಸಂತೋಷವಾಗಿ ಎಂಬುದನ್ನು ಹೇಳಿಕೊಡುತ್ತದೆ. ಇದರೊಂದಿಗೆ, ಜೀವನವನ್ನು ಹದಗೆಡಿಸುವಂತಹ ಸಂಗತಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಕುರಿತು ಸಲಹೆಯನ್ನು ನೀಡುತ್ತದೆ. ಒಬ್ಬ ವ್ಯಕ್ತಿಯು ಈ ಸಂಗತಿಗಳಿಂದ  ದೂರ ಉಳಿಯದಿದ್ದರೆ, ಅವನ ಜೀವನವು ತುಂಬಾ ದುಃಖಕರವಾಗಿರುತ್ತದೆ ಮತ್ತು ಸಂಘರ್ಷದಿಂದ ಕೂಡಿರುತ್ತದೆ. ಇಂದು ನಾವು ಅಂತಹ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದು, ಒಬ್ಬ ವ್ಯಕ್ತಿಯು ಯಾವಾಗಲೂ ಅವುಗಳಿಂದ ಅಂತರ ಕಾಯ್ದುಕೊಳ್ಳಬೇಕು.  ಇಲ್ಲದಿದ್ದರೆ ಅವನು ತನ್ನ ಜೀವನವನ್ನು ಯಾವಾಗಲು ದುಃಖದಲ್ಲಿ ಮತ್ತು ಭಯದಲ್ಲಿ ಕಳೆಯಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಎಂದಿಗೂ ಕೂಡ ಇವುಗಳಿಂದ ಅಂತರ ಕಾಯ್ದುಕೊಳ್ಳಿ (Chanakya Neeti In Kannada)
ಸೋಮಾರಿತನ:
ಚಾಣಕ್ಯ ನೀತಿಯ ಪ್ರಕಾರ, ಸೋಮಾರಿತನದಿಂದ ಯಾವಾಗಲೂ ದೂರವಿರಬೇಕು. ಏಕೆಂದರೆ ಸೋಮಾರಿತನವು ವ್ಯಕ್ತಿಯನ್ನು ಇತರರ ಮೇಲೆ ಅವಲಂಬಿತವಾಗಿಸುತ್ತದೆ, ವ್ಯಕ್ತಿಯ ಪ್ರತಿಭೆಯನ್ನು ನಾಶಪಡಿಸುತ್ತದೆ. ಇದರಿಂದ ವ್ಯಕ್ತಿ ತನ್ನ ಸ್ವಾಭಿಮಾನವನ್ನು ಕಳೆದುಕೊಳ್ಳುತ್ತಾನೆ. ಅಂತಹ ವ್ಯಕ್ತಿಯ ಜೀವನವು ಗುರಿಯಿಲ್ಲದಂತಾಗುತ್ತದೆ ಮತ್ತು ಅವನು ಯಾವಾಗಲೂ ದುಃಖದಲ್ಲಿ ಬದುಕುತ್ತಾನೆ.


ನೆಪ: ಸೋಗು ಎನ್ನುವುದು ವ್ಯಕ್ತಿಯನ್ನು ಅನೇಕ ಸುಳ್ಳುಗಳನ್ನು ಹೇಳಲು ಮತ್ತು ತಪ್ಪು ಕೆಲಸಗಳನ್ನು ಮಾಡಲು ಒತ್ತಾಯಿಸುತ್ತದೆ. ಸೋಗು ಹಾಕಿಕೊಳ್ಳುವ  ವ್ಯಕ್ತಿ ಎಂದಿಗೂ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಅವನು ಯಾವಾಗಲೂ ಸತ್ಯದ ಮುಂದೆ ಬರಲು ಹೆದರುತ್ತಾನೆ. ಈ ಕಾರಣದಿಂದಾಗಿ, ಅವನು ಅನೇಕ ಬಾರಿ ಅಪರಾಧಗಳನ್ನು ಕೂಡ ಮಾಡುತ್ತಾನೆ.


ಕೋಪ: ಕೋಪಗೊಂಡ ವ್ಯಕ್ತಿಯು ಇತರರಿಗಿಂತ ತನಗೆ ತಾನೇ ಹಾನಿ ಹೆಚ್ಚು ಮಾಡಿಕೊಳ್ಳುತ್ತಾನೆ. ಅವರ ಇಮೇಜ್ ಕೂಡ ಇತರರ ಮುಂದೆ ಹಾಳಾಗುತ್ತದೆ. ಜನರು ಅವನಿಂದ ದೂರ ಉಳಿಯುತ್ತಾರೆ. ಇಂತಹ ವ್ಯಕ್ತಿಯು ಕೆಟ್ಟ ಸಮಯದಲ್ಲಿ ಒಂಟಿಯಾಗುತ್ತಾನೆ ಮತ್ತು ಹೆಚ್ಚು ತೊಂದರೆಗಳನ್ನು ಪಡೆಯುತ್ತಾನೆ.


ಇದನ್ನೂ ಓದಿ-"ಚಲನಚಿತ್ರಗಳ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ": 'ಗೆಹರಾಯಿಯಾ' ಬಗ್ಗೆ ಕಂಗನಾ ಕಾಮೆಂಟ್


ಅಹಂಕಾರ: ದುರಹಂಕಾರದಿಂದಾಗಿ ರಾವಣನಂತಹ ಶಕ್ತಿಶಾಲಿ ರಾಕ್ಷಸ ರಾಜನೂ ನಾಶವಾದದ್ದು, ನಮ್ಮೆಲ್ಲರಿಗೂ ತಿಳಿದೇ ಇದೆ. ಅಹಂಕಾರವು ವ್ಯಕ್ತಿಯನ್ನು ಸತ್ಯದಿಂದ ದೂರವಿಡುತ್ತದೆ. ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಅವನಿಗೆ ಸಾಧ್ಯವಾಗುವುದಿಲ್ಲ. ಅಂತಹ ಜನರು ಜೀವನದಲ್ಲಿ ತುಂಬಾ ಬಳಲುತ್ತಿದ್ದಾರೆ.


ಇದನ್ನೂ ಓದಿ-‘ಮೆಜೆಸ್ಟಿಕ್’ ಚಿತ್ರಕ್ಕೆ 20 ವರ್ಷ: ಹಳೆಯ ದಿನಗಳನ್ನು ನೆನೆದು ದರ್ಶನ್ ಭಾವುಕ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Achyuth Kumar: ನಾಯಕನೂ.. ಮನೆಯ ನಾವಿಕನೂ.. ಅಚ್ಯುತ್ ಅಭಿನಯ ಅಬ್ಬಬ್ಬಾ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.