"ಚಲನಚಿತ್ರಗಳ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ ಪ್ಲೀಸ್": 'ಗೆಹರಾಯಿಯಾ' ಬಗ್ಗೆ ಕಂಗನಾ ಕಾಮೆಂಟ್

Kangana Ranawat:ಇತ್ತೀಚೆಗೆ ಬಿಡುಗಡೆಯಾದ ದೀಪಿಕಾ ಪಡುಕೋಣೆ ಅವರ 'ಗೆಹರಾಯಿಯಾ' ಚಿತ್ರದ ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಕಾಮೆಂಟ್ ಮಾಡಿದ್ದಾರೆ.

Edited by - Chetana Devarmani | Last Updated : Feb 13, 2022, 10:12 AM IST
  • "ಚಲನಚಿತ್ರಗಳ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ ಪ್ಲೀಸ್"
  • 'ಗೆಹರಾಯಿಯಾ' ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಕಾಮೆಂಟ್
  • ಇವರು ಇತ್ತೀಚೆಗೆ ಬಿಡುಗಡೆಯಾದ ದೀಪಿಕಾ ಪಡುಕೋಣೆ ಅವರ 'ಗೆಹರಾಯಿಯಾ' ಚಿತ್ರ
"ಚಲನಚಿತ್ರಗಳ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ ಪ್ಲೀಸ್":  'ಗೆಹರಾಯಿಯಾ' ಬಗ್ಗೆ ಕಂಗನಾ ಕಾಮೆಂಟ್   title=
ಗೆಹರಾಯಿಯಾ

ಮುಂಬೈ: ಸಾಮಾಜಿಕ ಮಾಧ್ಯಮದಲ್ಲಿ ಸದಾ ಒಂದಿಲ್ಲೊಂದು ಪೋಸ್ಟ್ ಹಾಕುವ ಮೂಲಕ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranawat). ಇವರು ಇತ್ತೀಚೆಗೆ ಬಿಡುಗಡೆಯಾದ ದೀಪಿಕಾ ಪಡುಕೋಣೆ ಅವರ 'ಗೆಹರಾಯಿಯಾ' ಚಿತ್ರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. 

ಶನಿವಾರ ತಮ್ಮ Instagram ಖಾತೆಯಲ್ಲಿ ಕಂಗನಾ, "ಚಲನಚಿತ್ರಗಳ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ ಪ್ಲೀಸ್" ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: "ಮನಸ್ಸಿನಲ್ಲಿ ನಾನು ಈಗಾಗಲೇ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದೇನೆ": ಆಲಿಯಾ ಭಟ್

"ನಾನು ಸಹ ಸಹಸ್ರಮಾನದವಳು. ಆದರೆ ನಾನು ಈ ರೀತಿಯ ಪ್ರಣಯವನ್ನು ಗುರುತಿಸುತ್ತೇನೆ ಮತ್ತು ಅರ್ಥಮಾಡಿಕೊಳ್ಳುತ್ತೇನೆ. ಸಿನಿಮಾಗಳ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ ಪ್ಲೀಸ್... ಕೆಟ್ಟ ಚಲನಚಿತ್ರಗಳೆಂದ ಅವು ಕೆಟ್ಟವು ಎಂದೇ ಅರ್ಥ. ಯಾವುದೇ ಸ್ಕಿನ್ ಶೋ ಅಥವಾ ಅಶ್ಲೀಲತೆಯು ಅದನ್ನು ಉಳಿಸಲು ಸಾಧ್ಯವಿಲ್ಲ. ಇದು ಮೂಲಭೂತ ಸತ್ಯ... ಕೋಯಿ 'ಗೆಹರಾಯಿಯಾ' (Gehraiyaan) ವಾಲಿ ಬಾತ್ ನಹೀ ಹೈ" ಎಂದು ಬರೆದುಕೊಂಡಿದ್ದಾರೆ. 

ಅದರೊಂದಿಗೆ, ಅವರು 1965 ರ ಚಲನಚಿತ್ರ 'ಹಿಮಾಲಯ್ ಕಿ ಗಾಡ್ ಮೇ' (Himalay Ki God Mein) ನ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.

Kangana Post

ಏತನ್ಮಧ್ಯೆ, ಯಾಮಿ ಗೌತಮ್ ಮತ್ತು ಸನ್ಯಾ ಮಲ್ಹೋತ್ರಾ ಅವರಂತಹ ಇತರ ನಟರು ಸಾಮಾಜಿಕ ಮಾಧ್ಯಮದಲ್ಲಿ 'ಗೆಹರಾಯಿಯಾ' ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶಕುನ್ ಬಾತ್ರಾ ನಿರ್ದೇಶಿಸಿದ ಈ ಚಲನಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone), ಸಿದ್ಧಾಂತ್​ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವ, ನಾಸಿರುದ್ದೀನ್ ಶಾ ಮೊದಲಾದವರು ನಟಿಸಿದ್ದಾರೆ.  ಆಧುನಿಕ ಜಗತ್ತಿನ ಸಂಬಂಧಗಳು ಎಷ್ಟು ಗೊಂದಲಮಯವಾಗುತ್ತಿದೆ ಎಂಬುದನ್ನು ಇಡೀ ಸಿನಿಮಾದಲ್ಲಿ ಬಿಡಿಬಿಡಿಯಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. 

ಇದನ್ನೂ ಓದಿ:ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಬಗ್ಗೆ ಜಗ್ಗೇಶ್‌ ಭಾವನಾತ್ಮಕ ಬರಹ

ಕರಣ್ ಜೋಹರ್ (Karan Johar) ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಚಲನಚಿತ್ರವು ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಯಿತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News