Chanakya Niti In Kannada: ಅರ್ಥಶಾಸ್ತ್ರ, ರಾಜತಾಂತ್ರಿಕತೆ, ರಾಜಕೀಯಮಾತ್ರವಲ್ಲದೆ ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ಪ್ರಾಯೋಗಿಕ ವಿಷಯಗಳ ಕುರಿತು ಕೂಡ ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಪುರುಷರು ಮತ್ತು ಮಹಿಳೆಯರ ನಡುವಳಿಕೆ ಯಾವ ರೀತಿ ಇರಬೇಕು ಎಂಬುದನ್ನು ಅವರು ತನ್ನ ನೀತಿಯಲ್ಲಿ ಹೇಳಿದ್ದಾರೆ. ಮಹಿಳೆಯರು ಕೆಲವು ಕೆಲಸಗಳನ್ನು ಮಾಡುವಾಗ ಪುರುಷರು ಮಹಿಳೆಯರನ್ನು ಎಂದಿಗೂ ಕೊಡ ನೋಡಬಾರದು ಎಂದು ಆಚಾರ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ. ಧಾರ್ಮಿಕ ಗ್ರಂಥಗಳಲ್ಲಿಯೂ ಕೂಡ ಇಂತಹ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.


COMMERCIAL BREAK
SCROLL TO CONTINUE READING

ಈ ಕೆಲಸ ಮಾಡುತ್ತಿರುವ ಮಹಿಳೆಯನ್ನು ಎಂದಿಗೂ ನೋಡಬೇಡಿ.
>> ಚಾಣಕ್ಯ ನೀತಿಯ ಪ್ರಕಾರ, ಮಹಿಳೆ ಊಟ ಮಾಡುವಾಗ, ಪುರುಷ ನೋಡಬಾರದು ಎನ್ನಲಾಗಿದೆ. ಏಕೆಂದರೆ, ಇದು ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಹೀಗೆ ಮಾಡುವುದರಿಂದ ಮಹಿಳೆಗೆ ಮುಜುಗರ ಉಂಟಾಗುತ್ತದೆ ಮತ್ತು ಆಕೆ ಸರಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ.


>> ಮಹಿಳೆ ಸೀನುತ್ತಿದ್ದರೂ ಅಥವಾ ಆಕಳಿಸುತ್ತಿದ್ದರೂ ಸಹ, ಪುರುಷನು ಅವಳನ್ನು ನೋಡಬಾರದು.


>> ಮಹಿಳೆ ತನ್ನ ಬಟ್ಟೆಗಳನ್ನು ಸರಿಪಡಿಸುತ್ತಿರುವ ವೇಳೆಯೂ ಕೂಡ ಪುರುಷರು ನೋಡಬಾರದು ಎಂದು ಹೇಳಲಾಗಿದೆ. ಇಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ತನ್ನ ಘನತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಅಲ್ಲಿಂದ ದೂರಕ್ಕೆ ಹೋಗಬೇಕು.


>> ಮಹಿಳೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವಾಗ, ಮಗುವಿಗೆ ಹಾಲುಣಿಸುವಾಗ ಅಥವಾ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿಯೂ ಕೂಡ ಪುರುಷನು ಮಹಿಳೆಯತ್ತ ನೋಡಬಾರದು.


ಇದನ್ನೂ ಓದಿ-Money Plant ಗೆ ಸಂಬಂಧಿಸಿದ ಈ ತಪ್ಪು ಬಡವನನ್ನಾಗಿಸುತ್ತದೆ... ಎಚ್ಚರ!


>> ಮಹಿಳೆ ತನ್ನ ಕಣ್ಣುಗಳಿಗೆ ಕಾಡಿಗೆ ಅಥವಾ ಮುಖಕ್ಕೆ ಮೇಕ್ಅಪ್ ಅನ್ನು ಅನ್ವಯಿಸುವಾಗ, ಪುರುಷನು ಅವಳನ್ನು ನೋಡಬಾರದು. ಪುರುಷ ಈ ಸಮಯದಲ್ಲಿ ಮಹಿಳೆಯನ್ನು ನೋಡುವುದು ಅವನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಹೀಗಿರುವಾಗ ಮನುಷ್ಯ ಅಲ್ಲಿಂದ ದೂರ ಹೋದರೆ ಉತ್ತಮ.


ಇದನ್ನೂ ಓದಿ-Numerology: ಈ ದಿನಾಂಕದಂದು ಜನಿಸಿದವರಿಗೆ ಅದೃಷ್ಟದ ಜೊತೆಗೆ ಧನಲಾಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.