Money Plant ಗೆ ಸಂಬಂಧಿಸಿದ ಈ ತಪ್ಪು ಬಡವನನ್ನಾಗಿಸುತ್ತದೆ... ಎಚ್ಚರ!

Money Plant Vastu: ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ. ಆದರೆ, ಅದನ್ನು ನೆಡುವಾಗ ಮಾಡುವ ತಪ್ಪು ವ್ಯಕ್ತಿಯನ್ನು ಬಡವನನ್ನಾಗಿಸುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹಾಗಾದರೆ ಬನ್ನಿ, ಮನಿ ಪ್ಲಾಂಟ್ ಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದ ನಿಯಮಗಳು ಏನು ಹೇಳುತ್ತವೆ ತಿಳಿದುಕೊಳ್ಳೋಣ,  

Written by - Nitin Tabib | Last Updated : Aug 7, 2022, 02:33 PM IST
  • ಮನೆಯ ಸುಖ-ಸಮೃದ್ಧಿಗಾಗಿ ಪಡೆಯಲು ಒಂದು ವೇಳೆ ನೀವೂ ಕೂಡ ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ನೆಡುತ್ತಿದ್ದರೆ,
  • ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ.
  • ಇಲ್ಲದಿದ್ದರೆ ಮನಿ ಪ್ಲಾಂಟ್ ಲಾಭದ ಬದಲು ಹಾನಿ ಉಂಟು ಮಾಡಬಹುದು.
Money Plant ಗೆ ಸಂಬಂಧಿಸಿದ ಈ ತಪ್ಪು ಬಡವನನ್ನಾಗಿಸುತ್ತದೆ... ಎಚ್ಚರ! title=
Money Plant Vastu Rules

Vastu for Money Plant: ಸುಖ-ಸಮೃದ್ಧಿಗಾಗಿ ಪಡೆಯಲು ಒಂದು ವೇಳೆ ನೀವೂ ಕೂಡ ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ನೆಡುತ್ತಿದ್ದರೆ, ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಇಲ್ಲದಿದ್ದರೆ ಮನಿ ಪ್ಲಾಂಟ್ ಲಾಭದ ಬದಲು ಹಾನಿ ಉಂಟು ಮಾಡಬಹುದು. ಮನೆಯಲ್ಲಿ ತಪ್ಪಾದ ಸ್ಥಳದಲ್ಲಿ ನೆಡಲಾಗಿರುವ ಅಥವಾ ತಪ್ಪಾದ ಸ್ಥಳದಲ್ಲಿ ಇರಿಸಲಾಗಿರುವ ಮನಿ ಪ್ಲಾಂಟ್ ನಿಮ್ಮನ್ನು ಬಡವಾಗಿಸುತ್ತದೆ ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮನೆಯ ಜನರ ಮೇಲೆ ಸಾಲದ ಹೊರೆ ಹೆಚ್ಚಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ಸ್ಥಾಪಿಸಲು ಬಯಸುತ್ತಿದ್ದರೆ, ವಾಸ್ತು ಶಾಸ್ತ್ರದಲ್ಲಿ ನೀಡಲಾದ ನಿಯಮಗಳನ್ನು ಅನುಸರಿಸಬೇಕು.

ಮನಿ ಪ್ಲಾಂಟ್ ಅನ್ನು ಇಡುವಾಗ ಅಥವಾ ನೆಡುವಾಗ ಈ ವಿಷಯಗಳನ್ನು  ನೆನಪಿನಲ್ಲಿಡಿ
>> ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ಎಂದಿಗೂ ಇಡಬೇಡಿ. ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಶ್ರೇಯಸ್ಕರ.

>> ಮನೆಯಲ್ಲಿ ಒಣಗಿರುವ ಮನಿ ಪ್ಲಾಂಟ್ ಅನ್ನು ಎಂದಿಗೂ ನೆಡಬೇಡಿ. ಒಣ ಎಲೆಗಳನ್ನು ಹೊಂದಿರುವ ಮನಿ ಪ್ಲಾಂಟ್ ಮನೆಯಲ್ಲಿ ದುರದೃಷ್ಟವನ್ನು ತರುತ್ತದೆ. ಒಣ ಎಲೆಗಳನ್ನು ಬೇರ್ಪಡಿಸುವುದು ಅಥವಾ ಮನಿ ಪ್ಲಾಂಟ್ ಅನ್ನು ಬದಲಾಯಿಸುವುದು ಉತ್ತಮ.

>> ಮನಿ ಪ್ಲಾಂಟ್‌ನ ಬಳ್ಳಿಯು ಎಂದಿಗೂ ಮೇಲಿನಿಂದ ಕೆಳಕ್ಕೆ ನೇತಾಡಬಾರದು, ಬದಲಿಗೆ ಅದನ್ನು ಕಡ್ಡಿ ಅಥವಾ ದಾರದ ಸಹಾಯದಿಂದ ಮೇಲಕ್ಕೆ ಎತ್ತಬೇಕು. ಈ ಕಾರಣದಿಂದಾಗಿ, ಮನೆಯ ಜನರು ವೇಗವಾಗಿ ಪ್ರಗತಿ ಹೊಂದುತ್ತಾರೆ, ಇಲ್ಲದಿದ್ದರೆ ಅವರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

>> ಮನಿ ಪ್ಲಾಂಟ್ ಅನ್ನು ಮನೆಯ ಹೊರಗೆ ಇಡಬಾರದು. ಅಲಂಕಾರಕ್ಕೆ ಕೂಡ ಮನಿ ಪ್ಲಾಂಟ್ ಅನ್ನು ಮನೆಯ ಹೊರಗೆ ಇಡಬೇಡಿ. ಮನಿ ಪ್ಲಾಂಟ್ ಅನ್ನು ಯಾವಾಗಲೂ ಮನೆಯೊಳಗೆ ಇಡಬೇಕು.

ಇದನ್ನೂ ಓದಿ-Numerology: ಈ ದಿನಾಂಕದಂದು ಜನಿಸಿದವರಿಗೆ ಅದೃಷ್ಟದ ಜೊತೆಗೆ ಧನಲಾಭ

>> ಪ್ಲಾಸ್ಟಿಕ್ ಬಾಟಲಿಯಲ್ಲಿ ಮನಿ ಪ್ಲಾಂಟ್ ಹಾಕಬೇಡಿ. ಇದನ್ನು ಗಾಜಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ಹಾಕುವುದು ಶುಭ.

ಇದನ್ನೂ ಓದಿ-Astro: ಈ ರಾಶಿಗಳ ಜನರ ಭಾಗ್ಯ ಬದಲಾಗಲು ಇನ್ನೂ ಕೆಲವೇ ಗಂಟೆಗಳು ಬಾಕಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News