ನವದೆಹಲಿ : ಜಗತ್ತಿನ ಮಹಾನ್ ವಿದ್ವಾಂಸರಾದ ಆಚಾರ್ಯ ಚಾಣಕ್ಯ ಅವರು ಹಣ, ಆರೋಗ್ಯ, ವ್ಯಾಪಾರ, ವೈವಾಹಿಕ ಜೀವನ, ಸ್ನೇಹ, ಮತ್ತು ಸಮಾಜಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾರೆ (Chanakya Niti). ಅವರ ಈ ನೀತಿಗಳು ವ್ಯಕ್ತಿಯನ್ನು ಅನೇಕ ಕಷ್ಟಗಳಿಂದ ರಕ್ಷಿಸುತ್ತವೆ ಮತ್ತು ಅವನಿಗೆ ಯಶಸ್ವಿ ಜೀವನವನ್ನು ನೀಡುತ್ತವೆ. ಆಚಾರ್ಯ ಚಾಣಕ್ಯ ಹೇಳುವಂತೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಸುಖ-ದುಃಖಗಳು ಬರುತ್ತಲೇ ಇರುತ್ತವೆ (Chanakya niti for success). ಆದರೆ ಅಂಥಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಅತ್ಯಂತ ದುಃಖದ ಸಮಯದಲ್ಲಿಯೂ ವ್ಯಕ್ತಿಯು ಕೆಲವೊಂದು  ವಿಷಯದ ಬಗ್ಗೆ ಜಾಗರೂಕರಾಗಿರಬೇಕು. ತನ್ನ ಕೆಲವು ರಹಸ್ಯಗಳನ್ನು ತಪಪ್ಪಿಯೂ ಬಹಿರಂಗಪಡಿಸಬಾರದು. 


COMMERCIAL BREAK
SCROLL TO CONTINUE READING

ದುಃಖದಲ್ಲಿಯೂ  ಇಂಥಹ ಮಾತುಗಳು ಬರದಿರಲಿ : 
ಚಾಣಕ್ಯ ನೀತಿಯ ಪ್ರಕಾರ (Chanakya niti), ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವುದೇ ದೊಡ್ಡ ದುಃಖ ಅಥವಾ ತೊಂದರೆ ಇದ್ದರೂ, ಅವನು ತನ್ನ ಬಾಯಿಂದ ಕೆಲವು ವಿಷಯಗಳನ್ನು ಹೊರತೆಗೆಯಬಾರದು. 


ಆಚಾರ್ಯ ಚಾಣಕ್ಯ ಪ್ರಕಾರ, ಒಬ್ಬ ವ್ಯಕ್ತಿಯು ಆರ್ಥಿಕವಾಗಿ ಎಷ್ಟೇ ದೊಡ್ಡ ನಷ್ಟವನ್ನು ಅನುಭವಿಸಿದರೂ, ಅದನ್ನು ಯಾರಿಗೂ ಹೇಳಬಾರದು. ಇಲ್ಲದಿದ್ದರೆ ಜನರು ತಕ್ಷಣವೇ ನಿಮ್ಮಿಂದ ದೂರವಾಗಲು ಪ್ರಾರಂಭಿಸುತ್ತಾರೆ (Chanakya niti for success). 


ಇದನ್ನೂ ಓದಿ : Fate Line Palmistry: ಇಂತಹ ಜನರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ!


ಹೆಂಡತಿಯಲ್ಲಿ ಏನಾದರೂ ದೋಷವಿದ್ದರೆ ಅಥವಾ ಪತ್ನಿ ನಿಮ್ಮನ್ನು ಅವಮಾನಿಸಿದರೆ, ಈ ವಿಷಯ ಪತಿ ಪತ್ನಿಯ ಮಧ್ಯೆಯೇ ಇರಲಿ (Chanakya niti about life). ಇದನ್ನು ಬೇರೆಯವರಿಗೆ ಹೇಳಬೇಡಿ ಅದು ನಿಮ್ಮ ಇಮೇಜ್ ಅನ್ನು ಹಾಳು ಮಾಡುತ್ತದೆ. . ಇನ್ನು ನಿಮ್ಮನ್ನ ಯಾರಾದರು ಅವಮಾನಿಸಿದರೆ ಕೂಡಾ ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಹೋಗಬೇಡಿ (Chanakya niti about wife). 


ಇನ್ನು ಜೀವನದಲ್ಲಿ ದುಃಖದಿಂದ ಹೊರಬರಲು ಸಹಾಯವಾಗುವ ಅಂಶಗಳ ಬಗ್ಗೆಯೂ ಚಾಣಾಕ್ಯ ಹೇಳುತ್ತಾರೆ. ಚಾಣಕ್ಯ ನೀತಿಯ ಪ್ರಕಾರ (Chanakya niti for life), ಜ್ಞಾನ, ಉತ್ತಮ ಆರೋಗ್ಯ ಮತ್ತು ಹೆಂಡತಿಯ ಬೆಂಬಲವು ಒಬ್ಬ ವ್ಯಕ್ತಿಗೆ ಪ್ರತಿ ದುಃಖವನ್ನು ಜಯಿಸಲು ಮತ್ತು ದೊಡ್ಡ ಸವಾಲನ್ನು ಎದುರಿಸಲು ಪ್ರಮುಖ ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಮೂರು ವಿಷಯಗಳ ಸಹಾಯದಿಂದ, ಅವನು ತನ್ನ ಜೀವನವನ್ನು ಸುಲಭವಾಗಿ  ಗೆಲ್ಲಬಹುದು. ಯಶಸ್ಸಿನ ಉತ್ತುಂಗಕ್ಕೆ ಏರಬಹುದು.  


ಇದನ್ನೂ ಓದಿ : ಜಾತಕದಲ್ಲಿ ಈ ಯೋಗವಿದ್ದರೆ ಆಯುಷ್ಯಕ್ಕೆ ಕಂಟಕ..!


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕ ರಿಸುವುದಿಲ್ಲ .


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.